ಚೀನಾ ಸರಕಾರದ ದೌರ್ಜನ್ಯದಿಂದ “ಉಯಿಗರ್ ಮುಸ್ಲಿಂ” ಜನಾಂಗ ಅವಸಾನದತ್ತ ?

0

ಬೀಜಿಂಗ್ : ವಿಶ್ವಕ್ಕೆ ಕೊರೊನಾ ವೈರಸ್ ಸೋಂಕನ್ನು ಪಸರಿಸಿರುವ ಚೀನಾ ಗಡಿ ವಿಚಾರದಲ್ಲಿ ಭಾರತದ ವಿರುದ್ದ ಬೆಂಕಿಯುಗುಳುತ್ತಿದೆ. ಚೀನಾದ ವಿರುದ್ದ ವಿಶ್ವದ ಬಹುತೇಕ ರಾಷ್ಟ್ರಗಳು ತಿರುಗಿ ಬಿದ್ದಿವೆ. ಕೆಂಪು ದೇಶ ಚೀನಾದ ದಬ್ಬಾಳಿಕೆ ವಿಶ್ವದ ಇತರ ರಾಷ್ಟ್ರಗಳಿಗಷ್ಟೇ ಅಲ್ಲಾ ಸ್ವತಃ ಚೀನಾದಲ್ಲಿ ನಲೆಸಿರುವ ಉಯಿಗರ್ ಮುಸ್ಲೀಮರ ಮೇಲೆಯೂ ನಡೆಯುತ್ತಿದ್ದು, 10 ಲಕ್ಷ ಉಯಿಗರ್ ಮುಸ್ಲಿಂ ಜನಾಂಗ ಇದೀಗ ಅಪಾಯಕ್ಕೆ ಸಿಲುಕಿದೆ.

ಚೀನಾದಲ್ಲಿ ಉಯಿಗರ್ ಮುಸ್ಲೀಂ ಸಮುದಾಯವರು ಸುಮಾರು 1,300ಗಳಿಂದಲೂ ನೆಲೆಸಿದ್ದಾರೆ. ಚೀನಾದಲ್ಲಿರುವ ಜನಸಂಖ್ಯೆಯಲ್ಲಿ ಶೇ.0.45 ರಿಂದ 2.85 % ರಷ್ಟು ಉಯಿಗರ್ ಜನಾಂಗವಿದ್ದು, 60 ರಿಂದ 80 ಲಕ್ಷದಷ್ಟು ನಿವಾಸಿಗಳು ಚೀನಾದಲ್ಲಿ ನೆಲೆಸಿದ್ದಾರೆ.

ಆದರೆ ಕೆಲ ವರ್ಷಗಳಿಂದಲೂ ಉಯಿಗರ್ ಮುಸ್ಲೀಮರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಚೀನಾದ ವಿಗರ್ ಪ್ರಾಂತ್ಯದಲ್ಲಿ ನೆಲೆಸಿರುವ ಮುಸ್ಲಿಮರ ಮೇಲೆ ಚೀನಾ ಕೆಟ್ಟದಾಗಿ ದೌರ್ಜನ್ಯ ನಡೆಸುತ್ತಿದೆ.

ಸಾಮೂಹಿಕ ಪ್ರಾರ್ಥನೆ, ಅರೇಬಿಕ್ ನಾಮಫಲಕ ಸೇರಿದಂತೆ ಹಲವು ವಿಷಯಗಳ ಮೇಲೆ ನಿರ್ಬಂಧ ವಿಧಿಸುತ್ತಿದ್ದ ಚೀನಾ ಇದೀಗ ಮುಸ್ಲೀಂ ಮಹಿಳೆಯರ ಸಂತಾನಹರಣ, ಬಂಧಿಖಾನೆಯಲ್ಲಿ ಬಂದಿಯಾಗಿ ಇಡುವುದು, ಮಹಿಳೆಯರ ಗರ್ಭಪಾತ, ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಅಧ್ಯಕ್ಷ ಜಿನ್ ಪಿಂಗ್ ಸ್ವತಃ ಉಗ್ರವಾದವನ್ನು ಪ್ರತಿಪಾದಿಸುತ್ತಿದ್ದು, ಮುಸ್ಲೀಮರ ಮೇಲೆ ದೌರ್ಜನ್ಯವೆಸಗಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಹೀಗಾಗಿಯೇ ಚೀನಾದ ಹಲವು ಕಡೆಗಳಲ್ಲಿ ದಿಗ್ಬಂದನ ಕೇಂದ್ರಗಳನ್ನು ತೆರೆಯಲಾಗಿದೆ. ಲಕ್ಷಾಂತರ ಮಂದಿಯನ್ನು ಬಂಧನದಲ್ಲಿಡಲಾಗಿದೆ.

ಚೀನಾದ ಆನ್ ಜನಾಂಗದ ಸಂಸ್ಕೃತಿಗೆ ಬಹು ದೂರದಲ್ಲಿರುವ ಉಯಿಗರ್ ಮುಸ್ಲಿಂ ಜನಾಂಗ ಅಲ್ಪಸಂಖ್ಯಾತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚೀನಾ ಸರಕಾರ ಉಯಿಗರ್ ಮುಸ್ಲೀಂ ಸಮುದಾಯದವರ ಎಲ್ಲಾ ಹಕ್ಕುಗಳನ್ನು ದಮನ ಮಾಡಿ ಇತಿಹಾಸದಲ್ಲಿ ಎಲ್ಲೂ ನಡೆಯದ ದೌರ್ಜನ್ಯ ಎಸಗುತ್ತಿದೆ.

ಟರ್ಕಿ ಹತ್ತಿರದಲ್ಲಿರುವ ಈ ಪ್ರಾಂತ್ಯ ಒಂದು ಕಾಲದಲ್ಲಿ ಸ್ವತಂತ್ರ ರಾಷ್ಟ್ರವಾಗಿತ್ತು. ಚೀನಾದ ಪಶ್ಚಿಮ ಭಾಗದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ವಿಗರ್ ಪ್ರಾಂತ್ಯವನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಂಡಿದೆ. 2009ರಿಂದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ನಿರ್ಬಂಧಗಳನ್ನು ಹೇರಲು ಮತ್ತು ಹೆಜ್ಜೆ ಹೆಜ್ಜೆಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲು ಚೀನಾ ಸರ್ಕಾರ ಆರಂಭಿಸಿತು.

ಹೆಚ್ಚಾಗಿ ಮಹಿಳೆಯರು ಮಕ್ಕಳನ್ನು ಪಡೆಯದ ಹಾಗೆ ನೋಡಿಕೊಳ್ಳುತ್ತಿದೆ. ಆ ಮೂಲಕ ವಿಗರ್ ಮುಸ್ಲಿಂ ಜನಾಂಗದ ಸರ್ವನಾಶದ ಕೆಲಸ ಮಾಡುತ್ತಿದೆ. ಉಯಿಗರ್ ಮುಸ್ಲೀಂ ಸಮುದಾಯ ಈಗಾಗಲೇ ಚೀನಾ ಸರಕಾರದ ವಿರುದ್ದ ಹೋರಾಟವನ್ನು ನಡೆಸುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳು ಕೂಡ ಚೀನಾದ ಈ ಕೃತ್ಯವನ್ನು ಖಂಡಿಸಿವೆ.

Leave A Reply

Your email address will not be published.