ಮದುವೆ ಮಂಟಪಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದ ವರ….! ಅದ್ದೂರಿಗೆ ಮದುವೆಗೆ ಸಾಕ್ಷಿಯಾಯ್ತು ಸಿಲಿಕಾನ್ ಸಿಟಿ..!!

ಬೆಂಗಳೂರು: ಇತ್ತೀಚಿಗೆ ಮದುವೆ ಹಾಗೂ ಮದುವೆಪೋಟೋಶೂಟ್ ಗಳು ಭರ್ಜರಿಯಾಗಿ ಸುದ್ದಿ ಮಾಡ್ತಿವೆ. ಸಿಲಿಕಾನ್ ಸಿಟಿಯೂ ಇಂತಹುದೇ ಮದುವೆಯೊಂದರ ಕಾರಣಕ್ಕೆ ಸುದ್ದಿಯಾಗಿದ್ದು ಮಂಟಪಕ್ಕೆ ವರ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದು ಎಲ್ಲರಿಗೂ ಸಪ್ರೈಸ್ ನೀಡಿದ್ದಾನೆ.

ತಲಘಟ್ಟಪುರದ ಬಿ.ಆರ್.ಎಸ್. ಗ್ರ್ಯಾಂಡ್ ನಲ್ಲಿ ನಡೆಯುತ್ತಿರೋ ಮದುವೆಯಲ್ಲಿ ವರ ನಿರೂಪ್ ಶೆಟ್ಟಿ ತುಮಕೂರಿನಿಂದ ಮದುವೆ ಮಂಟಪಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದು ಗಮನ ಸೆಳೆದಿದ್ದಾನೆ.

ರೈಸ್ ಮಿಲ್ ಹೊಂದಿರುವ ನಿರೂಪ್ ಬಲರಾಮ್ ಶೆಟ್ಟಿ ಉದ್ಯಮಿಯಾಗಿದ್ದು, ಬೆಂಗಳೂರು ಮೂಲದ ಐಶ್ವರ್ಯಾರನ್ನು ಕೈಹಿಡಿಯಲಿದ್ದಾರೆ.

ತನ್ನ ಮದುವೆ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ನಿರೂಪ್ ಮದುವೆ ಮನೆಗೆ ಹೆಲಿಕ್ಯಾಪ್ಟರ್ ನಲ್ಲಿ ಬರೋ ಪ್ಲ್ಯಾನ್ ಮಾಡಿದ್ದಾರೆ.

ಕಲ್ಯಾಣಮಂಟಪದ ಬಳಿ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದ ವರನನ್ನು ಕಂಡು ಜನರು ಹುಬ್ಬೇರಿಸಿದ್ರೇ ಹುಡುಗಿ ಮನೆಯವರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

ಈ ಅಪರೂಪದ ಮದುವೆ ಪೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆಲವರು ಮದುವೆ ಅದ್ದೂರಿತನ ಮೆಚ್ಚಿಕೊಂಡಿದ್ದರೇ ಹಲವರು ಇಂಥವೆಲ್ಲ ದುಂದುವೆಚ್ಚ ಬೇಕಾ ಅಂತ ಕಮೆಂಟ್ ಮಾಡ್ತಿದ್ದಾರೆ.

Comments are closed.