ಸೋಮವಾರ, ಏಪ್ರಿಲ್ 28, 2025
HomeSpecial Storyಡ್ರಾಗನ್ ಪ್ರೂಟ್ ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ !

ಡ್ರಾಗನ್ ಪ್ರೂಟ್ ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ !

- Advertisement -

ಪ್ರತಿನಿತ್ಯ ಒಂದಿಲ್ಲ ಒಂದು ಹಣ್ಣನ್ನು ಸೇವನೆ ಮಾಡುತ್ತವೇ. ಆದ್ರೆ ಹಣ್ಣಿನ ಸೇವನೆಯಿಂದ ನಮಗೆ ಸಿಗೋ ಲಾಭವೇನು ಅನ್ನೋ ಬಗ್ಗೆ ಯೋಚಿಸಿದ್ದೀರಾ ? ಹಣ್ಣುಗಳ ಸೇವನೆಯಿಂದ ಆರೋಗ್ಯ ಸಮೃದ್ದಿಯಾಗುತ್ತದೆ. ಅದರಲ್ಲೂ ಒಂದು ಡ್ರಾಗನ್ ಪ್ರುಟ್ ಸೇವನೆ ಹತ್ತಾರು ರೋಗಗಳಿಗೆ ಸಿಧ್ದ ಔಷಧಿ. ಡ್ರಾಗನ್ ಪ್ರುಟ್ ನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನಾರಿನಂಶ ಲಿಯೋಕೆಪಾಸ್ ಪ್ರೊಟೀನ್ ವಿಟಮಿನ್ ಸಿ ಕಾರ್ಟಿನ್ ಕ್ಯಾಲ್ಸಿಯಂ ಪಾಸ್ಪರಾಸ್ ಕಬ್ಬಿಣಾಂಶ ಪ್ರೊಟೊನ್ಯೂಟ್ರಿಯನ್ಸ್ ಒಮೆಗಾ3 ಒಮೆಗಾ 6 ಪೆತ್ ಆಸೀಡ್ಸ್ ಹೊಂದಿರುತ್ತದೆ. ಅಲ್ಲದೇ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಡ್ರಾಗನ್ ಪ್ರುಟ್ ಹಲವಾರು ರೋಗಗಳಿಗೆ ಒಂದು ರಾಮಬಾಣದಂತೆ ಕೆಲಸ ಮಾಡುತ್ತದೆ.

ಕೊಬ್ಬು ಕರಗಿಸುತ್ತೆ : ಡ್ರಾಗನ್ ಪ್ರುಟ್ ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವುದರಿಂದ ದೇಹದ ತೂಕವನ್ನು ಇಳಿಸಲು ಇದು ಸಹಕರಿಸುತ್ತದೆ.

ಶುಗರ್ ಕಡಿಮೆ ಮಾಡುತ್ತೆ : ಡ್ರಾಗನ್ ಪ್ರುಟ್ ನಲ್ಲಿ ಪಲಿಫಿನಾಲ್ ಗಳು ಕ್ಯಾರೋಟಿನೈಲ್ ಗಳು ಟಿಯೊಳ್ ಗಳು ಟಕೋಪಿರಲ್ ಗಳು ಮತ್ತು ಗ್ಲುಕೋಸ್ ಇನೊಟೈಲಟ್ ಗಳ ಸಮೃದ್ಧ ಮೂಲವಾಗಿದೆ.ಇವೆಲ್ಲವು ರ ಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತವೆ ಡ್ರಾಗನ್ ಪ್ರುಟ್ ನಲ್ಲಿ ಒಮೆಗ 3 ಆಂಟಿ ಆಸೀಡ್ ಗಳನ್ನು ಹೊಂದಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.

ಚರ್ಮರೋಗಕ್ಕೆ ರಾಮಬಾಣ : ಡ್ರಾಗನ್ ಪ್ರುಟ್ ಸೇವನೆ ಮಾಡುವುದಿಂದ ಚರ್ಮಕ್ಕೆ ಎದುರಾಗುವ ತೊಂದರೆಗಳನ್ನು ತಡೆಗಟ್ಟಬಹುದು. ಈ ಡ್ರಾಗನ್ ಪ್ರುಟ್ ನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಕಳೆಗುಂದುವಿಕೆಯ ವಿರುದ್ಧ ಹೋರಾಡುತ್ತಾ ನಮ್ಮ ಚರ್ಮ ಹೊಳಪಿನಿಂದ ಕುಡಿರುವಂತೆ ಇದು ಕಾಪಾಡುತ್ತದೆ. ಈ ಡ್ರಾಗನ್ ಪ್ರುಟ್ ನಲ್ಲಿ ವಿಟಮಿನ್ ಬಿ3 ಅಂಶವು ಅಧಿಕವಾಗಿ ಇರುತ್ತದೆ ಸೂರ್ಯನ ಕಿರಣಗಳಿಂದ ನಮ್ಮ ಚರ್ಮದ ಮೇಲಾಗುವ ಹಾನಿಕಾರಕ ಅಂಶಗಳನ್ನು ಇದು ತಪ್ಪಿಸುತ್ತದೆ.

ರೋಗನಿರೋಧಕ ಶಕ್ತಿ ವೃದ್ದಿ : ಅತ್ಯಧಿಕ ಖನಿಜಾಂಶವನ್ನು ಹೊಂದಿರುವ ಕಾರಣ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಡ್ರಾಗನ್ ಪ್ರುಟ್ ನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಹೆಚ್ಚಾಗಿ ಇರುತ್ತದೆ ಇದು ಮೆದುಳನ್ನು ಚುರುಕಾಗಿ ಇರುವಂತೆ ಮಾಡುತ್ತದೆ. ಡ್ರಾಗನ್ ಪ್ರುಟ್ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಕಾರಣ ಇದು ನಮ್ಮ ದೇಹದ ಕೆಟ್ಟ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಉತ್ತಮ ಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.


ಕ್ಯಾನ್ಸರ್ ಗೆ ರಾಮಬಾಣ : ಇಷ್ಟೇ ಅಲ್ಲಾ ಕ್ಯಾನ್ಸರ್ ನಂತಹ ರೋಗಗಳಿಗೆ ರಾಮಬಾಣವಾಗಿದೆ. ಡ್ರಾಗನ್ ಪ್ರುಟ್ ನಲ್ಲಿ ಫೈಬರ್ ಹೇರಳವಾಗಿದ್ದು ಇದು ಗ್ಯಾಸ್ ಅಸಿಡಿಟಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಡ್ರಾಗನ್ ಪ್ರುಟ್ ನಲ್ಲಿ ಅಧಿಕವಾದ ವಿಟಮಿನ್ ಸಿ ಅಂಶವಿರುವುದರಿಂದ ಕೂದಲಿಗೆ ಶಕ್ತಿಯನ್ನು ತುಂಬುತ್ತದೆ. ಕೂದಲು ಹೊಳಪಾಗುವಂತೆ ಮಾಡುತ್ತದೆ. ಈ ಒಂದು ಡ್ರಾಗನ್ ಪ್ರುಟ್ ಸೇವನೆಯಿಂದ ಶ್ವಾಸಕೋಶದ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದನ್ನು ತಿನ್ನುವುದರಿಂದ ರಕ್ತ ಹೀನತೆಯನ್ನು ದೂರ ಮಾಡಿಕೊಳ್ಳಬಹುದು. ಈ ಒಂದು ಡ್ರಾಗನ್ ಪ್ರುಟ್ ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ಡೆಂಗ್ಯೂದಿಂದ ದೂರವಿಡುತ್ತೆ : ದೇಹದಲ್ಲಿರುವ ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವುದರ ಜೊತೆಗೆ ಡೆಂಗಿ ಜ್ವರದಂತಹ ರೋಗಗಳಿಗೆ ಇದು ಸಿಧ್ದ ಔಷಧಿಯಾಗಿದೆ. ಡ್ರಾಗನ್ ಪ್ರುಟ್ ಸೇವನೆ ನಮ್ಮ ದೇಹದಲ್ಲಿ ಮೂಳೆ ಮತ್ತು ಹಲ್ಲುಗಳನ್ನು ಬಲಿಷ್ಠ ಪಡಿಸುತ್ತದೆ. ವಿದೇಶದಲ್ಲಿ ಮಾತ್ರ ಲಭಿಸುತ್ತಿದ್ದ ಡ್ರಾಗನ್ ಪ್ರೂಟ್ ಇದೀಗ ಎಲ್ಲಾ ಅಂಗಡಿಗಳಲ್ಲಿಯೂ ಲಭಿಸುತ್ತಿದೆ. ಡ್ರಾಗನ್ ಪ್ರೂಟ್ ನಿಂದ ಸೇವನೆ ಮಾಡಿ ನಿಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular