Chiranjeevi sarja:ಅಪ್ಪನ ಹಾಡು,ಡ್ಯಾನ್ಸ್ ನೋಡುತ್ತ ಎಂಜಾಯ್ ಮಾಡಿದ ಮಗ…! ಜ್ಯೂನಿಯರ್ ಚಿರು ಸ್ಪೆಶಲ್ ಫಾದರ್ಸ್ ಡೇ…!!

ವಿಶ್ವದೆಲ್ಲೆಡೆ ತಂದೆಯ ದಿನಾಚರಣೆ ಆಚರಿಸಲಾಗುತ್ತಿದೆ. ಎಲ್ಲರೂ ತಮ್ಮ ತಂದೆ ಪೋಟೋದ ಜೊತೆ ಸ್ಟೇಟಸ್ ಅಪ್ಡೇಟ್ ಮಾಡಿ ಸಂಭ್ರಮಿಸುತ್ತಿದ್ದರೇ, ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರು ಸರ್ಜಾ ಪುತ್ರ ಜ್ಯೂನಿಯರ್ ಚಿರು ತಂದೆಯ ಡ್ಯಾನ್ಸ್ ನೋಡುತ್ತ ಫಾದರ್ಸ್ ಡೇ ಸೆಲಿಬ್ರೇಟ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

ಜ್ಯೂನಿಯರ್ ಚಿರು ಲ್ಯಾಪ್ ಟ್ಯಾಪ್ ಎದುರು ಕೂತಿದ್ದು, ಎಂಟರ್ ಬಟನ್ ಒತ್ತಿದ್ದಾನೆ. ಆಗ ಚಿರು ಸರ್ಜಾ ಅಭಿನಯದ ಚಿತ್ರದ ಹಾಡೊಂದು ಪ್ಲೇ ಆಗಿದೆ. ತಂದೆಯ ಸಿನಿಮಾ ಹಾಡು, ನೃತ್ಯ ನೋಡಿದ ಜ್ಯೂನಿಯರ್ ಚಿರು ಸಖತ್ ಎಂಜಾಯ್ ಮಾಡಿದ್ದಾನೆ.

ಇದನ್ನು ನೋಡಿದ ಮೇಘನಾ ಮತ್ತೆ ಮತ್ತೆ ಅದೇ ವಿಡಿಯೋ  ಪ್ಲೇ ಮಾಡಿ ಮಗನಿಗೆ ತೋರಿಸಿದ್ದಾರಂತೆ . ಸ್ವತಃ ಮೇಘನಾ ರಾಜ್ ಈ ವಿಡಿಯೋವನ್ನು ಫಾದರ್ಸ್ ಡೇ ಸ್ಪೆಶಲ್ ಎಂಬ ಟ್ಯಾಗ್ ಲೈನ್ ಜೊತೆ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ಲೈಕ್ಸ್, ಕಮೆಂಟ್ ಜೊತೆ ವೈರಲ್ ಆಗಿದೆ.

https://www.instagram.com/p/CQVErpClXDz/?utm_medium=copy_link

ಈ ಕಿಬೋರ್ಡ್ ಎಂದರೇ ಅವನಿಗೆ ತುಂಬ ಕುತೂಹಲ. ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತೆ ಎಂದರೇ ಸರಿಯಾದ ಬಟನ್ ಪ್ರೆಸ್ ಮಾಡಿದ. ಆಗ ಅಪ್ಪನ ಸಿನಿಮಾದ ಫೆವರಿಟ್ ಹಾಡು ಬಂತು.  ಮತ್ತೆ ಬೇಕು ಎಂದ. ನಾನು ಖುಷಿ ಖುಷಿಯಿಂದಲೇ ಪದೇ ಪದೇ ಪ್ಲೇ ಮಾಡಿದೆ ಎಂದು ಮೇಘನಾ ಪೋಸ್ಟ್  ಬರೆದಿದ್ದಾರೆ.

7.5 ತಿಂಗಳ ಜ್ಯೂನಿಯರ್ ಚಿರು ಈಗಾಗಲೇ ಅಪ್ಪನನ್ನು ಗುರುತಿಸುತ್ತಿದ್ದು, ಈ ಬಗ್ಗೆ ಮೇಘನಾ ವಿಡಿಯೋ ಸಹ ಹಂಚಿಕೊಂಡಿದ್ದರು. ಇದೇ ತಿಂಗಳ 7 ತಾರೀಕಿನಂದು ಚಿರು ಸರ್ಜಾ ಮೊದಲ ಪುಣ್ಯಸ್ಮರಣೆ ನಡೆದಿದ್ದು, ಮೇಘನಾ ಪುತ್ರನ ಜೊತೆ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದರು.

Comments are closed.