ಆರೋಗ್ಯದ ಸಮಸ್ಯೆಗೆ ತೆಂಗಿನಕಾಯಿಯ ಹಾಲು ರಾಮಬಾಣ

0

ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಆರೋಗ್ಯ ವೃದ್ದಿಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ತೆಂಗಿನ ಎಣ್ಣೆಯಿಂದಲೂ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ. ಅಷ್ಟೇ ಯಾಕೆ ತೆಂಗಿನ ಕಾಯಿಯಿಲ್ಲದೇ ಅಡುಗೆ ಪೂರ್ಣವಾಗೋದೆ ಇಲ್ಲಾ.

ಆದ್ರೀಗ ತೆಂಗಿನ ಕಾಯಿಯ ಹಾಲು ಕೂಡ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ ಅನ್ನೋದು ಹಲವರಿಗೆ ಗೊತ್ತೇ ಇಲ್ಲಾ.

ನಿತ್ಯದ ಆಹಾರದಲ್ಲಿ ಬಳಕೆಯಾಗುವ ತೆಂಗಿನ ಹಾಲಿನಲ್ಲಿ ಪೊಟಾಷಿಯಂ, ಮೆಗ್ನಿಷಿಯಂ, ವಿಟಮಿನ್ ಬಿ, ವಿಟಮಿನ್ ಸಿ, ಇ, ಐರನ್, ಜಿಂಕ್ ಮತ್ತು ಸೆಲೆನಿಯಂ ಆಂಟಿ ಅಕ್ಸಿಡೆಂಟ್​ ಅಂಶಗಳು ಹೇರಳವಾಗಿ ಕಂಡು ಬರುತ್ತದೆ. ಈ ಎಲ್ಲಾ ಪೋಷಕಾಂಶಗಳನ್ನು ತೆಂಗಿನ ಹಾಲಿನ ಮೂಲಕ ಪಡೆಯಬಹುದು.

ದನದ ಹಾಲು ಕುಡಿದ್ರೆ ಅಲರ್ಜಿ ಉಂಟಾಗುವವರು, ತೆಂಗಿನ ಹಾಲು ಕುಡಿಯುವುದು ಉತ್ತಮ. ಏಕೆಂದರೆ ಇದರಲ್ಲಿ ಲ್ಯಾಕ್ಟೋಸ್ ಅಂಶ ಇರುವುದಿಲ್ಲ. ಹೀಗಾಗಿ ಹಾಲಿನಿಂದ ಆಗುವ ಅಲರ್ಜಿ ಉಂಟಾಗುವುದಿಲ್ಲ.

ತೆಂಗಿನ ಹಾಲಿನಲ್ಲಿ ಕಡಿಮೆ ಕೊಬ್ಬಿನ ಅಂಶವಿದ್ದು, ಇದನ್ನು ಲೋ ಫ್ಯಾಟ್ ಮಿಲ್ಕ್ ಆಗಿ ಕೂಡ ಬಳಸಬಹುದು. ಇಷ್ಟಲ್ಲದೆ ಈ ಹಾಲಿನಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಂಡು ಬರುವುದಿಲ್ಲ.

ತೆಂಗಿನ ಹಾಲಿನಲ್ಲಿ ಉತ್ತಮ ಫ್ಯಾಟಿ ಆಸಿಡ್ ಇದ್ದು, ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಮೆದುಳಿನ ಆರೋಗ್ಯಕ್ಕೂ ತೆಂಗಿನ ಹಾಲು ಪ್ರಯೋಜನಕಾರಿ.

ಡಯಾಬಿಟೀಸ್​ನಿಂದ ಬಳಲುತ್ತಿರುವವರಿಗೂ ತೆಂಗಿನ ಹಾಲು ಉತ್ತಮ ಎನ್ನಬಹುದು. ಏಕೆಂದರೆ ತೆಂಗಿನ ಹಾಲು ರಕ್ತದಲ್ಲಿನ ಸಕ್ಕರ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಹಾಗೆಯೇ ಇದರಲ್ಲಿರುವ ಜಿಂಕ್ ಮತ್ತು ಐರನ್ ನ್ಯೂಟ್ರಿಷಯನ್ ಅಂಶಗಳು ಅನೀಮಿಯಾ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯುತ್ತದೆ.

ಇದನ್ನೂ ಓದಿ : ಹೃದಯಾಘಾತ ದಿಢೀರ್ ಬರುವುದಿಲ್ಲ : ಮೊದಲೇ ತಿಳಿಯುತ್ತೆ !

ಇದನ್ನೂ ಓದಿ : ಸ್ನಾಯುಗಳ ಉತ್ತಮ ಆರೈಕೆಗಾಗಿ ಪ್ರೋಟೀನ್ ನ ಅಗತ್ಯತೆ

( Coconut milk is good for health )

Leave A Reply

Your email address will not be published.