Viagra overdose : ಅತಿಯಾದ ವಯಾಗ್ರ ಸೇವಿಸಿ ಆಸ್ಪತ್ರೆಗೆ ದಾಖಲಾದ ನವವಿವಾಹಿತ

Viagra overdose  : ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ನವ ವಿವಾಹಿತ ವ್ಯಕ್ತಿಯೊಬ್ಬರು ಲೈಂಗಿಕ ಕ್ರಿಯೆಯಲ್ಲಿ ಅತಿಯಾದ ಸುಖ ಅನುಭವಿಸಬೇಕೆಂದು ಅಗತ್ಯಕ್ಕಿಂತ ಹೆಚ್ಚು ವಯಾಗ್ರ ಔಷಧಿಯನ್ನು ಸೇವಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದರೂ ಸಹ ಈತ ಜೀವಮಾನವಿಡೀ ನೋವು ಅನುಭವಿಸಬೇಕೆಂದು ವೈದ್ಯರು ತಿಳಿಸಿದ್ದಾರೆ.


ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈತನಿಗೆ ಸ್ನೇಹಿತರು ನೀನು ವಯಾಗ್ರವನ್ನು ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಬಹುದೆಂದು ಸಲಹೆ ನೀಡಿದ್ದರು. ಸ್ನೇಹಿತರ ಈ ಸಲಹೆಯನ್ನು ಕೇಳಿದ ಈತ ವಯಾಗ್ರ ಸೇವಿಸಲು ಆರಂಭಿಸಿದ್ದ. ಆದರೆ ಈತ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಯಾಗ್ರವನ್ನು ಸೇವಿಸಿದ್ದ. ಇದೇ ಈತನಿಗೆ ಮುಳುವಾಗಿದೆ. ಅತಿಯಾದ ವಯಾಗ್ರ ಸೇವಿಸಿದ ಪರಿಣಾಮ ಈತನ ಶಿಶ್ನ ನಿಮಿರಿದ್ದು ಸಾಮಾನ್ಯ ಸ್ಥಿತಿಗೆ ಬರಲೇ ಇಲ್ಲ. ಅಲ್ಲದೇ ಅತಿಯಾದ ನೋವು ಕೂಡ ಆರಂಭವಾದ ಹಿನ್ನೆಲೆಯಲ್ಲಿ ಈತನು ಆಸ್ಪತ್ರೆಗೆ ದಾಖಲಾಗಬೇಕಾಗಿದೆ.


20 ದಿನಗಳು ಕಳೆದರೂ ಸಹ ಈತನ ಶಿಶ್ನ ನಿಮಿರುವಿಕೆಯಿಂದ ಸಾಮಾನ್ಯ ಸ್ಥಿತಿಗೆ ಮರಳಲೇ ಇಲ್ಲ.ಈತನ ಅವಸ್ಥೆಯಿಂದ ಬೇಸತ್ತ ಪತ್ನಿಯು ಪತಿಯನ್ನು ತೊರೆದು ತನ್ನ ತವರು ಮನೆಗೆ ಮರಳಿದಳು .ಆದರೆ ಪತಿಯ ಮನೆಯವರು ಸಾಕಷ್ಟು ಮನವಿ ಮಾಡಿದ ಬಳಿಕ ಪತಿಯ ಮನೆಗೆ ಮರಳಿದ್ದಾರೆ. ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಿಸಿ ಬಳಿಕ ಮತ್ತೆ ತನ್ನ ತವರು ಮನೆಗೆ ವಾಪಸ್ಸಾಗಿದ್ದಾಳೆ .


ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಈತನಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.ಆದರೂ ಸಹ ಈತನಿಗೆ ನೋವು ಜೀವಮಾನದುದ್ದಕ್ಕೂ ಇರುತ್ತದೆ ಎಂದು ಹೇಳಿದ್ದಾರೆ .ಈತನಿಗೆ ಮಕ್ಕಳಾಗಲು ಯಾವುದೇ ಸಮಸ್ಯೆಯಿಲ್ಲ. ಆದರೆ ಶಿಶ್ನ ನಿಮಿರಿದ್ದನ್ನು ಸಾಮಾನ್ಯ ಸ್ಥಿತಿಗೆ ತರಲು ಈತ ಇನ್ಮುಂದೆ ಬಿಗಿಯಾದ ಬಟ್ಟೆಗಳನ್ನೇ ಧರಿಸಬೇಕು. ಆಗ ಮಾತ್ರ ಅದು ಕಾಲಾಂತರದಲ್ಲಿ ನಿಮಿರುವಿಕೆ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ಹೇಳಿದ್ದಾರೆ.

ಇದನ್ನು ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ಇದನ್ನೂ ಓದಿ : teacher sleeps in classroom : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ

Viagra overdose lands newly married UP man in hospital, survives with priapism

Comments are closed.