ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತೀಯ ಯೋಧರು..!

0

ನವದೆಹಲಿ : ಒಂದೆಡೆ ಭಾರತ ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಈ ನಡುವಲ್ಲೇ ಭಾರತದ ಗಡಿಯಲ್ಲಿ ಕುಂತತ್ರಿ ಪಾಕಿಸ್ತಾನ ಮತ್ತೆ ತನ್ನ ಕೆಟ್ಟ ಬುದ್ಧಿ ತೋರಿಸಿದೆ. ಪಾಕಿಸ್ತಾನ ಭಾರತದ ಮೇಲೆ ಅಟ್ಯಾಕ್ ಮಾಡಲು ಡ್ರೋನ್ ಬಳಸುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನ ಹೊಂದಿದ್ದ ಡ್ರೋನ್ ನನ್ನು ಭಾರತಕ್ಕೆ ಕಳುಹಿಸಿದೆ. ಆದರೆ ಡ್ರೋನ್ ಗಳನ್ನು ಗಡಿಭದ್ರತಾ ಪಡೆಯ (ಬಿಎಸ್ ಎಫ್ ) ಯೋಧರು ಹೊಡೆದುರುಳಿಸಿದ್ದಾರೆ.

ಭಾರತದ ಜಮ್ಮು ಹಾಗೂ ಕಾಶ್ಮೀರದ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕತುವಾ ಜಿಲ್ಲೆಯ ಪನ್ಸಾರ್ ಎಂಬಲ್ಲಿ ಹಾರಿ ಬರುತ್ತಿದ್ದ ಪಾಕಿಸ್ತಾನಿ ಡ್ರೋನ್ ನನ್ನು ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ. ಬಳಿಕ ಬೆಳಗ್ಗಿನ ಜಾವ ಗಸ್ತಿನಲ್ಲಿದ್ದ ಬಿಎಸ್ ಎಫ್ ಯೋಧರು ಡ್ರೋನ್ ಕಂಡ ಕೂಡಲೇ 9 ಸುತ್ತಿನ ಗುಂಡು ಹಾರಿಸಿ ಕೆಳಕ್ಕೆ ಬೀಳಿಸಿದ್ದಾರೆ.

ಹಿರಿಯ ಅಧಿಕಾರಿಗಳು ಡ್ರೋನ್ ಪರಿಶೀಲಿಸಿದ್ದು, ಅದಕ್ಕೆ ಸ್ಫೋಟಕಗಳನ್ನು ಜೋಡಿಸಿ ದಾಳಿಗೆ ಕಳಿಸಿರೋದು ಗೊತ್ತಾಗಿದೆ. ಅದರಲ್ಲಿ ಬಂದೂಕುಗಳು ಕೂಡ ಪತ್ತೆಯಾಗಿವೆ. ಈ ಕುರಿತು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡ್ರೋನ್ ಬಂದಿರುವುದು ಎಲ್ಲಿಂದ, ಯಾರು ಡ್ರೋನ್ ಕಳುಹಿಸಿರಬಹುದು. ಪಾಪಿ ಪಾಕಿಸ್ತಾನದ ಯೋಧರು ಯಾವ ರೀತಿಯ ದಾಳಿಗೆ ಪ್ಲ್ಯಾನ್ ರೂಪಿಸಿದ್ದಾರೆ ಎಂಬ ವಿಚಾರದ ಕುರಿತು ಬಿಎಸ್ ಎಫ್ ಯೋಧರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.