tamilnadu : ನನಗೊಂದು ಸಂಗಾತಿ ಹುಡುಕಿಕೊಡಿ ಎಂದು ಪೋಸ್ಟರ್​ ಅಂಟಿಸಿದ ಯುವಕ : ನೆಟ್ಟಿಗರು ಶಾಕ್​

ತಮಿಳುನಾಡು : tamilnadu : ಮದುವೆ ವಯಸ್ಸಿಗೆ ಬಂದರು ಅಂದರೆ ಮುಗೀತು ಅದು ಯುವಕನೇ ಆಗಿರಲಿ ಅಥವಾ ಯುವತಿಯೇ ಆಗಿರಲಿ ಕುಟುಂಬಸ್ಥರಿಂದ ಮದುವೆ ಆಗಬೇಕು ಎಂಬ ಒತ್ತಡ ಹೆಚ್ಚಾಗುತ್ತಲೇ ಹೋಗುತ್ತೆ. ಕೆಲವರು ತಮ್ಮ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರಿಗೆ ಮನೆಯವರೆಲ್ಲ ಸೇರಿ ಸಂಗಾತಿಯನ್ನು ಆಯ್ಕೆ ಮಾಡಿಕೊಡ್ತಾರೆ. ಆದರೆ ತಮಿಳುನಾಡಿನ ಮಧುರೈನ ವ್ಯಕ್ತಿಯೊಬ್ಬ ಈ ಎರಡೂ ವಿಧಾನಗಳಿಂದಲೂ ತನಗೆ ಸಂಗಾತಿ ಸಿಗದ್ದಕ್ಕೆ ಮನನೊಂದು ಹೊಸದೊಂದು ಯೋಜನೆ ಮಾಡಿದ್ದು ಇದನ್ನು ನೋಡಿದ ಊರವರೆಲ್ಲ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿರುವ ವಿಲ್ಲಾಪುರಂ ನಿವಾಸಿಯಾಗಿರುವ 27 ವರ್ಷದ ವ್ಯಕ್ತಿಯೊಬ್ಬರು ಮದುವೆಯಾಗಬೇಕೆಂದು ಕಳೆದ 5 ವರ್ಷಗಳಿಂದ ವಧು ಅನ್ವೇಷಣೆಯಲ್ಲಿ ತೊಡಗಿದ್ದರು. ಆದರೆ ಹುಡುಗಿಗಾಗಿ ಹುಡುಕಿ ಸುಸ್ತಾದ ಈ ವ್ಯಕ್ತಿ ಇದೀಗ ಊರಿನ ತುಂಬೆಲ್ಲ ನನಗೊಂದು ಸಂಗಾತಿ ಬೇಕು ಎಂದು ಪೋಸ್ಟರ್​ ಅಂಟಿಸಿದ್ದಾರೆ.


ಈ ಪೋಸ್ಟರ್​ನಲ್ಲಿ ಜಗನ್​​​ ತಮ್ಮ ಫೋಟೋ ಜೊತೆಯಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು, ವೃತ್ತಿ, ಮೊಬೈಲ್​ ನಂಬರ್​ ಹೀಗೆ ಸಂಪೂರ್ಣ ವಿವರವನ್ನು ನಮೂದಿಸಿದ್ದಾರೆ. ಈ ಪೋಸ್ಟರ್​ ನೋಡಿದ ಯಾರಾದರೂ ತನಗೆ ಮದುವೆಯಾಗಲು ಯುವತಿಯನ್ನು ಹುಡುಕಿಕೊಡಬಹುದು ಎಂಬುದು ಜಗನ್​​ರ ಆಲೋಚನೆಯಾಗಿದೆ.


ಇನ್ನು ಈ ವಿಚಾರವಾಗಿ ಮಾತನಾಡಿರುವ ಜಗನ್​, ನಾನು ಕಳೆದ ಐದು ವರ್ಷಗಳಿಂದ ಸೂಕ್ತ ಸಂಗಾತಿಗಾಗಿ ಎಲ್ಲಾ ಸಾಂಪ್ರದಾಯಿಕ ಮಾರ್ಗಗಳಲ್ಲಿ ಹುಡುಕಾಟವನ್ನು ನಡೆಸಿದ್ದೇನೆ. ಆದರೆ ಯಾವುದೇ ಹುಡುಗಿ ನನಗೆ ಸಿಗಲಿಲ್ಲ. ನಾನು ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್​ ಕೆಲಸ ಮಾಡುವುದರ ಜೊತೆಯಲ್ಲಿ ಪಾರ್ಟ್​ ಟೈಮ್​ ಡಿಸೈನರ್​ ಕೂಡ ಆಗಿದ್ದೇನೆ. ಹೀಗಾಗಿ ನನಗೆ ನಾನೇಕೆ ಈ ರೀತಿ ಪೋಸ್ಟರ್​ ಅಂಟಿಸಬಾರದು ಎಂಬ ಆಲೋಚನೆ ಮೂಡಿ ಬಂತು. ಹೀಗಾಗಿ ನನಗಾಗಿ ನಾನೇ ಒಂದು ಪೋಸ್ಟರ್​ ಸಿದ್ಧಪಡಿಸಿಕೊಂಡೆ. ಬಳಿಕ ಅದನ್ನು ಊರಿನ ತುಂಬೆಲ್ಲ ಅಂಟಿಸಿದ್ದೇನೆ. 90ರ ದಶಕದಲ್ಲಿ ಜನಿಸಿರುವ ಬಹುತೇಕರು ನನ್ನಂತೆಯೇ ಸಂಕಷ್ಟವನ್ನು ಎದುರಿಸುತ್ತಿರಬಹುದು ಎಂದು ಹೇಳಿದ್ದಾರೆ.

ಇದನ್ನು ಓದಿ : Sara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ

ಇದನ್ನೂ ಓದಿ : Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್

tamilnadu man puts up posters looking for bride goes viral

Comments are closed.