Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

ಬಿಯರ್ ಎಲ್ಲಾ ದೇಶಗಳಲ್ಲೂ ಒಂದು ಜನಪ್ರಿಯ ಪಾನೀಯ. ಸೆಪ್ಟೆಂಬರ್ 2018ರ ಅಧ್ಯಯನವೊಂದರ ಪ್ರಕಾರ ಅಮೆರಿಕದಲ್ಲಿ ಬಿಯರ್ ಅತಿ ಜನಪ್ರಿಯ ಆಲ್ಕೊಹಾಲ್ ಯುಕ್ತ ಪಾನೀಯವಾಗಿದೆ. ಕೆಲವು ಸಂಶೋಧನೆಗಳ ಪ್ರಕಾರ ಈ ಪಾನೀಯವು ಹಲವು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಅದೇ ರೀತಿ ಹಲವು ಕಾಸ್ಮೆಟಿಕ್ ಪ್ರಾಡಕ್ಟ್ ಗಳಲ್ಲೂ ಬಿಯರ್ ಬಳಕೆಯಾಗುತ್ತದೆ. ಉದಾ: ಶಾಂಪೂ, ಫೇಸ್ ವಾಷ್ ಇತ್ಯಾದಿ. (Beer Drinking Habits)

ಇನ್ನು ಹಲವು ಸಂಶೋಧನೆಗಳ ಪ್ರಕಾರ ಯಾವುದೇ ಆಲ್ಕೊಹಾಲ್ ಯುಕ್ತ ಪಾನೀಯವನ್ನು ಸಣ್ಣ ಪ್ರಮಾಣದಲ್ಲಿ ಸಹ ಸೇವಿಸುವುದೂ ಆರೋಗ್ಯಕ್ಕೆ ಹಾನಿಕರ. 2015- 2020 ರ ಅಮೆರಿಕದ ಖ್ಯಾತ ಸಂಸ್ಥೆಯೊಂದು ರೂಪಿಸಿದ ಪ್ರಕಾರ ಪುರುಷರು ದಿನಕ್ಕೆ 2 ಬಾರಿ ಹಾಗೂ ಮಹಿಳೆಯರು 1 ಡ್ರಿಂಕ್ಸ್ ನಂತೆ ಕುಡಿಯಬಹುದು.

ಬಿಯರ್ ಆರೋಗ್ಯಕ್ಕೆ ಹೇಗೆ ಮಾರಕ ?

ಬಿಯರ್ ಜಾಸ್ತಿ ಕ್ಯಾಲರಿ ಹಾಗೂ ಫ್ಯಾಟ್ ಹೊಂದಿದ್ದು ಇದು ದೇಹದ ತೂಕಹೆಚ್ಚುವಂತೆ ಮಾಡುತ್ತದೆ. ಒಬೆಸಿಟಿ ಉಂಟಾದರೆ ಮುಂದೆ ಹೃದಯಕ್ಕೆ ಜಾಸ್ತಿ ಅಪಾಯ ಕಟ್ಟಿಟ್ಟ ಬುತ್ತಿ. ದಿನಕ್ಕೆ ಮೂರಕ್ಕಿಂತ ಹೆಚ್ಚು ಬಿಯರ್ ಕುಡಿಯುವುದು ಹಸಿವನ್ನು ಕುಗ್ಗಿಸುತ್ತದೆ. ಕಿಡ್ನಿ ನಮ್ಮ ದೇಹದ ವಾಟರ್ ಫಿಲ್ಟರ್ ಇದ್ದಂತೆ. ಇವುಗಳ ಕೆಲಸ ರಕ್ತವನ್ನು ಪ್ಯೂರಿಫೈ ಮಾಡುವುದು. ನ್ಯಾಷನಲ್ ಕಿಡ್ನಿ ಫೌಂಡೇಶನ್ ಪ್ರಕಾರ ಜಾಸ್ತಿ ಆಲ್ಕೋಹಾಲ್ ಸೇವನೆ ಕಿಡ್ನಿ ಡ್ಯಾಮೇಜ್ ಗೆ ಕಾರಣವಾಗಬಹುದು. ಹಾಗೇ ಸುಸ್ತು, ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳು ಆಲ್ಕೋಹಾಲ್ ಸೇವನೆಯಿಂದ ಉಂಟಾಗುತ್ತದೆ ಎಂದು ನ್ಯಾಶನಲ್ ಸೆಂಟರ್ ಫಾರ್ ಬಯೋ ಟೆಕ್ ನಾಲಜಿ ಇನ್ಪೋರ್ಮೇಷನ್ ಹೇಳುತ್ತದೆ.

ಜನವರಿ 2020 ರ ನ್ಯೂಟ್ರಿಯೆಂಟ್ ರಿವ್ಯೂ ಪ್ರಕಾರ, ಆಲ್ಕೋಹಾಲ್ ಸೇವನೆಯು ಹೃದಯಕ್ಕೆ. ವಾರಕ್ಕೆ ಎರಡರಿಂದ ಮೂರು ಅಥವಾ ಅಧಿಕ ಬಾರಿ ಕುಡಿಯುವುದು ಸ್ಟ್ರೋಕ್, ಹೈ ಬಿಪಿ, ಡಯಾಬಿಟಿಸ್ ಗಳಿಗೆ ನಾವೇ ದಾರಿ ಮಾಡಿದಂತೆ. ಆಲ್ಕೋಹಾಲ್ ಫ್ರೀ ಬಿಯರ್ ಕುಡಿಯುವುದರಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಇಲ್ಲವಾಗಿಸಬಹುದು ಎಂದು 2018ರ ನ್ಯೂಟ್ರಿಯೆಂಟ್ ಸರ್ವೇ ಹೇಳುತ್ತದೆ.

ಅಧಿಕ ಬಿಯರ್ ಸೇವನೆಯು ಬ್ರೈನ್ ಡ್ಯಾಮೇಜ್ ಹಾಗೂ ಅಲ್ಜೈಮರ್ಸ್ ಕಾಯಿಲೆಗೂ ಕಾರಣ ಆಗಬಹುದು. ಒಟ್ಟಿನಲ್ಲಿ ಹೇಳುವುದಾದರೆ, ಆಲ್ಕೋಹಾಲ್ ಇರುವ ಪಾನೀಯಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಗರ್ಭಿಣಿಯರು, ವಾಹನ ಸವಾರರು, ಮಕ್ಕಳು ಇದನ್ನು ಸೇವಿಸಲೇಬಾರದು. ಒಂದು ವೇಳೆ ಈಗಾಗಲೇ ಅಡಿಕ್ಟ್ ಆಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಡಿಕ್ಷನ್ ನಿಂದ ಹೊರಬರಬಹುದು.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

ಇದನ್ನೂ ಓದಿ : Acidity Tips : ಹೀಗೆ ಮಾಡಿದ್ರೆ ಅಸಿಡಿಟಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

( Beer drinking habits what happens in your body )

Comments are closed.