ಕೊನೆಗೂ ಈಡೇರಲಿಲ್ಲ ಸುಂದರರಾಜ್ ಸುಂದರ ಕನಸು

  • ಪೂರ್ಣಿಮಾ ಹೆಗಡೆ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ನೊರೆಂಟು ಕನಸುಗಳ ಜೊತೆ ಪ್ರೀತಿಸಿ ಸಪ್ತಪದಿ ತುಳಿದವರು. ಆದರೇ ಕನಸುಗಳ ತಂತಿಕಡಿದಂತೆ ಈಗ ಚಿರು ಅಗಲಿಕೆ ಮೇಘನಾ ಬದುಕನ್ನು ಕಾಡುತ್ತಿದೆ. ಇದರ ಜೊತೆ ಮೇಘನಾ ಹಾಗೂ ಚಿರು ಬಗ್ಗೆ ಮೇಘನಾ ತಂದೆ ಸುಂದರ ರಾಜ್ ಕಂಡ ಕನಸೊಂದನ್ನು ಕೂಡ ಕನಸಾಗಿಯೇ ಉಳಿಸಿ ಹೋಗಿದೆ.

ಸ್ಯಾಂಡಲ್ ವುಡ್ ಹಿರಿಯ ನಟ-ನಟಿಯರಾದ ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಗಳ ಏಕೈಕ ಪುತ್ರಿ. ಸಹಜವಾಗಿಯೇ ಸದಾ ತಮ್ಮ ಮುದ್ದಿನ ಮಗಳಿಗಾಗಿ ತುಡಿಯುವ ಈ ದಂಪತಿ, ಮಗಳ ಇಚ್ಛೆಯಂತೆ ಚಿರು ಸರ್ಜಾಗೆ ಮಗಳನ್ನು ಧಾರೆ ಎರೆದಿದ್ದರು.

ಮಗಳು- ಅಳಿಯನ ಪ್ರೀತಿಯ ದಾಂಪತ್ಯ ನೋಡಿ ಸಂಭ್ರಮಿಸಿದ್ದರು. ಇಷ್ಟೇ ಅಲ್ಲ ಮಗಳು- ಅಳಿಯನ ಬಗ್ಗೆ ಒಂದು ಸುಂದರ ಕನಸು ಕಂಡಿದ್ದರು. ಅದು ಮತ್ತೇನಲ್ಲ ತಮ್ಮ ಹೋಂ ಬ್ಯಾನರ್ ನಲ್ಲಿ ಮಗಳು-ಅಳಿಯನಿಗಾಗಿ ಒಂದು ಚಿತ್ರ ನಿರ್ಮಿಸಬೇಕು ಎಂದು. ಬಹುಷಃ ಕೊರೋನಾ ಬಾರದೇ ಇದ್ದಿದ್ದರೇ ಇಷ್ಟೊತ್ತಿಗೆ ಚಿತ್ರದ ಮುಹೂರ್ತ ನಡೆದು ಶೂಟಿಂಗ್ ಕೂಡ ಆರಂಭವಾಗಿರುತ್ತಿತ್ತೇನೋ.

ಆದರೆ ಕೊರೋನಾ ಹಿನ್ನೆಲೆಯಲ್ಲಿ ದಸರಾ ವೇಳೆಗೆ ಸಿನಿಮಾ ಮುಹೂರ್ತ ಮಾಡೋ ಪ್ಲ್ಯಾನ್ ಮಾಡಿ ದ್ದರು. ಆದರೇ ಕೊರೋನಾ ರೋಗ ಸುಂದರ್ ರಾಜ್ ಕನಸನ್ನು ಕೊಂಚ ವಿಳಂಭ ಮಾಡಿದರೆ ಯಮ ಮಾತ್ರ ಶಾಶ್ವತವಾಗಿ ಕಸಿದುಕೊಂಡಿದ್ದಾನೆ.

ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ನೋವನ್ನ ಹಂಚಿಕೊಂಡ ಸುಂದರ ರಾಜ್, ಮಗಳನ್ನು ಅಳಿಯ ಅದ್ದೂರಿಯಾಗಿ ನೋಡಿಕೊಳ್ಳುತ್ತಿದ್ದ. ನಮ್ಮನ್ನು ಅತ್ಯಂತ ಪ್ರೀತಿ-ಗೌರವದಿಂದ ನಡೆಸಿ ಕೊಳ್ತಿದ್ದ. ಅವರಿಬ್ಬರಿಗಾಗಿ ನಾವೊಂದು ಸಿನಿಮಾ ಮಾಡಬೇಕು ಅಂತ ಕನಸು ಕಂಡಿದ್ವಿ.ಆದರೇ ದೇವರು ಆ ಕನಸು ಈಡೇರಿಸಿಕೊಳ್ಳೋ ಅವಕಾಶ ನಮಗೆ ಕೊಡಲಿಲ್ಲ ಎಂದು ಕಣ್ಣಿರಾಗಿದ್ದಾರೆ.

ಚಿರು ಮತ್ತು ಮೇಘನಾ ವಿವಾಹದ ಬಳಿಕ ಮಗಳು ಅಳಿಯನಿಗಾಗಿ ಸಿನಿಮಾ ಮಾಡುವ ಕನಸು ಹೊತ್ತಿದ್ದ ಸುಂದರ ರಾಜ್ ಗೆ ಮಗಳು-ಅಳಿಯ ಕುರುಕ್ಷೇತ್ರ ಸೇರಿದಂತೆ ವಿವಿಧ ಬಿಗ್ ಬ್ಯಾನರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ 2020 ರಲ್ಲಿ ತಮ್ಮ ಕನಸು ನನಸು ಮಾಡಿಕೊಳ್ಳುವ ಚಿಂತನೆಯಲ್ಲಿದ್ದರು. ಆದರೇ ವಿಧಿ ಮಾತ್ರ ಅವರ ಕನಸಿಗೆ ಜೀವ ತುಂಬುವ ಅವಕಾಶವನ್ನೇ ನೀಡಿಲ್ಲ.

Comments are closed.