Coffee Health risk : ಕಾಫಿಯಲ್ಲಿ ಮಾಂತ್ರಿಕ ಶಕ್ತಿ ಅಡಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಫಿಯ ಒಂದೊಂದು ಗುಟುಕು ಮನಸ್ಸಿಗೆ ಮುದ ನೀಡುತ್ತದೆ. ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಬೇಕು. ಇನ್ನೂ ಕೆಲವರು ಮಧ್ಯಾಹ್ನ, ಮತ್ತೆ ಕೆಲವರು ಸಂಜೆ. ಹೀಗೆ ಒಬ್ಬೊಬ್ಬರು ಒಂದೊಂದು ಅವಧಿಯಲ್ಲಿ ಕಾಫಿ ಸೇವನೆ ಇಷ್ಟಪಡುತ್ತಾರೆ.
ಇನ್ನೂ ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಕಾಫಿ ಹೀರಬೇಕು. ಕಾಫಿಯ ಘಮ, ಅದರ ಸ್ವಾದಕ್ಕೆ ಮಾರುಹೋಗುವವರು ಅನೇಕರಿದ್ದಾರೆ. ಆದರೆ ಕಾಫಿ ಸೇವನೆಯ ಅಭ್ಯಾಸ ಹೊಂದಿರುವ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲವು ಪ್ರಮುಖ ವಿಚಾರಗಳಿವೆ. ಈ ಐದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಕಾಫಿಯಿಂದ ಅಂತರ ಕಾಯ್ದುಕೊಂಡಷ್ಟೂ ಉತ್ತಮ.
ಗರ್ಭ ಧರಿಸಲು ಪ್ರಯತ್ನಿಸುತ್ತಿರುವವರು – ಅತಿಯಾದ ಕೆಫಿನ್ ಸೇವನೆಯು ಮಹಿಳೆಯರ ಅಂಡೋತ್ಪತ್ತಿ ಹಾಗೂ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಗರ್ಭಿಣಿಯಾಗಲು ಬಯಸುತ್ತಿರುವ ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆ ಸರಾಗವಾಗಿ ಆಗಬೇಕು ಎಂದರೆ ಕಾಫಿ ಸೇವನೆಯನ್ನು ತ್ಯಜಿಸಬೇಕು.
ಥೈರಾಯ್ಡ್ ಸಮಸ್ಯೆ ಹೊಂದಿರುವವರು – ಥೈರಾಯ್ಡ್ನಿಂದ ಬಳಲುತ್ತಿರುವವರಿಗೆ ನೀಡಲಾಗುವ ಲೆವೊಥೈರಾಕ್ಸಿನ್ನ್ನು ದೇಹ ಹೀರಿಕೊಳ್ಳಲು ಕಾಫಿ ಅಡ್ಡಿಪಡಿಸಬಹುದು. ಹೀಗಾಗಿ ಕಾಫಿ ಕುಡಿಯುವ ಅಭ್ಯಾಸ ಇರುವವರು ಥೈರಾಯ್ಡ್ ಮಾತ್ರ ಸೇವನೆ ಮಾಡಿದ ಬಳಿಕ ಕನಿಷ್ಠ 1 ಗಂಟೆ ಯಾವುದೇ ಕಾರಣಕ್ಕೂ ಕಾಫಿ ಸೇವಿಸಬಾರದು.
Also Read: ರಾತ್ರಿ ಹೊತ್ತು ಡಾರ್ಕ್ ಚಾಕಲೇಟ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರವೇ : ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
PCOS ಅಥವಾ ಒತ್ತಡ : ಕೆಫಿನ್ ಹಾರ್ಮೋನ್ಗಳನ್ನು ಉತ್ತೇಜಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ PCOS ಅಥವಾ ಹೆಚ್ಚಿನ ಒತ್ತಡದ ಜೀವನಶೈಲಿ ಹೊಂದಿರುವ ಮಹಿಳೆಯರು ಕಾಫಿಯಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಇದು ಹಾರ್ಮೋನ್ಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಕಾಫಿ ಸೇವನೆಯಿಂದ ದೂರವಿದ್ದುಬಿಡಿ.
ಕಡಿಮೆ ಕಬ್ಬಿಣಾಂಶ : ಸಸ್ಯ ಆಧಾರಿತ ಮೂಲಗಳಿಂದ ದೇಹಕ್ಕೆ ಸಿಗುವ ಕಬ್ಬಿಣಾಂಶದ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯ ಕಾಫಿಗಿದೆ. ಹೀಗಾಗಿ ದೇಹದಲ್ಲಿ ಕಡಿಮೆ ಕಬ್ಬಿಣಾಂಶ ಇರುವವರು ಮತ್ತು ಸಸ್ಯಾಹಾರಿ ಮಹಿಳೆಯರು ಕಾಫಿಯಿಂದ ದೂರವಿರಬೇಕು.
ಅದರಲ್ಲೂ ವಿಶೇಷವಾಗಿ ಕಬ್ಬಿಣಾಂಶಯುಕ್ತ ಆಹಾರ ಸೇವನೆ ಮಾಡಿದ ಬಳಿಕ ಯಾವುದೇ ಕಾರಣಕ್ಕೂ ಕಾಫಿ ಸೇವಿಸಬಾರದು. ‘ನಿದ್ರಾಹೀನತೆ – ಕೆಫಿನ್ ಸೇವನೆಯಿಂದ ನಿದ್ರೆಗೆ ತೊಂದರೆ ಉಂಟಾಗುತ್ತದೆ. ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಹೀಗಾಗಿ ಮಲಗುವ ಸ್ವಲ್ಪ ಸಮಯದ ಮುನ್ನ ಕಾಫಿ ಸೇವನೆ ಅಭ್ಯಾಸವಿದ್ದರೆ ಅದನ್ನು ತ್ಯಜಿಸಿಬಿಡಿ. ಗುಣಮಟ್ಟದ ನಿದ್ರೆ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ ನಿದ್ರೆಗಾಗಿ ಕಾಫಿ ಸೇವನೆ ತ್ಯಜಿಸಬೇಕು.
Also Read: ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತದೆ : ಎಂದಾದರೂ ಯೋಚಿಸಿದ್ದೀರೇ


