CAT 2022 Admit Card : CAT 2022 ರ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಹೀಗೆ ಮಾಡಿ…

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, (IIM Bengaluru) IIM CAT ನ ಅಧಿಕೃತ ವೆಬ್‌ಸೈಟ್- iimcat.ac.in ನಲ್ಲಿ CAT ಪರೀಕ್ಷೆಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವುದರ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಪರಿಶೀಲಿಸಬಹುದಾಗಿದೆ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ (CAT 2022 Admit Card). ಲಾಗಿನ್‌ ಆಗಲು ಅಭ್ಯರ್ಥಿಗಳು ತಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಒದಗಿಸಬೇಕಾಗುತ್ತದೆ.

CAT 2022 –ಕಾಮನ್‌ ಅಡ್ಮಿಷನ್‌ ಟೆಸ್ಟ್‌ 2022 ಪರೀಕ್ಷೆಯನ್ನು ನವೆಂಬರ್ 27, 2022 ಕ್ಕೆ ನಿಗದಿಪಡಿಸಲಾಗಿದೆ. ಇದನ್ನು 150 ನಗರಗಳಲ್ಲಿ ಸುಮಾರು 400 ಪರೀಕ್ಷಾ ಸ್ಥಳಗಳು ಮ್ಯಾನೇಜ್‌ಮೆಂಟ್ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತವೆ. ಇದನ್ನು IIM ಬೆಂಗಳೂರು ನಿರ್ವಹಿಸುತ್ತದೆ. CAT 2022 ಪರೀಕ್ಷೆಯನ್ನು ಮೂರು ಸೆಷನ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಸೆಷನ್‌ ಎರಡು ಗಂಟೆಗಳ ಕಾಲ ನಡೆಯುತ್ತದೆ. ಅಭ್ಯರ್ಥಿಗಳ ಸ್ಲಾಟ್‌ಗಳನ್ನು ಪ್ರವೇಶ ಕಾರ್ಡ್‌ಗಳ ಮೂಲಕ ಅವರಿಗೆ ತಿಳಿಸಲಾಗುತ್ತದೆ.

CAT 2022 ರ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ?

  • ಮೊದಲು IIMCAT ಯ ಅಧಿಕೃತ ವೆಬ್‌ಸೈಟ್ iimcat.ac.in ಗೆ ಭೇಟಿ ಕೊಡಿ.
  • ಅಲ್ಲಿ ಕಾಣಿಸುವ ಮುಖಪುಟದಲ್ಲಿನ ಲಾಗಿನ್ ವಿಂಡೋದ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ ಹಾಕಿ.
  • ಲಾಗಿನ್ ವಿಂಡೋವನ್ನು ಪ್ರವೇಶಿಸಿದ ನಂತರ, ಲಭ್ಯವಿರುವ CAT ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಪ್ರವೇಶ ಪತ್ರವನ್ನು ಪರಿಶೀಲಿಸಿಕೊಳ್ಳಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ.
  • ಮುಂದಿನ ಅಗತ್ಯಗಳಿಗಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ : KSCA felicitate Roger Binny : ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ನಾಳೆ ತವರೂರ ಗೌರವ, ಚಿನ್ನಸ್ವಾಮಿಯಲ್ಲಿ ನಡೆಯಲಿದೆ ಅದ್ಧೂರಿ ಸನ್ಮಾನ

ಇದನ್ನೂ ಓದಿ : LIC HFL Vidyadhan Scholarship 2022 : LIC HFL ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ

(CAT 2022 Admit Card released. Check here for downloading procedure)

Comments are closed.