rohith chakrathirtha : ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಬೆಂಗಳೂರು : rohith chakrathirtha : ರಾಜ್ಯದಲ್ಲಿ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಸರ್ಕಾರವು ನಿನ್ನೆಯಷ್ಟೇ ರೋಹಿತ್​ ಚಕ್ರತೀರ್ಥರನ್ನು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಹೊರ ಹಾಕಿತ್ತು, ಇದರ ಜೊತೆಯಲ್ಲಿ ಪಿಯು ಪಠ್ಯ ಪರಿಷ್ಕರಣೆಯ ನಿರ್ಧಾರದಿಂದಲೂ ಹಿಂದೆ ಸರಿದಿದೆ. ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ ನಾಗೇಶ್​​ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.


ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್​, ದ್ವಿತೀಯ ಪಿಯುಸಿಯಲ್ಲಿ ಒಂದು ಪಾಠ ಪರಿಷ್ಕರಣೆಗಾಗಿ ರಾಜ್ಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿತ್ತು. ಒಂದು ಪಾಠಕ್ಕಾಗಿ ಹೊಸ ಸಮಿತಿಯನ್ನು ರಚಿಸದೇ ಹಳೆಯ ಸಮಿತಿಗೇ ಜವಾಬ್ದಾರಿಯನ್ನು ನೀಡಿದ್ದೆವು. ಆದರೆ ಇದೀಗ ಈ ಸಮಿತಿಯನ್ನು ನಾವು ವಿಸರ್ಜನೆ ಮಾಡಿದ್ದೇವೆ. ಆದ್ದರಿಂದ ಪಿಯುಸಿಯಲ್ಲಿ ಸಧ್ಯ ಇರುವ ಪಠ್ಯವೇ ಮುಂದುವರಿಯಲಿದೆ.ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ರೋಹಿತ್​ ಚಕ್ರತೀರ್ಥ ನೇತೃತ್ವದ ಸಮಿತಿಗೆ ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣಾ ಜವಾಬ್ದಾರಿಯನ್ನು ನೀಡಲಾಗಿತ್ತು. ದ್ವಿತೀಯ ಪಿಯುಸಿಯ ಅಧ್ಯಾಯ 4.2 ಹೊಸ ಧರ್ಮಗಳ ಉದಯ ಉದಯ ಎಂಬ ಪಠ್ಯ ಭಾಗವನ್ನು ಪರಿಷ್ಕರಣೆ ಮಾಡಲು ಸಮತಿಯು ವರದಿ ತಯಾರಿಸುತ್ತಿತ್ತು. ಆದರೆ ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣೆ ಮಾಡಲು ರೋಹಿತ್​ ಚಕ್ರತೀರ್ಥರಿಗೆ ಜವಾಬ್ದಾರಿ ನೀಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇದೀಗ ಸಮಿತಿಯನ್ನೇ ವಿಸರ್ಜನೆ ಮಾಡಿದ್ದು ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಯ ನಿರ್ಧಾರವನ್ನು ಕೈ ಬಿಟ್ಟಿದೆ.


2021ರ ಫೆಬ್ರವರಿ 17ರಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​​ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಯ ಜವಾಬ್ದಾರಿಯನ್ನು ರೋಹಿತ್​ ಚಕ್ರತೀರ್ಥ ನೇತೃತ್ವದ ಸಮಿತಿಗೆ ನೀಡುವಂತೆ ನಿರ್ದೇಶನ ನೀಡಿ ಟಿಪ್ಪಣಿ ಕಳುಹಿಸಿದ್ದಾರೆ.

ಇದನ್ನು ಓದಿ : teacher sleeps in classroom : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ

ಇದನ್ನೂ ಓದಿ : Student Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

pu text books revision basavaraj bommai bc nagesh education department rohith chakrathirtha

Comments are closed.