ನಾಳೆ ವರ್ಷದ ಮೊದಲ ಸೂರ್ಯಗ್ರಹಣ : ಕೌತುಕಕ್ಕೆ ಸಾಕ್ಷಿಯಾಗಲಿದೆ ಸೌರಮಂಡಲ

0

ಬೆಂಗಳೂರು : ಎರಡೆರಡು ಚಂದ್ರಗ್ರಹಣ ಸಂಭವಿಸಿದ ಬೆನ್ನಲ್ಲೇ, ದೇಶದಲ್ಲಿ ನಾಳೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸುಮಾರು 6 ಗಂಟೆಗಳ ಕಾಲ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸಲಿದ್ದು, ಸೌರಮಂಡಲದಲ್ಲಿ ಕೌತುಕಕ್ಕೆ ಸಾಕ್ಷಿಯಾಗಲಿದೆ.

ಭಾರತ, ಆಫ್ರಿಕಾ, ಕಾಂಗೋ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ. ಭಾರತದಲ್ಲಿ ರಾಜಸ್ಥಾನ, ಹರಿಯಾಣ ಹಾಗು ಉತ್ತರಾಖಂಡ್ ಭಾಗದಲ್ಲಿ ಖಂಡಗ್ರಾಸ ಗ್ರಹಣ ಉಳಿದೆಡೆ ಭಾಗಶಃ ಗ್ರಹಣ ಗೋಚರವಾಗಲಿದೆ.
ಭಾರತದಲ್ಲಿ ಸೂರ್ಯಗ್ರಹಣದ ಸಮಯ :
ಗ್ರಹಣದ ಆರಂಭ ಕಾಲ – ಬೆಳಗ್ಗೆ 09.15 ಕ್ಕೆ
ಗ್ರಹಣದ ಮಧ್ಯಕಾಲ – ಮಧ್ಯಾಹ್ನ 12.10 ಕ್ಕೆ
ಗ್ರಹಣದ ಅಂತ್ಯದ ಅವಧಿ – ಮಧ್ಯಾಹ್ನ 03.04 ಕ್ಕೆ

ಬೆಂಗಳೂರಿನಲ್ಲಿ ಸೂರ್ಯಗ್ರಹಣದ ಸಮಯ :
ಗ್ರಹಣದ ಆರಂಭ – ಬೆಳಗ್ಗೆ 10.12 ಕ್ಕೆ
ಗ್ರಹಣದ ಮಧ್ಯಕಾಲ – ಬೆಳಗ್ಗೆ 11.47 ಕ್ಕೆ
ಗ್ರಹಣದ ಅಂತ್ಯದ ಅವಧಿ – ಮಧ್ಯಾಹ್ನ 01.31 ಕ್ಕೆ
ಒಟ್ಟು ಗ್ರಹಣದ ಅವಧಿ – 3 ಗಂಟೆ 19 ನಿಮಿಷ

ಖಗ್ರಾಸ ಸೂರ್ಯಗ್ರಹಣವಾಗಿರುವುದರಿಂದ ಬರಿಗಣ್ಣಿನಿಂದ ನೋಡಬಾರದು. ಸುರಕ್ಷಾ ಕನ್ನಡಕ ಧರಿಸಿ ಇದನ್ನು ನೋಡಬೇಕು. ಇದೇ ಸಾಲಿನಲ್ಲಿ ಅಂದರೆ ಡಿಸೆಂಬರ್ 14,15 ರಂದು ಮತ್ತೊಂದು ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜೆಯ ಅವಧಿಯನ್ನು ಬದಲಾಯಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಬಾದಾಮಿಯ ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ನಂಜುಂಡೇಶ್ವರ, ಮಲೈಮಹದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಬೆಂಗಳೂರಿನ ಹಲವು ದೇವಾಲಯಗಳಲ್ಲಿಮ ನಾಳೆ ಗ್ರಹಣ ಕಾಲದಲ್ಲಿ ಯಾವುದೇ ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ಗ್ರಹಣ ಮೋಕ್ಷದ ನಂತರ ವಿಶೇಷ ಪೂಜೆಗಳು ನಡೆಯಲಿವೆ.

Leave A Reply

Your email address will not be published.