Caffeine Cause Acne : ಕೆಫಿನ್‌ ನಿಂದ ಮೊಡವೆ ಹೆಚ್ಚಾಗುತ್ತದೆಯೇ; ತಜ್ಞರು ಹೇಳುವುದಾದರೂ ಏನು….

ಬಹಳಷ್ಟು ಜನರಿಗೆ ಕಾಫಿ (Coffee) ಇಲ್ಲದೇ ದಿನವನ್ನು ಪ್ರಾರಂಭಿಸಲು ಸಾಧ್ಯವೇ ಇಲ್ಲ. ಕಾಫಿ ಜೀವಾಮೃತ ಎಂದರೂ ತಪ್ಪಾಗಲಾರದು. ಮುಂಜಾನೆಯ ಒಂದು ಕಪ್ ಕಾಫಿಯಿಂದ ಹಿಡಿದು ಸಂಜೆಯವರೆಗಿನ ಕೆಲಸ ಮುಗಿಸುವವರೆಗೂ ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕಾಫಿ ಶಕ್ತಿ ವರ್ಧಕ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದೆಲ್ಲಾ ಹೆಸರುವಾಸಿಯಾಗಿದೆ. ಆದರೂ ಇಷ್ಟೆಲ್ಲಾ ಒಳ್ಳೆಯ ವಿಷಯಗಳ ಜೊತೆಗೆ ಕೆಲವು ಅನಾನೂಕೂಲಗಳು ಸಹ ಕಾಫಿಯಲ್ಲಿದೆ. ಹೆಚ್ಚು ಕೆಫೀನ್ (Caffeine Cause Acne) ಸೇವನೆಯಿಂದ ಕೆಲವು ಅನಾರೋಗ್ಯಗಳು ಕಾಣಿಸಬಹುದು. ಅವುಗಳಲ್ಲಿ ಮೊಡವೆ (Acne) ಸಮಸ್ಯೆಯೂ ಒಂದು.

ಕಾಫಿಯ ಮೇಲಿರುವ ಸಾಮಾನ್ಯ ಆರೋಪವೆಂದರೆ ಅದು ಮೊಡವೆಗಳನ್ನು ಉಂಟುಮಾಡುತ್ತದೆ ಎಂಬುದು. ಇದರಲ್ಲಿರುವ ಪದಾರ್ಥಗಳು ನೇರವಾಗಿ ನಿಮ್ಮ ಚರ್ಮದ ಮೇಲೆ ಮೊಡವೆಗಳನ್ನು ಉಂಟುಮಾಡುವುದಿಲ್ಲ. ಆದರೆ ಹೇಗೆ ಸೇವಿಸುತ್ತೀರಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದರ ಮೇಲೆ ಅದು ನಿಮ್ಮ ತ್ವಚೆಯ ಮೇಲೆ ಪರಿಣಾಮಗಳನ್ನು ಬೀರುತ್ತದೆ.

ಕಾಫಿಯಲ್ಲಿರುವ ಕೆಫೀನ್ ಮೊಡವೆಗಳಿಗೆ ಕಾರಣವಾಗುವುದಾದರೂ ಹೇಗೆ?

ಕಾಫಿ ನಿದ್ರೆಗೆ ಅಡ್ಡಿಪಡಿಸುತ್ತದೆ:
ದಿನ ಪೂರ್ತಿ ಕೆಲಸವನ್ನು ಮಾಡುವವರಿಗೆ ಕಾಫಿ ಶಕ್ತಿಯನ್ನು ತರುವ ಪಾನೀಯ ಎಂದು ಪ್ರಸಿದ್ಧವಾಗಿದೆ. ಆದರೆ ಕಾಫಿ ನಿದ್ರೆಗೆ ಅಡ್ಡಿಪಡಿಸುತ್ತದೆ. ದೇಹವು ನಿದ್ರಾಹೀನತೆಗೆ ಒಳಪಡುವಂತೆ ಮಾಡತ್ತದೆ. ನಿದ್ರೆಯ ಕೊರತೆಯು ಒತ್ತಡ ಹೆಚ್ಚಿಸಲು ಕಾರಣವಾಗುತ್ತದೆ. ನಿಮ್ಮ ದೇಹದಲ್ಲಿ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಇದು ಚರ್ಮದ ಮೇಲೆ ಮೊಡವೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಜೀವಕೋಶಗಳ ಉತ್ಪಾದನೆಯನ್ನು ಸರಿಪಡಿಸಲು ಮತ್ತು ಅವುಗಳನ್ನು ಪುನಃಸ್ಥಾಪಿಸಲು ನಮ್ಮ ದೇಹಕ್ಕೆ ಸಾಕಷ್ಟು ನಿದ್ರೆಯ ಅಗತ್ಯವಿರುತ್ತದೆ. ನಿದ್ರೆಯ ಸಮಯದಲ್ಲಿ ದೇಹವು ಚರ್ಮವನ್ನು ಸರಿಪಡಿಸುವ ಅವಕಾಶಗಳು ಸಿಗದೇ, ಅದು ಚರ್ಮದಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಆಗ ಮೊಡವೆಗಳು ಸಂಭವಿಸುತ್ತದೆ.

ಒತ್ತಡವನ್ನು ಹೆಚ್ಚಿಸುತ್ತದೆ :
ಕಾಫಿಯು ಆಂಟಿಒಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಇದು ನಿಮ್ಮ ತ್ವಚೆಯನ್ನು ಸ್ವತಂತ್ರ ರಾಡಿಕಲ್‌ಗಳಿಂದ ಮುಕ್ತವಾಗಿಡುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಆದರೂ ಕೆಫೀನ್ ಒತ್ತಡವನ್ನು ಉಂಟುಮಾಡುವ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಹಾರ್ಮೋನ್ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ನೀವು ಹೆಚ್ಚೆಚ್ಚು ಕಾಫಿ ಸೇವಿಸಿದಾಗ, ಅದು ನಿಮ್ಮ ಒತ್ತಡದ ಮಟ್ಟಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ದೇಹದಲ್ಲಿ ಅಧಿಕ ಪ್ರಮಾಣದ ಕಾರ್ಟಿಸೋಲ್ ಇದ್ದರೆ ಅದು ನಿಮ್ಮ ಚರ್ಮದ ಮೇಲೆ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಿ ಮೊಡವೆಗಳು ಹೆಚ್ಚಾಗುತ್ತದೆ. ಕಾಫಿ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕೆ ಪ್ರತಿಯಾಗಿ ಚರ್ಮದ ಮೇಲೆ ತೈಲ ಉತ್ಪಾದನೆಗೊಳ್ಳುತ್ತದೆ. ಅವು ಮೊಡವೆಗಳನ್ನು ಉಂಟುಮಾಡುತ್ತದೆ.

ಕಾಫಿ ತುಂಬಾ ಸಿಹಿಯಾಗಿರುವುದು:
ನಿಮಗೆ ಕಾಫಿ ತುಂಬಾ ಸಿಹಿಯಾಗಿರಬೇಕೇ? ಇದು ದೇಹಕ್ಕೆ ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡಲು ಕಾರಣವಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾದಾಗ, ಮೇದೋಗ್ರಂಥಿಗಳ ಸ್ರಾವವೂ ಹೆಚ್ಚಾಗುತ್ತದೆ. ಇದು ಚರ್ಮದ ಮೇಲಿನ ರಂಧ್ರಗಳನ್ನು ಮುಚ್ಚುತ್ತದೆ. ಅಂತಿಮವಾಗಿ ಮೊಡವೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಸಕ್ಕರೆಯಿಲ್ಲದ ಕಾಫಿ ಸೇವನೆ ಚರ್ಮಕ್ಕೆ ಒಳ್ಳೆಯದು ಎನ್ನಲಾಗುತ್ತದೆ.

ಹಾಲಿನೊಂದಿಗಿನ ಕಾಫಿ ಸೇವನೆಯು ಮೊಡವೆಗಳನ್ನು ಉಂಟುಮಾಡಬಹುದು:
ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಅದು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಮೊಡವೆಗಳಿಗೆ ಕಾರಣವಾಗಬಹುದು. ಹಾಲಿನಲ್ಲಿರುವ ಇನ್ಸುಲಿನ್ ಅಂಶವು ಚರ್ಮದ ಮೇಲೆ ಮೇದೋಗ್ರಂಥಿಗಳ ಸ್ರಾವ ಹೆಚ್ಚಿಸುತ್ತದೆ. ಅಧಿಕವಾದ ಮೇದೋಗ್ರಂಥಿಗಳ ಸ್ರಾವ ಮತ್ತು ಮುಚ್ಚಿಹೋಗಿರುವ ರಂಧ್ರಗಳಿರುವಾಗ ಮೊಡವೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.

ಹಾಗಾಗಿ, ಕಾಫಿ ಪ್ರಿಯರೇ ನಿಮ್ಮ ಕಾಫಿ ಮೊಡವೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಮಿತವಾಗಿ ಕಾಫಿ ಸೇವಿಸಿ ಮತ್ತು ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ : Ghee Benefits : ತುಪ್ಪ ಚಳಿಗಾಲದಲ್ಲಿ ಕಾಡುವ ಒಣ ತ್ವಚೆಗೆ ದಿವ್ಯೌಷಧಿ

ಇದನ್ನೂ ಓದಿ : Custard Apple Benefits : ಈ ಋತುವಿನ ಹಣ್ಣು ‘ಸೀತಾಫಲ’ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

(Caffeine Cause Acne how coffee causes acne)

Comments are closed.