ನಿತ್ಯ‌ಭವಿಷ್ಯ : (22-03-2021 ರ ಸೋಮವಾರ) ಈ‌‌‌ ರಾಶಿಯವರು ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರವಿರಲಿ

ಮೇಷರಾಶಿ
ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ.
ಅದೃಷ್ಟರಾಶಿ :  3

ವೃಷಭರಾಶಿ
ಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ.
ಅದೃಷ್ಟರಾಶಿ :  9

ಮಿಥುನರಾಶಿ
ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು.
ಅದೃಷ್ಟರಾಶಿ :  4

ಕರ್ಕಾಟಕರಾಶಿ
ಪರಿವಾರದಲ್ಲಿ ಹೊಸಕಳೆ ಬರುವದು. ಕುಟುಂಬದಲ್ಲಿ ಸೌಖಯ ಇರುವದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು.
ಅದೃಷ್ಟರಾಶಿ : 6

ಸಿಂಹರಾಶಿ
ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು.
ಅದೃಷ್ಟರಾಶಿ :  1

ಕನ್ಯಾರಾಶಿ
ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವದು. ಸಮತೋಲಿತ ಜೀವನವಿರುವದು.
ಅದೃಷ್ಟರಾಶಿ : 5

ತುಲಾರಾಶಿ
ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ.ವ್ಯಾಪಾರವೃದ್ಧಿಯಾಗುವದು. ಆರ್ಥಿಕ ಸಂಕಷ್ಟ ದೂರಾಗುವದು.
ಅದೃಷ್ಟರಾಶಿ : 7

ವೃಶ್ಚಿಕರಾಶಿ
ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಸಯೆಗಳು ಪರಿಹಾರವಾಗುವವು.
ಅದೃಷ್ಟರಾಶಿ : 4

ಧನುರಾಶಿ
ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ.
ಅದೃಷ್ಟರಾಶಿ : 1

ಮಕರರಾಶಿ
ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ.
ಅದೃಷ್ಟರಾಶಿ : 2

ಕುಂಭರಾಶಿ
ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ.
ಅದೃಷ್ಟರಾಶಿ : 8

ಮೀನರಾಶಿ
ಯುವಕರಿಗೆ ನವಿರಾದ ಮಾತುಗಳಿಂದ ಸಂಗಾತಿಗಳನ್ನು ಗೆಲ್ಲುವ ಛಾತಿ. ಆಕರ್ಷಕ ನಿರ್ಧಾರಗಳಿಂದ ಮನ್ನಣೆ. ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ.
ಅದೃಷ್ಟರಾಶಿ : 3

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Comments are closed.