ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಾಡಿದ 3 ವರ್ಷದ ಮಗು !

0

ತೈವಾನ್ : ಗಾಳಿಪಟ ಉತ್ಸವಗಳು ನಡೆಯೋದು ಮಾಮೂಲು. ಆದ್ರೆ ಇಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಗಾಳಿಪಟವನ್ನು ಹಿಡಿದಿದ್ದ ಮಗುವನ್ನೇ ಗಾಳಿಪಟ ಗಾಳಿಯಲ್ಲಿ ಹೊತ್ತೊಯ್ದಿದೆ.

ತೈವಾನ್ ಕ್ಸಿಂಚು ಎಂಬಲ್ಲಿ ಗಾಳಿಪಟ ಉತ್ಸವ ಆಚರಿಸಲಾಗಿತ್ತು. ಈ ವೇಳೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಬಗೆ ಬಗೆಯ ಗಾಳಿಪಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದರು. ಈ ವೇಳೆಯಲ್ಲಿ ಆಕಾಶಕ್ಕೆ ಹಾರಿದ ಬೃಹತ್ ಗಾತ್ರ ಗಾಳಿಪಟವೊಂದು ಮೂರು ವರ್ಷ ಪ್ರಾಯದ ಹೆಣ್ಣು ಮಗುವನ್ನೂ ಕೂಡ ಹೊತ್ತೊಯ್ದಿದೆ.

ಸುಮಾರು 100 ಅಡಿ ಎತ್ತರದಲ್ಲಿ ಮಗು ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರುತ್ತಿದ್ದಂತೆಯೇ ಮಗು ಚೀರಾಡುವುದಕ್ಕೆ ಶುರುಮಾಡಿದೆ. ಈ ವೇಳೆಯಲ್ಲಿ ನೆರೆದಿದ್ದವರು ಅರೆ ಕ್ಷಣ ಗಾಬರಿಗೆ ಒಳಗಾಗಿ, ಮಗುವನ್ನು ನೋಡುತ್ತಲೇ ನಿಂತಿದ್ದರು.

ಆದರೆ ಅದೃಷ್ಟವಶಾತ್ ಗಾಳಿಪಟ ನಿಧಾನಕ್ಕೆ ಪ್ರೇಕ್ಷಕರಿದ್ದ ಕಡೆಗೆ ಕೆಳಗೆ ಇಳಿದಿದೆ. ನಂತರ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.

https://youtu.be/2w9nVvCTHxc
Leave A Reply

Your email address will not be published.