ಸೆಕ್ಸ್ ನಿಂದ ಹರಡುತ್ತಾ ಕೊರೊನಾ ? ಏನು ಹೇಳುತ್ತೆ ಗೊತ್ತಾ ಅಧ್ಯಯನದ ವರದಿ !

0

ನವದೆಹಲಿ : ಕೊರೊನಾ ಮಹಾಮಾರಿ ಯಾವೆಲ್ಲಾ ಮೂಲಗಳಿಂದ ಹರಡುತ್ತೆ ಅನ್ನೋ ಕುರಿತು ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಅದ್ರಲ್ಲೂ ಕೊರೊನಾ ಸೆಕ್ಸ್ ನಿಂದ ಹರಡುತ್ತೇ ಅನ್ನೋ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಕುರಿತು ಅಧ್ಯಯನ ನಡೆಸಿರೋ ತಜ್ಞರದ ವರದಿ ಸಾಕಷ್ಟು ಇಂಟರಸ್ಟಿಂಗ್ ವಿಚಾರಗಳನ್ನು ಹೊರಗೆಡವಿದೆ.

ಸೆಕ್ಸ್ ನಿಂದ ಕೊರೊನಾ ಹರಡುತ್ತೇ ಅನ್ನೋ ಕುರಿತು ಸಾಕಷ್ಟು ಮಾತುಗಳು ಕೇಳಿಬಂದಿದ್ದವು. ಮಾತ್ರವಲ್ಲ ಈ ಕುರಿತು ಚರ್ಚೆಗಳು ಆರಂಭವಾಗಿದ್ದವು. ಇದೀಗ ಅಧ್ಯಯನದ ವರದಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡೋ ಪ್ರಯತ್ನವನ್ನು ಮಾಡಿದೆ. ಪ್ರಮುಖವಾಗಿ ಅಮೆರಿಕಾದ ಉತಾಹ್ ವಿಶ್ವವಿದ್ಯಾಲಯದ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಜೆಮ್ಸ್ ಎಂ ಹೊಟಾಲಿಂಗ್ ಅವರ ಪ್ರಕಾರ ಪ್ರಾಥಮಿಕ ಅಧ್ಯಯನದಲ್ಲಿ ಕೋವಿಡ್-19 ವೈರಸ್ ಪುರುಷರ ವೀರ್ಯ ಅಥವಾ ವೃಷಣಗಳಲ್ಲಿ ಕಂಡುಬಂದಿಲ್ಲ ಎಂದಿದ್ದಾರೆ. ಅಲ್ಲದೇ ಪುರುಷರ ವೀರ್ಯ ಅಥವಾ ವೃಷಣಗಳಿಂದ ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಇದುವರೆಗೂ ದೊರೆತಿಲ್ಲ.

ಆದರೆ ಉತಾಹ್ ವಿಶ್ವವಿದ್ಯಾಲಯದ ಹಂಟ್ಸ್‌ಮನ್ ಕ್ಯಾನ್ಸರ್ ಸಂಸ್ಥೆಯ ವಿಜ್ಞಾನಿ ಜಿಂಗ್ಟಾವೊ ಗುವೊ ಅವರ ಅಧ್ಯಯನದಲ್ಲಿ ವೀರ್ಯದಲ್ಲಿ ವೈರಸ್ ಇಲ್ಲ ಎಂದ ಮಾತ್ರಕ್ಕೆ ವೀರ್ಯ ಕೋಶಗಳು ರೂಪುಗೊಳ್ಳುವ ವೃಷಣಗಳನ್ನು ವೈರಸ್ ಪ್ರವೇಶಿಸಿಲ್ಲ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಒಂದೊಮ್ಮೆ ವೈರಸ್ ವೃಷಣಗಳಲ್ಲಿ ಇದ್ದರೆ ವೀರ್ಯ ಹಾಗೂ ವೀರ್ಯ ಕೋಶದ ಮೇಲೆ ಧೀರ್ಘಕಾಲದ ಹಾನಿಯನ್ನುಂಟು ಮಾಡಲಿದೆಯೆಂದು ಎಂದಿದ್ದಾರೆ.

ಆದರೆ ಅಮೇರಿಕಾ ಮತ್ತು ಚೀನಾದ ಸಂಶೋಧಕರು ಎಬೊಲಾ, ಜಿಕಾ ಮತ್ತಿತರ ವೈರಸ್ ನಿಂದ ಹರಡುವ ರೋಗಗಳಂತೆ ಕೋವಿಡ್-19ಗೆ ಕಾರಣವಾಗುವ ವೈರಸ್ ಲೈಂಗಿಕವಾಗಿ ಹರಡಬಲ್ಲದೇ ಎಂಬುವುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಒಂದೊಮ್ಮೆ ಕೋವಿಡ್-19 ನಂತಹ ರೋಗವು ಲೈಂಗಿಕವಾಗಿ ಹರಡಬಹುದಾದರೆ ಅದು ರೋಗ ತಡೆಗಟ್ಟುವಿಕೆ ಹಾಗೂ ಮನುಷ್ಯನ ದೀರ್ಘಕಾಲೀನ ಸಂತಾನೋತ್ಪತ್ತಿ ಆರೋಗ್ಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದಿದ್ದಾರೆ.

ಕೊರೋನಾವೈರಸ್ ಕಡಿಮೆ ಹಾಗೂ ಸಾಧಾರಾಣ ಮಟ್ಟದಲ್ಲಿದ್ದಾಗ 34 ಚೀನಿಯರಿಂದ ವೀರ್ಯವನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾಗ, ಆಗ ಸಾರ್ಸ್, ಕೋವಿ-2 ನಂತರ ಯಾವುದೇ ವೈರಸ್ ಗಳು ಅದರಲ್ಲಿ ಪತ್ತೆಯಾಗದಿರುವುದನ್ನು ಸಂಶೋಧಕರು ಕಂಡುಹಿಡಿದ್ದಾರೆ.

ಆದರೆ ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಕೋವಿಡ್-19 ಸೋಂಕು ಲೈಂಗಿಕವಾಗಿ ಹರಡಲಿದೆ ಎಂಬುದನ್ನು ಸಮಗ್ರವಾಗಿ ತಳ್ಳಿ ಹಾಕಿಲ್ಲ. ಆದಾಗ್ಯೂ, ಈ ಸೀಮಿತಿ ಅಧ್ಯಯನದ ಪ್ರಕಾರ, ಲೈಂಗಿಕವಾಗಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

Leave A Reply

Your email address will not be published.