ರಾತ್ರಿ ಹೊತ್ತು ಡಾರ್ಕ್ ಚಾಕಲೇಟ್​ ತಿನ್ನುವುದು ಆರೋಗ್ಯಕ್ಕೆ ಹಾನಿಕಾರವೇ : ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Dark chocolate: ಕೆಲವರಿಗೆ ರಾತ್ರಿ ಊಟದ ಬಳಿಕ ಡಾರ್ಕ್ ಚಾಕಲೇಟ್​ ತಿನ್ನುವ ಅಭ್ಯಾಸ ಇರುತ್ತದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ಅನುಭವವು ಅನೇಕರಿಗೆ ವಿಪರೀತ ತೃಪ್ತಿ ನೀಡುತ್ತದೆ. ಒಂದು ರೀತಿಯಲ್ಲಿ ಹಲವರಿಗೆ ಅವರ ದಿನವನ್ನು ಪೂರ್ಣಗೊಳಿಸಲು ಒಂದು ಡಾರ್ಕ್ ಚಾಕಲೇಟ್​ ಬೇಕೇ ಬೇಕು.

ಆದರೆ ರಾತ್ರಿ ಮಲಗುವ ಮುನ್ನ ಡಾರ್ಕ್ ಚಾಕಲೇಟ್​ ತಿಂದು ಹಾಸಿಗೆಯಲ್ಲಿ ಕಣ್ಮುಚ್ಚುವ ನಿಮ್ಮ ದೇಹದ ಒಳಗೆ ಈ ಡಾರ್ಕ್ ಚಾಕಲೇಟ್ ಏನು ಮಾಡಬಹುದು ಎಂದು ಎಂದಾದರೂ ಯೋಚಿಸಿದ್ದೀರೇ ? ಡಾರ್ಕ್ ಚಾಕಲೇಟ್​ ಸಕ್ಕರೆ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಎನಿಸಿದರೂ ಸಹ ರಾತ್ರಿ ವೇಳೆ ತಿನ್ನುವುದು ಸೂಕ್ತವಾದ ಸಮಯವೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲೇಬೇಕು.

ನೀವು ರಾತ್ರಿ ಚಾಕಲೇಟ್​ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಾಗುತ್ತದೆ ಈ ಬದಲಾವಣೆ :


1. ಆಂಟಿ ಆಕ್ಸಿಡಂಟ್​ಗಳಿಂದ ನಿಮ್ಮ ದೇಹಕ್ಕೆ ಲಾಭ :
ಡಾರ್ಕ್ ಚಾಕಲೇಟ್​ಗಳಲ್ಲಿ ಅಗಾಧ ಪ್ರಮಾಣದಲ್ಲಿರುವ ಫ್ಲೇವನಾಯ್ಡ್​ಗಳು ಉರಿಯೂತ ಮತ್ತು ಆಕ್ಸಿಡೇಟಿವ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ರಾತ್ರಿ ಸಮಯದಲ್ಲಿ ಆಂಟಿ ಆಕ್ಸಿಡಂಟ್​ಗಳು ಜೀವಕೋಶಗಳ ಚೇತರಿಕೆಗೆ ಬೆಂಬಲ ನೀಡುತ್ತವೆ. ಹೀಗಾಗಿ ಊಟದ ನಂತರ ಡಾರ್ಕ್ ಚಾಕಲೇಟ್ ಸೇವನೆ ಈ ಕಾರಣದಿಂದ ಒಳ್ಳೆಯದು ಎಂದು ಪರಿಗಣಿಸಬಹುದು.

Also Read: Health Tips: ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ? ಆಹಾರ ತಜ್ಞರು ನೀಡಿದ್ದಾರೆ ಮಾಹಿತಿ

  1. ಮೂಡ್​ನಲ್ಲಿ ಬದಲಾವಣೆ ತರುತ್ತದೆ :
    ಇಡೀ ದಿನದ ಜಂಜಾಟ, ಕೆಲಸದ ಒತ್ತಡದಿಂದ ಜೀವನವೇ ಹೈರಾಣಾಗಿ ಹೋಗಿರುತ್ತದೆ. ಅಂತಹ ಸಂದರ್ಭದಲ್ಲಿ ರಾತ್ರಿ ಮಲಗುವ ಮುನ್ನ ಒಂದು ತುಂಡು ಡಾರ್ಕ್ ಚಾಕಲೇಟ್​ ಸೇವನೆ ಮಾಡುವುದರಿಂದ ಹಿತವಾದ ಭಾವನೆ ನಿಮ್ಮದಾಗುತ್ತದೆ. ದೇಹಕ್ಕೆ ಹಿತವನ್ನು ನೀಡುವಂತಹ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. . ರಾತ್ರಿಯಿಡೀ ವಿಶ್ರಾಂತಿ ಪಡೆಯುವಾಗ ಇದು ನಿಮ್ಮನ್ನು ಶಾಂತ ಮತ್ತು ಸಂತೋಷದ ಸ್ಥಿತಿಯಲ್ಲಿರಿಸುತ್ತದೆ. ಭಾವನಾತ್ಮಕವಾಗಿ ತಿನ್ನುವವರಿಗೆ, ಇದು ತುಂಬಾ ಸಾಂತ್ವನ ನೀಡುವ ಒಂದು ಕಾರಣವಾಗಿದೆ.
  2. ಕೆಫಿನ್​ನಿಂದ ನಿದ್ರೆಗೆ ಭಂಗ :
    ಪ್ರತಿಯೊಂದು ಒಳ್ಳೆಯದರ ಜೊತೆ ಕೆಟ್ಟದ್ದನ್ನೂ ಹೊಂದಿರುತ್ತದೆ. ಹಾಗೆಯೇ ಡಾರ್ಕ್ ಚಾಕಲೇಟ್​ಗಳು ಕೂಡ,,! ಡಾರ್ಕ್ ಚಾಕಲೇಟ್​ನಲ್ಲಿರುವ ಕೆಫೀನ್ ಮತ್ತು ಥಿಯೋಬ್ರೋಮಿನ್ ಅಂಶಗಳು ನಿಮ್ಮ ನಿದ್ರೆಯ ಮೇಲೆ ದುಷ್ಪರಿಣಾಮ ಬೀರಬಹುದು. ನೀವು ತಡರಾತ್ರಿ ಚಾಕಲೇಟ್​ ತಿಂದರೆ ನಿದ್ರೆ ಬರುವುದು ಇನ್ನೂ ತಡವಾಗಬಹುದು. ನಿದ್ರೆಯ ಗುಣಮಟ್ಟ ಹಾಳಾಗಬಹುದು. ವಿಶ್ರಾಂತಿ ಪಡೆಯುವ ಬದಲು ನೀವು ಜಾಗರೂಕ ಸ್ಥಿತಿ ತಲುಪಿಬಿಡುತ್ತೀರಿ.
  3. ರಾತ್ರಿ ಸಕ್ಕರೆಯುಕ್ತ ಆಹಾರ ತಿನ್ನುವ ಬಯಕೆ ಹೆಚ್ಚುವುದು :
    ಸಾಮಾನ್ಯ ಚಾಕಲೇಟ್​ಗಳಿಗೆ ಹೋಲಿಕೆ ಮಾಡಿದರೆ ಡಾರ್ಕ್ ಚಾಕಲೇಟ್​ಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಆದರೂ ಇದು ನಿಮ್ಮ ದೇಹದಲ್ಲಿ ಸಕ್ಕರೆಯುಕ್ತ ಆಹಾರವನ್ನು ಸೇವಿಸಬೇಕು ಎನ್ನುವ ಬಯಕೆಯನ್ನು ಜಾಸ್ತಿ ಮಾಡುತ್ತದೆ. ಈ ಕಾರಣಕ್ಕೆ ರಾತ್ರಿ ಮಲಗುವ ಸಂದರ್ಭದಲ್ಲಿ ಡಾರ್ಕ್ ಚಾಕಲೇಟ್​ ಸೇವನೆ ಸೂಕ್ತ ಎಂದು ಪರಿಗಣಿಸಲು ಸಾಧ್ಯವಿಲ್ಲ.
  4. ಹೊಟ್ಟೆಯುಬ್ಬರ ಸಮಸ್ಯೆ :
    ಆ್ಯಸಿಡಿಟಿ ಅಥವಾ ಹೊಟ್ಟೆಯುಬ್ಬರ ಸಮಸ್ಯೆ ಹೊಂದಿರುವ ವ್ಯಕ್ತಿಗಳು ರಾತ್ರಿ ಮಲಗುವ ಸಂದರ್ಭದಲ್ಲಿ ಚಾಕಲೇಟ್​ ತಿಂದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಥಿಯೋಬ್ರೋಮಿನ್ ಅನ್ನನಾಳದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದು ಆ್ಯಸಿಡಿಟೊ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ ಈ ರೀತಿ ಸಮಸ್ಯೆ ಹೊಂದಿರುವವರು ಸಂಜೆಯ ಒಳಗಾಗಿ ಡಾರ್ಕ್ ಚಾಕಲೇಟ್​ ತಿನ್ನುವುದು ಉತ್ತಮ.

Also Read: ನಿಮ್ಮ ಈ ಅಭ್ಯಾಸಗಳು ಕಿಡ್ನಿ ಆರೋಗ್ಯವನ್ನು ಹಾಳುಗೆಡಬಹುದು : ಈಗಲೇ ಎಚ್ಚೆತ್ತುಕೊಳ್ಳಿ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories