Star Sports ನಲ್ಲಿ ಪ್ರಸಾರವಾಗಲ್ಲ ಐಪಿಎಲ್ ! ಹೊಸ ಬ್ರಾಡ್ ಕಾಸ್ಟಿಂಗ್ ರೈಟ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ

ಬೆಂಗಳೂರು: ಮುಂದಿನ ವರ್ಷದ ಐಪಿಎಲ್ (IPL) ಟೂರ್ನಿ ಸ್ಟಾರ್ ಸ್ಪೋರ್ಟ್ಸ್ (Star Sports) ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ. ಯಾಕಂದ್ರೆ ಐಪಿಎಲ್ ಜೊತಿನ ಸ್ಟಾರ್ ಇಂಡಿಯಾ ಬ್ರಾಡ್ ಕಾಸ್ಟಿಂಗ್ ರೈಟ್ಸ್ ( IPL broadcasting rights) ಒಪ್ಪಂದ 2022ಕ್ಕೆ ಮುಕ್ತಾಯಗೊಂಡಿದೆ. 2017ರಲ್ಲಿ ಸ್ಟಾರ್ ಇಂಡಿಯಾ ಸಂಸ್ಥೆ 2018-22ರ ಐಪಿಎಲ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ಬರೋಬ್ಬರಿ 16,347 ಕೋಟಿ ರೂಪಾಯಿಗಳಿಗೆ ತನ್ನದಾಗಿಸಿಕೊಂಡಿತ್ತು.

2023 ರಿಂದ 27ನೇ ಸಾಲಿನ ಬ್ರಾಡ್ ಕಾಸ್ಟಿಂಗ್ ಹಕ್ಕಿಗಾಗಿ ಬಿಸಿಸಿಐ (BCCI) ಬಿಡ್ಡಿಂಗ್ ಪ್ರಕ್ರಿಯೆ ಆರಂಭಿಸಿದೆ. ಈ ಬಾರಿ ಐಪಿಎಲ್ ಪ್ರಸಾರ ಹಕ್ಕು ಕಳೆದ ಬಾರಿಗಿಂತಲೂ ಹೆಚ್ಚು ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಗಳಿವೆ. ಈಗಾಗ್ಲೇ ಸೋನಿ (Sony), ಡಿಸ್ನಿ ಸ್ಟಾರ್ (Desney Star), ಅಮೇಜಾನ್ (Amazon)ಮತ್ತು ರಿಲಯನ್ಸ್ (Reliance) ಸಂಸ್ಥೆಗಳು ಐಪಿಎಸ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ಪಡೆಯಲು ತುದಿಗಾಲಲ್ಲಿ ನಿಂತಿವೆ.

ಬ್ರಾಡ್ ಕಾಸ್ಟಿಂಗ್ (IPL broadcasting rights) ಹರಾಜು ಯಾವಾಗ ?

ಐಪಿಎಲ್ ಬ್ರಾಡ್ ಕ್ರಾಸ್ಟಿಂಗ್ ರೈಟ್ಸ್ ಹರಾಜು ಪ್ರಕ್ರಿಯೆ ಭಾನುವಾರ ಮುಂಬೈನಲ್ಲಿ ನಡೆಯಲಿದೆ. ಈ ಪ್ರಕ್ರಿಯೆ ಇ-ಹರಾಜಿನ ಮೂಲಕ ನಡೆಯಲಿದ್ದು, ಭಾನುವಾರ ಬೆಳಗ್ಗೆ 11ಗಂಟೆಗೆ ಆರಂಭವಾಗಲಿದೆ.

IPL broadcasting rights : 4 ಪ್ಯಾಕೇಜ್ ಸಿಸ್ಟಮ್

ಇನ್ನು ಮುಂದೆ ಐಪಿಎಲ್’ನ ಎಲ್ಲಾ ಪಂದ್ಯಗಳು ಒಂದೇ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ. ಕಾರಣ ಬಿಸಿಸಿಐ ಸಿದ್ಧಪಡಿಸಿರುವ 4 ಪ್ಯಾಕೇಜ್ ಸಿಸ್ಟಮ್. A, B, C ಮತ್ತು D ಎಂಬ ನಾಲ್ಕು ಪ್ಯಾಕೇಜ್”ಗಳಲ್ಲಿ ಐಪಿಎಲ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ.
ಪ್ಯಾಕೇಜ್ A: ಭಾರತೀಯ ಉಪಖಂಡದ ಟಿವಿ ಹಕ್ಕು
ಪ್ಯಾಕೇಜ್ B: ಭಾರತೀಯ ಉಪಖಂಡಕ್ಕೆ ಮಾತ್ರ ಡಿಜಿಟಲ್ ಹಕ್ಕು
ಪ್ಯಾಕೇಜ್ C: ಭಾರತೀಯ ಉಪಖಂಡಕ್ಕೆ ಮಾತ್ರ ಪ್ಲೇಆಫ್ ಸೇರಿದಂತೆ ಕೆಲ ಪಂದ್ಯಗಳ ಡಿಜಿಟಲ್ ಹಕ್ಕು.
ಪ್ಯಾಕೇಜ್ D: ಭಾರತೀಯ ಉಪಖಂಡ ಹೊರತು ಪಡಿಸಿ ಪ್ರಪಂಚದ ಉಳಿದ ಭಾಗಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕು.

ಪ್ಯಾಕೇಜ್ C ವಿಶೇಷತೆ

ಪ್ಯಾಕೇಜ್ C ‘ಸ್ಪೆಷಲ್ ಪ್ಯಾಕೇಜ್’ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪ್ಯಾಕೇಜ್‌ನಲ್ಲಿನ ಪಂದ್ಯಗಳ ಸಂಖ್ಯೆ, ಐಪಿಎಲ್ ಋತುವಿನಲ್ಲಿನ ಒಟ್ಟು ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಬದಲಾಗುತ್ತದೆ. 2022ರಂತೆ ಐಪಿಎಲ್’ನಲ್ಲಿ 74 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ 18 ಪಂದ್ಯಗಳನ್ನು ಹೊಂದಿರುತ್ತದೆ. ಒಂದು ಋತುವಿನಲ್ಲಿ 74 ಕ್ಕಿಂತ ಹೆಚ್ಚು ಪಂದ್ಯಗಳು ಇದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು ಪ್ರತಿ ಹೆಚ್ಚುವರಿ 10 ಪಂದ್ಯಗಳಿಗೆ ಎರಡು ಹಂತಗಳಲ್ಲಿ ಏರಿಕೆಯಾಗುತ್ತದೆ. ಒಂದು ಋತುವಿನಲ್ಲಿ 84 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು 20 ಆಗಿರುತ್ತದೆ ಮತ್ತು ಪಂದ್ಯಾವಳಿಯು 94 ಪಂದ್ಯಗಳನ್ನು ಹೊಂದಿದ್ದರೆ, ನಂತರ ವಿಶೇಷ ಪ್ಯಾಕೇಜ್ 22 ಪಂದ್ಯಗಳನ್ನು ಹೊಂದಿರುತ್ತದೆ.

ಸ್ಪೆಷಲ್ ಪ್ಯಾಕೇಜ್”ನಲ್ಲಿ ಯಾವ ಯಾವ ಪಂದ್ಯಗಳು ?

ಉದ್ಘಾಟನಾ ಪಂದ್ಯ, ವಾರಾಂತ್ಯದ ರಾತ್ರಿ ಪಂದ್ಯಗಳು, ಫೈನಲ್ ಸೇರಿದಂತೆ ನಾಲ್ಕು ಪ್ಲೇ ಆಫ್ ಪಂದ್ಯಗಳು.

ಪ್ರತಿ ಪ್ಯಾಕೇಜ್‌ಗೆ ಪ್ರತಿ ಪಂದ್ಯದ ಮೂಲ ಬೆಲೆ ಎಷ್ಟು..?

ಪ್ಯಾಕೇಜ್ A: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 49 ಕೋಟಿ.
ಪ್ಯಾಕೇಜ್ B: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 33 ಕೋಟಿ.
ಪ್ಯಾಕೇಜ್ C: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 22 ಕೋಟಿ.
ಪ್ಯಾಕೇಜ್ D: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 3 ಕೋಟಿ.

5 ವರ್ಷಗಳಿಗೆ ಪ್ರತೀ ಪ್ಯಾಕೇಜ್’ನ ಒಟ್ಟು ಮೂಲ ಬೆಲೆ ಎಷ್ಟು..?

ಪ್ಯಾಕೇಜ್ A: 74 x 49 ಕೋಟಿ x 5 (ಸೀಸನ್) = 18,130 ಕೋಟಿ.
ಪ್ಯಾಕೇಜ್ B: 12,210 ಕೋಟಿ
ಪ್ಯಾಕೇಜ್ D: 1,110 ಕೋಟಿ

ಪ್ರಮುಖ ಬಿಡ್ಡರ್’ಗಳು : ಸೋನಿ, ಡಿಸ್ನಿ ಸ್ಟಾರ್, ಅಮೇಜಾನ್, ರಿಲಯನ್ಸ್, ಝೀ, ವಯಾಕಾಮ್.

ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

ಇದನ್ನೂ ಓದಿ : Mithali Raj : ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಕ್ಕೆ ಮಿಥಾಲಿ ರಾಜ್​ ರಾಜೀನಾಮೆ

IPL broadcasting rights Star Sports IPL 2023 will not be broadcast

Comments are closed.