ವಿವೋ ಇಂಡಿಯಾದಿಂದ 60,000 ರೂ. ವಿದ್ಯಾರ್ಥಿವೇತನ; ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಭರ್ಜರಿ ಪ್ರೋತ್ಸಾಹ
Vivo KanyaGyaan Scholarship 2026: ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿ ವಿವೋ ಇಂಡಿಯಾ (Vivo India) ಸಂಸ್ಥೆಯು ‘ವಿವೋ ಕನ್ಯಾಜ್ಞಾನ’ (Vivo KanyaGyaan) ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದೆ. ಆರ್ಥಿಕ ಅಡಚಣೆಯಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸುವ ಹೆಣ್ಣುಮಕ್ಕಳಿಗೆ ಈ ಯೋಜನೆ ಸಂಜೀವಿನಿಯಾಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು)
- ಕೋರ್ಸ್: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಅಥವಾ ವೈದ್ಯಕೀಯ (STEM) ವಿಭಾಗದ ಪದವಿ ಕೋರ್ಸ್‌ಗಳ ಪ್ರಥಮ ಅಥವಾ ದ್ವಿತೀಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಹರು.
- ಅಂಕಗಳು: ಅಭ್ಯರ್ಥಿಗಳು ತಮ್ಮ 10 ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಶೇ. 70ರಷ್ಟು ಅಂಕಗಳನ್ನು ಪಡೆದಿರಬೇಕು.
- ಆದಾಯ: ಕುಟುಂಬದ ವಾರ್ಷಿಕ ಆದಾಯವು 5 ಲಕ್ಷ ರೂ. ಗಳ ಮಿತಿಯೊಳಗಿರಬೇಕು.
- ಆದ್ಯತೆ: ಸರ್ಕಾರಿ ಕಾಲೇಜು ಅಥವಾ NIRF ರ್ಯಾಂಕಿಂಗ್ ಹೊಂದಿರುವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಹಾಗೂ ಒಂಟಿ ಪೋಷಕರಿರುವ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ.
ಸ್ಕಾಲರ್‌ಶಿಪ್ ಮೊತ್ತ ಮತ್ತು ಸೌಲಭ್ಯ:
ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ವಾರ್ಷಿಕ 60,000 ರೂ. ಆರ್ಥಿಕ ನೆರವು ಸಿಗಲಿದೆ. ಕೇವಲ ಹಣಕಾಸಿನ ಸಹಾಯ ಮಾತ್ರವಲ್ಲದೆ, ವೃತ್ತಿಜೀವನ ರೂಪಿಸಿಕೊಳ್ಳಲು ಉದ್ಯಮದ ತಜ್ಞರಿಂದ ಮಾರ್ಗದರ್ಶನ (Mentorship) ಕೂಡ ಈ ಯೋಜನೆಯ ಭಾಗವಾಗಿರಲಿದೆ.
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್!
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ.
- 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳು.
- ಪ್ರಸಕ್ತ ವರ್ಷದ ಕಾಲೇಜು ಪ್ರವೇಶ ದಾಖಲೆ (Bonafide/Fee Receipt).
- ಕುಟುಂಬದ ಆದಾಯ ಪ್ರಮಾಣಪತ್ರ.
- ಬ್ಯಾಂಕ್ ಪಾಸ್‌ಬುಕ್ ಪ್ರತಿ.
- ಪ್ರಬಂಧ: ನೀವು ಏಕೆ STEM ಕ್ಷೇತ್ರವನ್ನು ಆರಿಸಿಕೊಂಡಿದ್ದೀರಿ ಎಂಬ ಬಗ್ಗೆ ಸುಮಾರು 200 ಪದಗಳ ಕಿರು ಲೇಖನ ಬರೆಯಬೇಕು.
ಪ್ರಮುಖ ದಿನಾಂಕ ಮತ್ತು ವಿಧಾನ:
- ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2026.
- ಸಲ್ಲಿಸುವ ವಿಧಾನ: Buddy4Study ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸಲಹೆ: ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.



