ಒಣದ್ರಾಕ್ಷಿ ನೆನೆಸಿಟ್ಟ ನೀರು ಕುಡಿದ್ರೆ ಏನು ಪ್ರಯೋಜನ ಗೊತ್ತಾ ?

0

ಒಣದ್ರಾಕ್ಷಿ.. ದ್ರಾಕ್ಷಿಯನ್ನು ಒಣಗಿಸಿಟ್ಟು ತಯಾರಿಸುವ ಒಣದ್ರಾಕ್ಷಿ ಆರೋಗ್ಯ ವೃದ್ದಿಗೆ ಸಹಕಾರಿ. ಮಾತ್ರವಲ್ಲ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ.

ದ್ರಾಕ್ಷಿಯ ತಳಿಗಳನ್ನು ಆಧರಿಸಿ ಅವುಗಳ ಬಣ್ಣವೂ ವಿಭಿನ್ನವಾಗಿರುತ್ತೆ. ಹಿಂದೆಲ್ಲಾ ಹಸಿರು ದ್ರಾಕ್ಷಿಯನ್ನು ಒಣಗಿಸಿಟ್ಟು ಒಣದ್ರಾಕ್ಷಿ ಮಾಡುತ್ತಿದ್ರೆ, ಈಗೆಲ್ಲಾ ಕಪ್ಪು ದ್ರಾಕ್ಷಿಯಿಂದಲೂ ಒಣದ್ರಾಕ್ಷಿಯನ್ನು ತಯಾರಿಸಲಾಗು ತ್ತಿದೆ. ಇಂತಹ ಒಣದ್ರಾಕ್ಷಿ ನಮ್ಮ ದೇಹಕ್ಕೆ ಹೇರಳ ಪ್ರಮಾಣದಲ್ಲಿ ಪೋಷಕಾಂಶವನ್ನು ಒದಗಿಸುತ್ತದೆ.

ನಿತ್ಯವೂ 10 ಒಣದ್ರಾಕ್ಷಿಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ದ್ರಾಕ್ಷಿಯ ಜೊತೆಗೆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವು ದರಿಂದ ದೇಹದಲ್ಲಿ ಪವಾಡವನ್ನೇ ಸೃಷ್ಟಿಸಿ ಬಿಡುತ್ತದೆ. ಅಷ್ಟಕ್ಕೂ ದ್ರಾಕ್ಷಿಯಿಂದ ನಮಗಾಗುವ ಲಾಭವೇನು ಗೊತ್ತಾ

ದೇಹದಲ್ಲಿರುವ ಲಿವರ್ (ಯಕೃತ್ ) ಆರೋಗ್ಯವನ್ನು ಕಾಪಾಡಿ ಕೊಳ್ಳಲು ಒಣದ್ರಾಕ್ಷಿ ಉತ್ತಮ ಔಷಧ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ನಿತ್ಯವೂ ಸೇವನೆ ಮಾಡುವುದರಿಂದ ಲಿವರ್ ನ ಆರೋಗ್ಯಹೆಚ್ಚಿಸುತ್ತದೆ. ಲೀವರ್ ನಲ್ಲಿ ಸಂಗ್ರಹವಾಗುವ ಕಶ್ಮಲಗಳನ್ನು ನಿವಾರಿಸುವಲ್ಲಿ ಒಣದ್ರಾಕ್ಷಿ ಸಹಕಾರಿಯಾಗಿದ್ದು, ಲಿವರ್ ಆರೋಗ್ಯವನ್ನು ಹೆಚ್ಚಿಸಲು ಹಾನಿಕಾರಕ ಟಾನಿಕ್ ಬಳಕೆಯನ್ನು ಬಿಟ್ಟು ಒಣದ್ರಾಕ್ಷಿಯ ನೀರನ್ನು ಬಳಸುವುದು ಉತ್ತಮ.

ಒಣದ್ರಾಕ್ಷಿಯಲ್ಲಿ ವಿಶೇಷವಾಗಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.ಒಣ ದ್ರಾಕ್ಷಿ ಬಾಯಿ, ಒಸಡು ಹಲ್ಲುಗಳಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡ ಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಮೂತ್ರಪಿಂಡ ಗಳನ್ನು ಸ್ವಚ್ಛಗೊಳಿಸುತ್ತದೆ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ.

ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಮೂಳೆಗಳು ದೃಢಗೊಳ್ಳಲು ಸಹಕಾರಿಯಾಗಿದೆ. ಇನ್ನು ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮೂಳೆಗಳು ಆರೋಗ್ಯಕರವಾಗಿ ಮತ್ತು ದೃಢವಾಗುತ್ತವೆ.

ಒಣದ್ರಾಕ್ಷಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಜೀರ್ಣ ಶಕ್ತಿ ವೃದ್ದಿಸುತ್ತದೆ. ರಾತ್ರಿ ಒಣದ್ರಾಕ್ಷಿಯನ್ನು ನೆನೆಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಹೀಗೆ ಮಾಡುವುದರಿಂದ ಅಜೀರ್ಣ ಸಮಸ್ಯೆಗೆ ಮುಕ್ತಿಯನ್ನು ಪಡೆಯಬಹುದಾಗಿದೆ.

ಇನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಕೂಡ ಒಣದ್ರಾಕ್ಷಿ ಹೆಚ್ಚು ಪೂರಕವಾಗಿದೆ. ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸಿ ಒಣ ದ್ರಾಕ್ಷಿ ಸಿದ್ದವಾಗೋದ್ರಿಂದಾಗಿ ಒಣದ್ರಾಕ್ಷಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿರುತ್ತವೆ. ಈ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ,

ಒಣದ್ರಾಕ್ಷಿಯಲ್ಲಿ ವಿಟಮಿನ್ ಎ, ಬೀಟಾ ಕ್ಯಾರೋಟೀನ್ ಸಹಿತ ಉತ್ತಮ ಪೋಷಕಾಂಶಗಳಿದ್ದು ಇವು ಕಣ್ಣಿಗೆ ಅತ್ಯುತ್ತಮ ಪೋಷಣೆ ಯನ್ನು ನೀಡುತ್ತವೆ. ದೃಷ್ಟಿಹೀನತೆಯಿಂದ ರಕ್ಷಿಸುತ್ತದೆ. ಪರಿಣಾಮವಾಗಿ ದೃಷ್ಟಿ ಉತ್ತಮಗೊಳ್ಳುತ್ತದೆ ಹಾಗೂ ದೃಷ್ಟಿಹೀನತೆಯಿಂದ ರಕ್ಷಿಸುತ್ತದೆ.

ರಕ್ತ ಹೀನತೆಯಿಂದ ಬಳಲುತ್ತಿರುವವರು ಒಣದ್ರಾಕ್ಷಿಯನ್ನು ಸೇವನೆ ಮಾಡುವುದು ಉತ್ತಮ. ಒಣ ದ್ರಾಕ್ಷಿಯಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬಿಣದಂಶವಿದ್ದು, ಒಣ ದ್ರಾಕ್ಷಿಯನ್ನು ನೆನೆಸಿ ಸೇವನೆ ಮಾಡುವುದ ರಿಂದ ಹೇರಳ ಪ್ರಮಾಣದಲ್ಲಿ ಕಬ್ಬಿಣದಂಶ ದೇಹಕ್ಕೆ ಸೇರುವುದರಿಂದ ರಕ್ತ ಹೀನತೆಯ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡುತ್ತದೆ.

ಒಣದ್ರಾಕ್ಷಿಯಲ್ಲಿ ಕರಗುವ ನಾರಿನ ಅಂಶವಿದ್ದು, ಒಣ ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವು ದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸಹಕಾರಿ ಯಾಗುತ್ತದೆ. ಹೀಗಾಗಿ ಹೃದಯ ಸಂಬಂಧಿ ತೊಂದರೆಗಳಿಂದ ನಮ್ಮನ್ನು ರಕ್ಷಿಸಲು ಒಣದ್ರಾಕ್ಷಿ ಸಹಕಾರಿಯಾಗುತ್ತಿದೆ.

Leave A Reply

Your email address will not be published.