150 Minutes Workout in a Week : ನಿಮಗೆ ಪ್ರತಿದಿನ ವರ್ಕ್‌ಔಟ್‌ ಮಾಡ್ಲಿಕ್ಕೆ ಆಗ್ತಾ ಇಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು ಅಂತ ಹೇಳ್ತಾ ಇದೆ ಅಧ್ಯಯನ

ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದ (Busy Schedule) ದೈಹಿಕ ಚಟುವಟಿಕೆಯನ್ನು (Workout) ನಾವು ನಿರ್ಲಕ್ಷಿಸುತ್ತೇವೆ. ಆದರೆ, ವ್ಯಾಯಾಮವು ದೇಹಕ್ಕೆ ಉತ್ತಮವಾದದ್ದು. ಅದು ನಮ್ಮ ಪೂರ್ತಿ ದೇಹವನ್ನು ಆರೋಗ್ಯದಿಂದ (Healthy) ಇಡುತ್ತದೆ. ಆದರೆ ಪ್ರತಿ ದಿನ ವರ್ಕ್‌ಔಟ್‌ ಮಾಡಲು ಆಗುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ, ಒಂದು ವಾರದಲ್ಲಿ 150 ನಿಮಿಷಗಳ ಕಾಲ ಮಾಡುವ ವ್ಯಾಯಾಮವು (150 Minutes Workout in a Week ) ದೇಹದ ಮೇಲೆ ಧನಾತ್ಮಕ ಆರೋಗ್ಯಕರ ಪರಿಣಾಮವನ್ನುಂಟು ಮಾಡಬಲ್ಲದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ವೇಗದ ನಡಿಗೆಯಂತಹ 150 ನಿಮಿಷಗಳ ಮಧ್ಯಮ ವೇಗದ ಚಟುವಟಿಕೆಗಳು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಈಗ ಅಧ್ಯಯನಗಳಿಂದ ತಿಳಿದು ಬಂದಿದೆ. ಒಂದು ವಾರದಲ್ಲಿ ಮಾಡುವ 150 ನಿಮಿಷಗಳ ವರ್ಕ್‌ಔಟ್‌ ಹೇಗೆ ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನುಂಟು ಮಾಡಬಲ್ಲದು ಇಲ್ಲಿದೆ ಓದಿ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:
ಒಂದು ವಾರದಲ್ಲಿ ಮಾಡುವ 150 ನಿಮಿಷಗಳ ವ್ಯಾಯಾಮವು ದೇಹವನ್ನು ಹಲವು ರೀತಿಯಲ್ಲಿ ಸುಧಾರಿಸುತ್ತದೆ. ಇದರ ಪರಿಣಾಮವಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅಧ್ಯಯನಗಳು ಹೃದಯದ ಆರೋಗ್ಯದ ಮೇಲೆ ವ್ಯಾಯಾಮದ ಧನಾತ್ಮಕ ಪರಿಣಾಮಗಳನ್ನು ತೋರಿಸಿವೆ. ಆದರೆ ಎಷ್ಟು ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂಬುದಕ್ಕೂ ಮಿತಿಗಳಿವೆ.

ಒತ್ತಡದಿಂದಾಗುವ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ:
ವಾರದಲ್ಲಿ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಒತ್ತಡವನ್ನು ಮತ್ತು ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಜೊತೆಗೆ ಆರೋಗ್ಯದ ಸ್ಥಿತಿಯನ್ನು ಸುಧಾರಿಸುತ್ತದೆ. ದೀರ್ಘಕಾಲದ ಖಾಯಿಲೆ ಅಥವಾ ಪರಿಸ್ಥಿತಿಗಳಾದ ಅಧಿಕ ರಕ್ತದೊತ್ತಡ, ಟೈಪ್ 2 ಡಯಾಬಿಟಿಸ್, ಎಚ್‌ಐವಿ ಮತ್ತು ಕ್ಯಾನ್ಸರ್ ನೊಂದಿಗೆ ಹೋರಾಡಿದವರು ವ್ಯಾಯಾಮವನ್ನು ಮಾಡಲು ಹೆದರುತ್ತಾರೆ. ಅಂತಹವರು ಮಧ್ಯಮ ತೀವ್ರತೆಯ ಏರೋಬಿಕ್‌ ವರ್ಕ್‌ಔಟ್‌ಗಳನ್ನು ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ವಾರದಲ್ಲಿ 5 ದಿನ 30 ನಿಮಷಗಳ ಮಧ್ಯಮ ವೇಗದ ವ್ಯಾಯಾಮ ಮಾಡಬಹುದು. ಇದು ದೇಹಕ್ಕೆ ಒತ್ತಡದಿಂದ ಪಾರಾಗಲು ಸಹಾಯ ಮಾಡುತ್ತದೆ.

ಫ್ಯಾಟಿ ಲಿವರ್‌ ಅನ್ನು ಕಡಿಮೆ ಮಾಡುತ್ತದೆ:
ಇತ್ತೀಚಿನ ವಿಮರ್ಶೆ ಮತ್ತು ಅಧ್ಯಯನಗಳಿಂದ ಒಂದು ವಾರದಲ್ಲಿ ಮಾಡುವ 150 ನಿಮಿಷಗಳ ವೇಗದ ನಡಿಗೆಯು ಫ್ಯಾಟಿ ಲಿವರ್‌ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಲ್ಲದು ಎಂದು ತಿಳಿದುಬಂದಿದೆ. ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನವು 150 ನಿಮಿಷಗಳ ಮಧ್ಯಮ ಮತ್ತು ತೀವ್ರವಾದ ಏರೋಬಿಕ್ ವ್ಯಾಯಾಮವು ಲಿವರ್‌ ನಲ್ಲಿರುವ ಫ್ಯಾಟ್‌ ಅನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.

ಇದನ್ನೂ ಓದಿ : Pacemaker and Smartwatches : ಸ್ಮಾರ್ಟ್‌ವಾಚ್‌ನಿಂದ ಪೇಸ್‌ಮೇಕರ್‌ ಹಾಕಿಸಿಕೊಂಡವರಿಗೆ ತೊಂದರೆ ಆಗಬಹುದಾ? ಅಧ್ಯಯನ ಹೇಳುವುದಾದರೂ ಏನು?

ಇದನ್ನೂ ಓದಿ : ಬಣ್ಣಗಳ ಹಬ್ಬ ಹೋಳಿಯ ಬಗ್ಗೆ ಇಲ್ಲಿದೆ ಇಂಟರಸ್ಟಿಂಗ್‌ ಸ್ಟೋರಿ

(150 Minutes Workout in a Week, What new study says?)

Comments are closed.