ಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

0

ಡಿಕೇರಿ : ಕಳೆದ ಮೂರು ವರ್ಷಗಳಿಂದಲೂ ವರುಣನ ಅವಕೃಪೆಗೆ ಪಾತ್ರವಾಗುತ್ತಿರುವ ಕೊಡಗು ಜಿಲ್ಲೆಯಲ್ಲೀಗ ಮತ್ತೊಂದು ಆತಂಕ ಎದುರಾಗಿದೆ. ತಲಕಾವೇರಿ – ಭಾಗಮಂಡಲ ಪ್ರದೇಶದಲ್ಲಿನ ಗುಡ್ಡಗಳನ್ನು ಕಡಿದು ಕಾಮಗಾರಿ ನಡೆಯುತ್ತಿರುವುದರಿಂದಾಗಿ ಜನರು ಭೂ ಕುಸಿತವಾಗುವ ಭೀತಿಯಲ್ಲಿದ್ದು, ತಲಕಾವೇರಿ ಹಾಗೂ ಭಾಗ ಮಂಡಲ ಅಪಾಯಕ್ಕೆ ಸಿಲುಕಿದೆ.

ಭಾಗಮಂಡಲ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿವೆ. ತಲಕಾವೇರಿ ಸಂರಕ್ಷಿತ ಅರಣ್ಯ ಪ್ರದೇಶದ ಒಳಗಡೆ ಇದು ಬರುತ್ತದೆ. ಈ ಎರಡೂ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿಯನ್ನು ನಡೆಸುವುದಕ್ಕೆ ನಿಷೇಧವಿದೆ. ಆದರೆ ಕಾನೂನನ್ನು ಮೀರಿ ಈ ಪ್ರದೇಶಗಳಲ್ಲಿ ಕಾನೂನನ್ನೂ ಮೀರಿ ಎಗ್ಗಿಲ್ಲದೇ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಅದ್ರಲ್ಲೂ ಆದೇಶಗಳನ್ನೇ ಉಲ್ಲಂಘಿಸಿ ನೀತಿ ನಿಯಮಗಳನ್ನು ಮೀರಿ ಅಕ್ರಮ ಕಾಮಗಾರಿಗಳು ಹಂತ ಹಂತದಲ್ಲಿ ನಡೆದಿದೆ. ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕಾಗಿ ನೈಸರ್ಗಿಕ ಗುಡ್ಡಗಳನ್ನು ಕೊರೆಯಲಾಗಿದ್ದು ಬೃಹತ್ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಭಾಗಮಂಡಲ- ತಲಕಾವೇರಿ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 50ಕ್ಕೂ ಅಧಿಕ ಕಟ್ಟಡಗಳು ತಲೆಯೆತ್ತಿವೆ. ಬಹುತೇಕ ಅಕ್ರಮ ಹಾಗೂ ಕಾನೂನು ಬಾಹಿರ. ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಈ ಪ್ರದೇಶಗಳು ಸೂಕ್ಷ್ಮ ಪ್ರದೇಶಗಳು. ಕೊಡಗಿನಲ್ಲಿ 2018 ಹಾಗೂ 19ರಲ್ಲಿ ನಡೆದ ಘಟನೆಗಳು ನಮ್ಮ ಕಣ್ಣ ಮುಂದಿವೆ. ಕೊಡಗಿನ ಸುತ್ತಮುತ್ತಲೇ ಗುಡ್ಡಗಳು ಜರಿದು ಬಿದ್ದಿವೆ. ಈಗ ಈ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನೋಡಿದಾಗ ಗುಡ್ಡಗಳು ಜರಿದು ಬೀಳುವ ಪ್ರಸಂಗಗಳು ಅತಿಯಾಗಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಡಗಳ ನಿರ್ಮಾಣವೇ ಇಂದು ಕೊಡಗಿಗೆ ಅಪಾಯವನ್ನು ತಂದೊಡ್ಡಿದೆ.

ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ನೋಡಿದ್ರೆ ತಲಕಾವೇರಿ- ಭಾಗಮಂಡಲ ಪ್ರದೇಶ ಅಪಾಯಕ್ಕೆ ಸಿಲುಕುವುದು ಗ್ಯಾರಂಟಿ. ಇನ್ನಾದರೂ ಸರಕಾರ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ.

Leave A Reply

Your email address will not be published.