ಪರೀಕ್ಷೆಗೂ ಮುನ್ನವೇ ಎಸ್​ಎಸ್ಎಲ್​ಸಿ ಹಾಗೂ ಪಿಯು ರಿಸಲ್ಟ್ ಸಂಭಾವ್ಯ​ ದಿನಾಂಕ ಪ್ರಕಟ

ಕರ್ನಾಟಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಶಿಕ್ಷಣ ಇಲಾಖೆಯು ಎಸ್ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಸಂಭಾವ್ಯ ಫಲಿತಾಂಶ ದಿನಾಂಕಗಳನ್ನು ಪ್ರಕಟಿಸಿದೆ. ಏಪ್ರಿಲ್​ 7ರಂದು ಪಿಯುಸಿ ಹಾಗೂ ಏಪ್ರಿಲ್​ 27ರಂದು ಎಸ್​ಎಸ್​ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.
ಇದುವರೆಗೂ ಕರ್ನಾಟಕ ಶಿಕ್ಷಣ ಮಂಡಳಿ ಪರೀಕ್ಷೆ ಮುಕ್ತಾಯವಾಗದೇ ಫಲಿತಾಂಶದ ದಿನಾಂಕ ಪ್ರಕಟಿಸುತ್ತಿರಲಿಲ್ಲ. ಸಂಭಾವ್ಯ ಫಲಿತಾಂಶ ದಿನಾಂಕ ನಿಗದಿ ಮಾಡಿದರೂ ಅದನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಫಲಿತಾಂಶ ದಿನಾಂಕ ಅವಧಿಗೂ ಮುನ್ನವೇ ಬಹಿರಂಗಗೊಳಿಸಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಫೆಬ್ರವರಿ 28 ರಿಂದ ಆರಂಭ; ಬಸ್‌ ಪ್ರಯಾಣ ಉಚಿತ

ಪರೀಕ್ಷೆ 1 ಮಾತ್ರವಲ್ಲದೇ ಪರೀಕ್ಷೆ 2ರ ಫಲಿತಾಂಶದ ದಿನಾಂಕವೂ ಹೊರಬಿದ್ದಿದೆ. ಏಪ್ರಿಲ್​ 25ರಿಂದ ಮಾರ್ಚ್ 9ರವರೆಗೆ ದ್ವಿತೀಯ ಪಿಯುಸಿ 2ನೇ ಪರೀಕ್ಷೆ ನಡೆಯಲಿದ್ದು ಇದರ ಫಲಿತಾಂಶ ಮೇ 22 ರಂದು ಪ್ರಕಟಗೊಳ್ಳಲಿದೆ. ಹಾಗೂ ಮೇ 18ರಿಂದ 25ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ 2 ನಡೆಯಲಿದ್ದು ಇದರ ಫಲಿತಾಂಶ ಜೂನ್​ 1ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories