ಮಕ್ಕಳೇ ಇಲ್ಲಾ ಎಂದು ಕೊರಗುತ್ತಿದ್ರು ದಂಪತಿ : ಒಂದೇ ಹೆರಿಗೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ಲು ಮಹಾತಾಯಿ !!!

ಆ ದಂಪತಿಗಳು ಮಕ್ಕಳೇ ಇಲ್ಲಾ ಅನ್ನೋ ಕೊರಗಿನಲ್ಲಿದ್ರು. ಆದರೆ ಮದುವೆಯಾದ ಹಲವು ವರ್ಷದ ಬಳಿಕ ಮಗುವೊಂದು ಜನಿಸಿತು. ಆದರೆ ಮತ್ತೊಮ್ಮೆ ಪತ್ನಿ ಗರ್ಭವತಿಯಾಗುತ್ತಿದ್ದಂತೆಯೇ ದಂಪತಿಗೆ ಶಾಕ್ ಎದುರಾಗಿತ್ತು. ಯಾಕೆಂದ್ರ ಎರಡನೇ ಹೆರಿಗೆಯಲ್ಲಿ ದಂಪತಿಗೆ ಜನಿಸಿದ್ದು ಬರೋಬ್ಬರಿ 4 ಮಕ್ಕಳು..!

ಪಶ್ಚಿಮ ಆಸ್ಟ್ರೇಲಿಯಾದ ನಟಾಲಿಯಾ ಮತ್ತು ಪತಿ ಕಾಹ್ನ ದಂಪತಿ ಒಂದು ಕಾಲದಲ್ಲಿ ಮಕ್ಕಳಿಗಾಗಿ ಹಾತೊರೆಯುತ್ತಿದ್ದರು. ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಕೂಡ ನಟಾಲಿಯಾ ಗರ್ಭವತಿ ಯಾಗಿರಲಿಲ್ಲ. ಇದರಿಂದಾಗಿ ದಂಪತಿಗಳು ಸಾಕಷ್ಟು ನೊಂದು ಹೋಗಿದ್ದರು.

ವೈದ್ಯರ ಬಳಿಯಲ್ಲಿ ಸಾಕಷ್ಟು ಬಾರಿ ಚಿಕಿತ್ಸೆ ಪಡೆದ ನಂತರದಲ್ಲಿ ನಟಾಲಿಯ ಗರ್ಭವತಿಯಾಗಿದ್ದಳು. ಕಳೆದೆರಡು ವರ್ಷಗಳ ಹಿಂದೆ ನಟಾಲಿಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿಗಳ ಮಗಳು ಕಿಕಿಗೆ ಇದೀಗ ಎರಡು ವರ್ಷ.

ಮಗಳಿಗೆ ಎರಡು ವರ್ಷ ಕಳೆಯುವಾಗಲೇ ನಟಾಲಿಯ ಮತ್ತೆ ಪ್ರಗ್ನೆಂಟ್ ಆಗಿದ್ರು. ತಾನು ಗರ್ಭಿಣಿ ಅನ್ನೋದು ತಿಳಿಯುತ್ತಿದ್ದಂತೆಯೇ ನಟಾಲಿಯಾ ಅಚ್ಚರಿಗೊಂಡಿದ್ರು. ಸುಮಾರು 7 ತಿಂಗಳು ಕಳೆದು ವೈದ್ಯರ ಬಳಿ ತಪಾಸಣೆಗೆ ಹೋದಾಗ ದಂಪತಿಗಳು ಶಾಕ್ ಗೆ ಒಳಗಾಗಿದ್ದಾರೆ. ಸ್ಕ್ಯಾನಿಂಗ್‌ನಿಂದ ನಟಾಲಿಯಾಗೆ ತಾನು ನಾಲ್ವರು ಮಕ್ಕಳಿಗೆ ಜನ್ಮ ನೀಡಲಿದ್ದೇನೆ ಎಂಬ ಸಂಗತಿ ಗೊತ್ತಾಗಿತ್ತು…! ಇದನ್ನು ಕೇಳಿ ನಟಾಲಿಯಾ ಒಂದು ಕ್ಷಣ ಅಚ್ಚರಿಗೊಂಡಿದ್ದರು.

ದಂಪತಿಗಳಿಗೆ ಈ ಬಾರಿ ಅವಳಿ ಮಕ್ಕಳು ಜನಿಸಬಹುದು ಅಂತಾ ಅಂದುಕೊಂಡಿದ್ದರು. ಆದರೆ ಸ್ಕ್ಯಾನಿಂಗ್ ಸೆಂಟರ್ ನ ಸಿಬ್ಬಂದಿ ಅವಳಿ ಅಲ್ಲಾ ನಾಲ್ಕು ಮಕ್ಕಳು ಜನಿಸಲಿವೆ ಅಂತಾ ಹೇಳಿದ್ದಾರೆ. ಇದರಿಂದಾಗಿ ದಂಪತಿ ಸಾಕಷ್ಟು ಕೇರ್ ಮಾಡಿದ್ದಾರೆ.

ಇದೀಗ ಮೂವರು ಹೆಣ್ಣು ಹಾಗೂ ಓರ್ವ ಗಂಡು ಮಗುವು ಜನಿಸಿದ್ದು, ದಂಪತಿಗಳು ಸಖತ್ ಖಷಿ ಯಾಗಿದ್ದಾರೆ. ದಂಪತಿಗಳು ಸೇರಿಕೊಂಡು ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳಿಗೆ ಊಟ ಮಾಡಿಸಲು ಒಟ್ಟು ಒಂದೂವರೆ ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ.

ದಂಪತಿಗಳಿಗೆ ನಾಲ್ಕು ಮಕ್ಕಳು ಜನಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಕಷ್ಟು ಮಂದಿ ಆಗಮಿಸಿ ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಮಾತ್ರವಲ್ಲ ಮುದ್ದಾದ ಮಕ್ಕಳನ್ನು ಎಲ್ಲರೂ ಪ್ರೀತಿ ಯಿಂದಲೇ ನೋಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಮಕ್ಕಳೇ ಇಲ್ಲಾ ಅಂತಾ ಕೊರಗುತ್ತಿದ್ದ ದಂಪತಿ ಇದೀಗ ಮನೆ ತುಂಬಾ ಮಕ್ಕಳನ್ನು ಕಂಡು ಸಖತ್ ಥ್ರಿಲ್ ಆಗಿದ್ದಾರೆ.

Comments are closed.