ದ್ವಿತೀಯ ಪಿಯುಸಿ ಪರೀಕ್ಷೆ : ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ 99.06 ಫಲಿತಾಂಶ

0

ಮೂಡಬಿದಿರೆ : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 2,779 ವಿದ್ಯಾರ್ಥಿಗಳು ಹಾಜರಾಗಿದ್ದು, 2,753 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99.06 ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಷಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 2,229 ವಿದ್ಯಾರ್ಥಿಗಳ ಪೈಕಿ 2,209 ಮಂದಿ ಉತ್ತೀರ್ಣರಾಗಿದ್ದು, ಶೇ.99.10 ಫಲಿತಾಂಶ ಬಂದಿದೆ. ಇನ್ನು ವಾಣಿಜ್ಯ ವಿಭಾಗದಲ್ಲಿ 502 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 496 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 98.80 ಫಲಿತಾಂಶ ದೊರೆತಿದೆ. ಇನ್ನು ಕಲಾ ವಿಭಾಗದಲ್ಲಿ 48 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100ರ ಫಲಿತಾಂಶ ದಾಖಲಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 18 ವಿದ್ಯಾರ್ಥಿಗಳು ಶೇ.98 ಅಂಕಗಳಿಸಿದ್ರೆ, 304 ವಿದ್ಯಾರ್ಥಿಗಳು ಶೇ.95 ಅಂಕ, 1,050 ವಿದ್ಯಾರ್ಥಿಗಳು ಶೇ.90 ಅಂಕ ಹಾಗೂ 1,767 ವಿದ್ಯಾರ್ಥಿಗಳು ಶೇ,85 ಅಂಕಗಳನ್ನು ಗಳಿಸಿದ್ದಾರೆ. 2,658 ವಿದ್ಯಾರ್ಥಿಗಳು ಪ್ರಥಮ, 74 ವಿದ್ಯಾರ್ಥಿಗಳು ದ್ವಿತೀಯ ಹಾಗೂ 21 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಷಯದಲ್ಲಿ ಅನರ್ಗ್ಯ ಕೆ. 592 ಅಂಕ, ರಘುವೀರ್ ಮತಾಡ್ 592, ಲಿಶನ್ ಎ.ಎ. 592, ಅನಿಲ್ ಬನ್ನಿಶೆಟ್ಟಿ 589, ಬಾಗೇಶ್ ಕೊಡಗನೂರು 588.

ವಿನಾಯಕ್ ಜ್ಞಾನಪ್ಪ ಗದ್ದಿ 588, ಸುವೀಕ್ಷ ವಿ.ಹೆಗ್ಡೆ 588, ಮಹೇಶ್ವರಿ ಎಚ್.ಸಿ. 588 ಹಾಗೂ ಸ್ವಾತಿ ಬಿ. ಮಾಲೆಮಠ್ 587 ಅಂಗಳಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಹರ್ಷ ಜೆ.ಆಚಾರ್ಯ 593, ಈಶ್ವರ್ ವಿಜಯಸ್ವಾಮಿ ಎಲಿಗಾರ್ 591, ಶ್ರೇಯಾ ಕೆ.ಬಿ 591, ಪ್ರತೀತ 590, ರಿಹಾಲ್ ಅಯ್ಯಪ್ಪ ಎಂ.ಎಸ್. 590

ಶ್ರೀ ಸಮರ್ಥ್ ಜಿ.589, ಭಾರ್ಗವಿ ಬಿ. 589, ಚಂದನ್ ಡಿ.ಹೆಗ್ಡೆ 589, ಪ್ರಿಯಾಂಕ ಜಿ.ಧನ್ಯಾ 589 ಹಾಗೂ ಐಶ್ವರ್ಯ ಎಂ. 589 ಅಂಕಗಳನ್ನು ಗಳಿಸಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಸಿಬ್ಬಂದಿಗಳಿಗೆ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Leave A Reply

Your email address will not be published.