Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

0
  • ರಕ್ಷಾ ಬಡಾಮನೆ

Coffee Chicory : ಮುಂಜಾನೆ ಎದ್ದ ಕೂಡಲೇ ಕಾಫಿ ಕುಡಿಯೋದು ಬಹುತೇಕರ ಹವ್ಯಾಸ. ಕೆಲವರು ಹಲ್ಲು ಉಜ್ಜಿದ ಮೇಲೆ ಕಾಫಿ ಕುಡಿದ್ರೆ, ಇನ್ನು ಕೆಲವರು ಬೆಡ್ ಕಾಫಿ ಕುಡಿಯುತ್ತಾರೆ. ಮಳೆಗಾಲ, ಚಳಿಗಾಲದಲ್ಲಂತೂ ಕಾಫಿ ಹೀರೋ ಮಜಾನೇ ಬೇರೆ. ಒಂದು ಲೋಟ ಕಾಫಿ (Coffee )ಕೈಯಲ್ಲಿದ್ರೆ ಚುಮಚುಮು ಚಳಿಯೂ ನಮ್ಮ ಹತ್ತಿರಕ್ಕೂ ಬರೋದಿಲ್ಲಾ.

ಇನ್ನು ಕೆಲವರಿಗೆ ಕಾಫಿ ಕುಡಿಯದೇ ಇದ್ರೆ ಬೆಳಿಗ್ಗೆಯೇ ಆಗೋದಿಲ್ಲ. ಮುಂಜಾನೆ ಒಂದು ಕಪ್ ಕಾಫಿ ಕುಡಿದ ಮೇಲೆಯೇ ಮನಸ್ಸು ಫ್ರೆಶ್ ಅನಿಸೋದು. ಬಹುತೇಕರು ತಾವು ಕುಡಿಯುತ್ತಿರೋದು ಕಾಫಿ ಎಂದಷ್ಟೇ ತಿಳಿದುಕೊಂಡಿರುತ್ತಾರೆ.

ಆದರೆ ಕೆಲವರಿಗೆ ಒಳ್ಳೆಯ ಕಾಫಿ ಗಳು ಕೆಲೋವೊಮ್ಮೆ ತುಂಬಾ ಕಹಿಯಾಗಿ ಬಿಡುತ್ತದೆ. ಕಾಫಿ ಕಹಿಯಾಗೋದಕ್ಕೆ ನಾವು ಕುಡಿಯೋ ಕಾಫಿಯಲ್ಲಿ ಕೇವಲ ಕಾಫಿಪುಡಿಯನ್ನಷ್ಟೇ ಹಾಕೋದಿಲ್ಲಾ, ಬದಲಾಗಿ ಚಿಕೋರಿಯನ್ನು ಬಳಸಲಾಗುತ್ತೆ ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲಾ.

ಹೌದು, ಕಾಫಿ ಪುಡಿ ತಯಾರು ಮಾಡುವಾಗ ನಿರ್ಧಿಷ್ಟ ಪ್ರಮಾಣದಲ್ಲಿ ಕಾಫಿಯ ಪುಡಿಗೆ ಚಿಕೋರಿ ಬೆರಕೆ ಮಾಡುತ್ತಾರೆ. ಕಾಫಿಗೆ ಚಿಕೋರಿ ಬೆರೆತರೆ ಮಾತ್ರ ಕಾಫಿ ರುಚಿಕರವಾಗಿರೋದಕ್ಕೆ ಸಾಧ್ಯ.

ಚಿಕೋರಿಯನ್ನು ಕಾಫಿಯ ಜೊತೆಗೆ ಮಿಕ್ಸ್ ಮಾಡೋದು ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಕಾಫಿ ಕಹಿಯಾಗಿ ಬಿಡುತ್ತೆ. ಕಾಫಿಯಲ್ಲಿರೋ ಚಿಕೋರಿ ನಮ್ಮ ಆರೋಗ್ಯ ವೃದ್ದಿಸೋದಕ್ಕೆ ಪೂರಕವಾಗಿದೆ.

ಚಿಕೋರಿ ಗಿಡದ ಬೇರನ್ನು ಒಣಗಿಸಿ, ಸಂಸ್ಕರಿಸಿ ಪುಡಿಮಾಡಿ ಕಾಫಿಯೊಂದಿಗೆ ಬೇರೆಸಲಾಗುತ್ತದೆ. ಚಿಕೋರಿ ಗಿಡವು 5 ರಿಂದ 6 ಅಡಿ ಎಷ್ಟು ಎತ್ತರಕ್ಕೆ ಬೆಳೆಯುತ್ತದೆ. ನೀಲಿ ಬಿಳಿ ಅಥವಾ ಗುಲಾಬಿ ಬಣ್ಣದ ಹೂಗಳನ್ನು ಬಿಡುತ್ತದೆ. ಈ ಚಿಕೋರಿ ಬಗ್ಗೆ ಬಹಳ ತಪ್ಪು ತಿಳಿವಳಿಕೆಗಳಿವೆ.

ಆದರೆ ಈ ಚಿಕೋರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಕೆಫೀನ್ ಅಂಶ ಇರುವುದಿಲ್ಲ. ಭಾರತದಲ್ಲಿ ಗುಜರಾತ್, ಉತ್ತರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಚಿಕೋರಿಯನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ನದಿ ತೀರದಲ್ಲಿ ಅಥವಾ ಒಣ ಪ್ರದೇಶದಲ್ಲಿ ಕೂಡ ಚಿಕೋರಿಯನ್ನು ಬೆಳೆಸಲಾಗುತ್ತದೆ.

ಚಿಕೋರಿಯಲ್ಲಿ ಶೇ.5 ರಿಂದ ಶೇ.6ರಷ್ಟು ಪೌಷ್ಟಿಕಾಂಶವಿದ್ದು, ಅತೀ ಕಡಿಮೆ ನಾರಿನಂಶವನ್ನು ಹೊಂದಿರುತ್ತದೆ. ಚಿಕೋರಿಯಲ್ಲಿ ವಿಟಮಿನ್ ಎ ಅಂಶವೂ ಹೆಚ್ಚಾಗಿರುತ್ತದೆ. ಮಧುಮೇಹಿಗಳು ನಿತ್ಯ ಆಹಾರದಲ್ಲಿ ಚಿಕೋರಿ ಬಳಸುವುದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಕಡಿಮೆ ಯಾಗುತ್ತದೆ. ಚಿಕೋರಿ ಕಹಿಯಾಗಿದ್ದು ಕಫ, ಪಿತ್ತವನ್ನ ಉಪಶಮನಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ನಿತ್ಯ ವ್ಯಾಯಾಮದ ಜೊತೆಗೆ ಚಿಕೋರಿ ಪುಡಿಯನ್ನು ಹಾಲಿನಲ್ಲಿ ಹಾಕಿ ಕುಡಿಯುದರಿಂದ ನಿಶ್ಯಕ್ತಿಯು ಮಾಯವಾಗುತ್ತದೆ. ಚಿಕೊರಿಯು ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಬಹಳ ಉಪಯುಕ್ತ ವಾಗಿದೆ. ಚಿಕೋರಿಯ ಬೀಜ ನಮ್ಮ ದೇಹದಲ್ಲಿ ಮೂತ್ರ ಉತ್ಪಾದನೆ ಹೆಚ್ಚಿಸಿ ಕಿಡ್ನಿಯ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಇನ್ನು ಚಿಕೋರಿಯ ಎಲೆಯಿಂದ ತಯಾರಿಸಿದ ಕಷಾಯ ಅಂಟು ತಲೆನೋವು, ಉರಿ, ಸಂದಿ ವಾತಗಳನ್ನು ಪರಿಹರಿಸುವ ಗುಣವನ್ನು ಹೊಂದಿದೆ. ಚಿಕೋರಿಯ ಸೇವನೆಯಿಂದ ಪಚನ ಕ್ರಿಯೆ ಚೆನ್ನಾಗಿ ಆಗುತ್ತದೆ. ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿಡುವಂತೆ ಮಾಡುವ ಸಾಮರ್ಥ್ಯ ಚಿಕೋರಿಗಿದ್ದು, ಮಲಬದ್ಧತೆಯನ್ನೂ ನಿವಾರಣೆ ಮಾಡುತ್ತದೆ.

ಲಿವರ್, ಗಾಲ್ ಬ್ಲಾಡರ್, ಉಸಿರಾಟದ ಸಮಸ್ಯೆ ಚಿಕೋರಿ ಪರಿಹಾರವನ್ನು ನೀಡುತ್ತದೆ. ಇನ್ನು ಚಿಕೋರಿಯು ಅಲರ್ಜಿ ವಿರೋಧಕವೂ ಹೌದು, ಇಷ್ಟೆ ಅಲ್ಲದೆ ಚಿಕೋರಿ ದೇಹದಲ್ಲಿ ಬೆಳೆಯುವ ಗಡ್ಡೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿಯನ್ನು ಹೊಂದಿದೆ.

ಇತ್ತೀಚಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿಯೂ ಚಿಕೋರಿಯ ಮಹತ್ವವನ್ನು ಪಡೆದುಕೊಂಡಿದೆ. ಈ ಕುರಿತು ಈಗಾಗಲೇ ಸಂಶೋಧನೆಗಳು ನಡೆಯುತ್ತಿವೆ.

ಇದನ್ನೂ ಓದಿ : ತಲೆನೋವಿನಿಂದ ಹೈರಾಣಾಗಿದ್ದೀರೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಇದನ್ನೂ ಓದಿ : ಚಳಿಗಾಲದಲ್ಲಿ ಡ್ಯಾಂಡ್ರಫ್​​ನಿಂದ ಪಾರಾಗಲು ಬಳಸಿ ಈ ಮನೆಮದ್ದು..!

( Coffee Chicory : How much do you know about coffee mix with chicory ?)

Leave A Reply

Your email address will not be published.