ಕೊರೊನಾ ಜನಕ ಚೀನಾ ಪಾಕಿಸ್ತಾನದ ಜೊತೆ ಸೇರಿ ಸಿದ್ದಪಡಿಸುತ್ತಿದ್ಯಾ ಮತ್ತೊಂದು ಮಾರಣಾಂತಿಕ ಫೀವರ್ ವೈರಸ್ !

0

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಮರಣ ಮೃದಂಗ ಬಾರಿಸಿದೆ. ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ವಿಶ್ವದ ಮುಂದುವರಿದ ದೇಶಗಳೇ ಹೆಣಗಾಡುತ್ತಿವೆ. ಇದೆಲ್ಲದರ ನಡುವಲ್ಲೇ ಕೊರೊನಾ ಜನಕ ಚೀನಾ ಮತ್ತೊಂದು ವೈರಸ್ ಸೃಷ್ಟಿಸಿ ಆ ಮೂಲಕ ಜೈವಿಕ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಚೀನಾ… ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ. ತನ್ನ ಅಸ್ತಿತ್ವಕ್ಕಾಗಿ ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಮಾರಣ ಹೋಮ ನಡೆಸೋದಕ್ಕೂ ಸಿದ್ದವಾಗಿ ನಿಂತಿದೆ ಪಾಪಿ ಚೀನಾ. ಇನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಧಿಕಾರ ದಾಹಕ್ಕೆ ತನ್ನವರನ್ನೇ ಬಲಿಕೊಟ್ಟಿದ್ದಾನೆ. ಇದೀಗ ಮತ್ತಷ್ಟು ವರ್ಷಗಳ ಆಡಳಿತ ನಡೆಸೋದಕ್ಕೆ ತನ್ನ ವಿರೋಧಿ ರಾಷ್ಟ್ರಗಳನ್ನೇ ದಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ನೇರ ಯುದ್ದ ಸಾರಿದ್ರೆ ಅದೆಲ್ಲಿ ತನಗೆ ಮುಳುವಾಗುತ್ತೋ ಅನ್ನುವ ಭಯ ಚೀನಾವನ್ನೂ ಕಾಡುತ್ತಿದೆ.

ಇದೇ ಕಾರಣಕ್ಕೆ ಚೀನಾ ಜೈವಿಕ ಯುದ್ದ ಸಾಮರ್ಥ್ಯ ಹೆಚ್ಚಳಕೆ ಕುತಂತ್ರ ಮಾಡಿದ್ದು, ಜೈವಿಕಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ಚೀನಾ ಅಪಾಯಕಾರಿಯಾಗಿರುವ ಕೊರೊನಾ ಅನ್ನೋ ವೈರಸ್ ಸೃಷ್ಟಿಸಿ ವಿಶ್ವವನ್ನೇ ಅಲುಗಾಡಿಸುತ್ತಿದೆ. ಕೊರೊನಾ ವೈರಸ್ ಮಾನವ ಸೃಷ್ಟಿ ಅನ್ನೋದು ದೃಢಪಟ್ಟಿದೆ.

ಮಾತ್ರವಲ್ಲ ಚೀನಾದ ವುಹಾನ್ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಸೃಷ್ಟಿಸಿದೆ ಅನ್ನುವುದನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದೆ. ಭಾರತ, ಅಮೇರಿಕಾದಂತಹ ರಾಷ್ಟ್ರಗಳೇ ಕೊರೊನಾವನ್ನು ಚೀನಾ ವೈರಸ್ ಅಂತಾ ಕರೆಯುತ್ತಿವೆ. ಈ ನಡುವಲ್ಲೇ ಚೀನಾ ಮತ್ತೆ ನರಿಬುದ್ದಿ ತೋರಿಸೋದಕ್ಕೆ ಮುಂದಾಗಿದ್ದು, ಶತ್ರು ರಾಷ್ಟ್ರಗಳ ಮೇಲೆ ಮತ್ತೊಂದು ವೈರಸ್ ಸೃಷ್ಟಿಸಿ ದಾಳಿಗೆ ಮುಂದಾಗಿದೆ.

ಭಾರತ, ಅಮೇರಿಕಾ, ಇಟಲಿ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳನ್ನು ಟಾರ್ಗೇಟ್ ಮಾಡಿಕೊಂಡಿರುವ ಚೀನಾ ಶತ್ರುವಿನ ಶತ್ರುವನ್ನು ಮಿತ್ರನನ್ನಾಗಿಸಿಕೊಂಡಿದೆ. ತನ್ನ ಪಾಪಕೃತ್ಯಕ್ಕೆ ಪಾಕಿಸ್ತಾನದ ನೆರವು ಪಡೆದುಕೊಂಡಿರುವ ಚೀನಾ. ಹೊಸ ವೈರಸ್ ಸೃಷ್ಟಿಸುವ ಕುರಿತು ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ಸುಮಾರು 3 ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ.

ಅಲ್ಲದೇ ಪಾಕಿಸ್ತಾನ ಹಾಗೂ ಚೀನಾ ಗಡಿಭಾಗದಲ್ಲಿ ಈಗಾಗಲೇ ವೈರಸ್ ಪ್ರಯೋಗದ ಕುರಿತು ಕಾರ್ಯಾಚರಣೆಯನ್ನು ನಡೆಸುತ್ತಿದೆ. ತನ್ನ ಮೇಲೆ ಯಾವುದೇ ಆರೋಪ ಬರಬಾರದು ಅನ್ನುವ ಕಾರಣಕ್ಕೆ ಚೀನಾ ಪಾಕಿಸ್ತಾನದ ಭೂಮಿಯಲ್ಲಿಯೇ ಈ ಪ್ರಯೋಗ ನಡೆಸುತ್ತಿದೆ.

ಪ್ರಮುಖವಾಗಿ ಚೀನಾ ಎಬೋಲಾ, ಕೊರೊನಾ ವೈರಸ್ ಹಾಗೂ ಅಂಥ್ರಾಕ್ಸ್ ಮಾದರಿಯ ವೈರಸ್ ಅಭಿವೃದ್ದಿ ಪಡಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ಹುಟ್ಟಿಗೆ ಕಾರಣವಾಗಿರುವ ವುಹಾನ್ ಲ್ಯಾಬ್ ಕೂಡ ಹೊಸ ವೈರಸ್ ಸೋಂಕಿನ ಸೃಷ್ಟಿಗೆ ಸಕಲ ರೀತಿಯಲ್ಲಿಯೂ ಬೆಂಬಲ ವನ್ನು ನೀಡುತ್ತಿದ್ದು, ಯೋಜನೆಗೆ ಹಣಕಾಸಿನ ನೆರವನ್ನೂ ಒದಗಿಸುತ್ತಿದೆ.

ಫೀವರ್ ಮಾದರಿಯ ವೈರಸ್ ಸೋಂಕಿನ ಮೂಲಕ ಇನ್ನಷ್ಟು ಮರಣ ಹೆಚ್ಚಿಸುವುದು ಚೀನಾ ಲೆಕ್ಕಾಚಾರ. ಒಂದೊಮ್ಮೆ ವೈರಸ್ ಪ್ರಯೋಗ ಯಶಸ್ವಿಯಾದ್ರೆ ಸೋಂಕು ತಗಲುವವರ ಪೈಕಿ ಶೇ.25ರಷ್ಟು ಮಂದಿ ಸಾವನ್ನಪ್ಪುವುದು ಗ್ಯಾರಂಟಿ. ಕೊರೊನಾ ನಡುವಲ್ಲೇ ಭಾರತದ ಮೇಲೆ ಯುದ್ದ ಸಾರೋದಕ್ಕೆ ಹೊರಟು ಕೈ ಸುಟ್ಟುಕೊಂಡಿರುವ ಚೀನಾ ಜೈವಿಕ ಯುದ್ದವನ್ನೇ ವಿಶ್ವದ ರಾಷ್ಟ್ರಗಳ ಮೇಲೆ ಸಾರುವುದಕ್ಕೆ ಸಜ್ಜಾಗಿದೆ.

ಜೈವಿಕ ಯುದ್ದದಿಂದ ವಿರೋಧಿ ರಾಷ್ಟ್ರಗಳ ಬಲವನ್ನು ಸುಲಭವಾಗಿ ಕುಗ್ಗಿಸಬಹುದು ಅನ್ನೋದು ಚೀನಾದ ಲೆಕ್ಕಾಚಾರ. ಚೀನಾ ಇದೀಗ ಪಾಶ್ಚಿಮಾತ್ಯ ರಾಷ್ಟ್ರಗಳನ್ನೇ ಟಾರ್ಗೇಟ್ ಮಾಡಿದೆ ಎನ್ನಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಹೊಸ ಫೀವರ್ ವೈರಸ್ ಪ್ರಯೋಗ ನಡೆದ್ರೆ ಕೋಟ್ಯಾಂತರ ಮಂದಿ ಸಾವನ್ನವುದು ಖಚಿತ.

Leave A Reply

Your email address will not be published.