EGG Diabetes : ದಿನಕ್ಕೊಂದು ಮೊಟ್ಟೆ ತಿಂದ್ರೆ ಬರುತ್ತೆ ಮಧುಮೇಹ ! ಸಂಶೋಧಕರು ಹೇಳೋದೇನು ಗೊತ್ತಾ ..?

ಮೊಟ್ಟೆ.. ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯ ವೃದ್ದಿಸುತ್ತೆ ಅಂತಾ ಹೇಳ್ತಾರೆ. ಮಾತ್ರವಲ್ಲ ಮೊಟ್ಟೆಯಿಂದ ತಯಾರಿಸಿದ ಆಹಾರಗಳು ವಿಶ್ವಮಟ್ಟದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆದ್ರೀಗ ದಿನಕ್ಕೊಂದು ಮೊಟ್ಟೆ ತಿನ್ನೋದ್ರಿಂದ ಮಧುಮೇಹಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಸಂಶೋದಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಚೀನಾದ ವೈದ್ಯಕೀಯ ವಿವಿ ಹಾಗೂ ಕತಾರ್ ನ ತಾರ್ ನ ಲಾಂಗಿಟ್ಯೂಡಿನಲ್ ಸಂಶೋಧಕರು ಮೊಟ್ಟೆಯ ಮೇಲೆ ನಡೆಸಿದ ಅಧ್ಯಯನ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

1991 ರಿಂದ 2009ರ ವರೆಗೆ ನಡೆಸಿದ ಅಧ್ಯಯನದಲ್ಲಿ ದಿನವೊಂದಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವವರಿಗೆ ಮಧುಮೇಹ ಎದುರಾಗುವ ಸಾಧ್ಯತೆ ಶೇ.60 ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ.

ಅದ್ರಲ್ಲೂ ಮಹಿಳೆಯರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆಯಂತೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಹೇಳಿದ್ದಾರೆ.

ಪ್ರಮುಖವಾಗಿ ಚೀನಾದಲ್ಲಿ 1991 ರಿಂದ 2009 ವರೆಗೆ ಮೊಟ್ಟೆ ಸೇವನೆ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

ಈ ವೇಳೆಯಲ್ಲಿ ಸುಮಾರು 8,545 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಸಂಶೋಧನೆಯಲ್ಲಿ ಮೊಟ್ಟೆ ತಿನ್ನುವವರು ಮಧುಮೇಹಕ್ಕೆ ತುತ್ತಾಗಿರುವುದು ಬಯಲಾಗಿತ್ತು.

ಇನ್ನು ದೇಹದಲ್ಲಿನ ಬೊಜ್ಜು ಕರಗಿಸೋದಕ್ಕೆ ಹಲವರು ಡಯಟ್ ಮಾಡ್ತಾರೆ. ಆದರೆ ಡಯಟ್ ಮಾಡುವುದು ಕೂಡ ಇನ್ನೊಂದು ರೀತಿಯಲ್ಲಿ ಮಧುಮೇಹಕ್ಕೆ ಕಾರಣವಾಗುತ್ತಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

Comments are closed.