Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ ಹೇಳಿದ ನಾಸಾ

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ (Lunar Eclipse) ಸಂಭವಿಸುತ್ತದೆ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹಾಗಾದರೆ ಚಂದ್ರ ಕೆಂಪಗೆ ಕಾಣಿಸಲು (Red Moon During Lunar Eclipse) ಭೂಮಿ ನಡುವೆ ಬರಲೂ ಏನಾದರೂ ಕಾರಣವಿದೆಯೇ? ಬಾಹ್ಯಾಕಾಶ ಸಂಸ್ಥೆ ನಾಸಾ ಇದರ ಹಿಂದಿರುವ ಕಾರಣ ಬಿಚ್ಚಿಟ್ಟಿದೆ.

ಈ ವರ್ಷದ ಕೊನೆಯ ಪೂರ್ಣ ಚಂದ್ರ ಗ್ರಹಣ ನವೆಂಬರ್‌ 8 ಮಂಗಳವಾರದಂದು ಸಂಭವಿಸಲಿದೆ. ನಾಸಾದ ಪ್ರಕಾರ 2025 ವರೆಗೆ ಮತ್ತೊಂದು ಪೂರ್ಣ ಚಂದ್ರ ಗ್ರಹಣ ಸಂಭವಿಸುವುದಿಲ್ಲ. ಆದರೆ ಭಾಗಶಃ ಮತ್ತು ಖಂಡಗ್ರಾಸ ಚಂದ್ರ ಗ್ರಹಣ ನಡೆಯಲಿದೆ. ಈಗ ನಡೆಯಲಿರುವ ಗ್ರಹಣವು ವಿಶೇಷವಾಗಿದೆ. ಏಕೆಂದರೆ ಚಂದ್ರನ ಬೆಳಕು ಕಡಿಮೆಯಾಗುವ ಸಂದರ್ಭದಲ್ಲಿ ಶೀತಲ ಗ್ರಹ ಯುರೇನಸ್‌ ಮತ್ತು ಉಳಿದ ಆಕಾಶ ಕಾಯಗಳು ಪ್ರಕಾಶಮಾನವಾಗಿ ಕಾಣಿಸುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣವಾಗುತ್ತದೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಹಾದು ಹೋಗುವಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಗೆ ತಲುಪುವ ಸೂರ್ಯನ ವಿಕಿರಣವು ಮಾನವನ ಕಣ್ಣಿಗೆ ತರಂಗಾಂತರಗಳನ್ನು ಹೊಂದಿರುವ ಬೆಳಕಿನಂತೆ ಗೋಚರಿಸುತ್ತದೆ ಎಂದು ಅರ್ಥೈಸಲಾಗಿದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಹೇಗೆ ಕೆಂಪಾಗಿ ಕಾಣಿಸುತ್ತಾನೆ.

  • ಯಾವ ವಿದ್ಯಮಾನವು ನಮ್ಮ ಆಕಾಶವನ್ನು ನೀಲಿಯಾಗಿಯೂ ಮತ್ತು ಸೂರ್ಯಾಸ್ತವು ಕೆಂಪಾಗಿ ಕಾಣಿಸುವಂತೆ ಮಾಡುತ್ತದೆಯೋ ಅದೇ ರೀತಿ ಗ್ರಹಣದ ಸಮಯದಲ್ಲಿ ಚಂದ್ರ ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಇದನ್ನು ಬೆಳಕಿನ ಚದರುವಿಕೆ (ರೇಲೈ ಸ್ಕ್ಯಾಟರಿಂಗ್‌) ಎಂದು ಕರೆಯುತ್ತಾರೆ.
  • ಸೂರ್ಯನಿಂದ ಬಂದ ಬೆಳಕು ಅಲೆಗಳ ರೂಪದಲ್ಲಿ ಚಲಿಸುತ್ತದೆ. ಇದು ವಿವಿಧ ಬಣ್ಣಗಳನ್ನು ಹೊಂದಿದೆ. ನೀಲಿ ಬೆಳಕು ಕಡಿಮೆ ತರಂಗಾಂತರವನ್ನು ಹೊಂದಿದ್ದರೆ ಕೆಂಪು ದೀರ್ಘ ತರಂಗಾಂತರವನ್ನು ಹೊಂದಿದೆ. ನಾಸಾ ತನ್ನ ವೆಬ್‌ಸೈಟ್‌ ಪೋಸ್ಟ್‌ನಲ್ಲಿ ವಿವರಿಸಿದೆ.
  • ಸುರ್ಯಾಸ್ತದ ಸಮಯದಲ್ಲಿ ಸೂರ್ಯನ ಬೆಳಕು ಆಕಾಶದಿಂದ ನಮ್ಮನ್ನು ತಲುಪುತ್ತದೆ. ಅದು ನಮ್ಮ ಕಣ್ಣುಗಳನ್ನು ತಲುಪುವ ಮೊದಲು ಬಹಳ ದೂರ ಪ್ರಯಾಣಿಸಿರುತ್ತದೆ.
  • ಇದರ ಪರಿಣಾಮವಾಗಿ ಇದು ಗಾಳಿಯ ಮೂಲಕ ಹೆಚ್ಚು ಹಾದುಹೋಗುತ್ತದೆ. ನೀಲಿ ಬಣ್ಣವು ಅನೇಕ ಬಾರಿ ಚದುರುವಿಕೆ ಮತ್ತು ಮರು ಪ್ರಸಾರವಾಗುವುದರಿಂದ ವಾತಾವರಣದಿಂದ ಆ ಬಣ್ಣವು ಇಲ್ಲವಾಗುತ್ತದೆ. ದೊಡ್ಡ ತರಂಗಾಂತರಗಳಿರುವ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳನ್ನು ಹಾದು ಹೋಗಲು ಅನುವು ಮಾಡಿಕೊಡುತ್ತದೆ.
  • ಚಂದ್ರ ಗ್ರಹಣದ ಸಂದರ್ಭದಲ್ಲಿ, ಚಂದ್ರನು ಅಂಬ್ರಾ ಅಂದರೆ ನೆರಳಿನ ಕಪ್ಪು ಮಧ್ಯಭಾಗ ಪ್ರವೇಶಿಸಿದಾಗ ಭೂಮಿಯು ಸೂರ್ಯನಿಂದ ಬರುವ ಬೆಳಕನ್ನು ಸಂಪೂರ್ಣವಾಗಿ ತಡೆಹಿಡಿಯುತ್ತದೆ. ಸೂರ್ಯನ ಬೆಳಕು ಭೂಮಿಯ ಬದಿಯ ಮೂಲಕ ಹಾದುಹೋಗುತ್ತದೆ. ಆ ಬೆಳಕು ವಾತಾವರಣದಲ್ಲಿ ಹರಡುತ್ತದೆ. ಹೀಗಾಗಿ ಅದು ಚಂದ್ರನನ್ನು ತಲುಪುವವರೆಗೆ ಕೇವಲ ದೀರ್ಘ ತರಂಗಾಂತರಗಳನ್ನು ಹೊಂದಿರುವ ಬಣ್ಣ ಮಾತ್ರ ಉಳಿಯುತ್ತದೆ. ಅದು ಚಂದ್ರನನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ.
  • ಚಂದ್ರನು ಅಂಬ್ರಾದಿಂದ ನಿರ್ಗಮಿಸದ ನಂತರ, ಕ್ರಮೇಣ ಮೂಲ ರೀತಿಯಲ್ಲೇ ಬೆಳಕು ಪಡೆಯುವುದರಿಂದ ಎಂದಿನಂತೆಯೇ ಪ್ರಕಾಶಮಾನವಾಗಿ ಕಾಣಿಸಲು ಪ್ರಾರಂಭವಾಗುತ್ತದೆ.

ಚಂದ್ರ ಗ್ರಹಣ ವೀಕ್ಷಿಸಲು ಯಾವುದೇ ಸಾಧನದ ಅವಶ್ಯಕತೆ ಇರುವುದಿಲ್ಲ. ಬರಿಗಣ್ಣಿನಿಂದಲೇ ನೋಡಬಹುದು.

ಇದನ್ನೂ ಓದಿ :Chandra Grahan 2022 : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ಇದನ್ನೂ ಓದಿ : Lava Blaze 5G :ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಲಾವಾ ಬ್ಲೇಜ್‌ 5G ಪಾಕೆಟ್‌–ಫ್ರೆಂಡ್ಲೀ ಸ್ಮಾರ್ಟ್‌ಫೋನ್‌

(Red Moon During Lunar Eclipse, NASA explains why the moon turns red during a lunar eclipse)

Comments are closed.