ಆಹಾ… ! ಮೊಟ್ಟೆಯ ಪ್ರಯೋಜನವೇ…!!!

  • ಅಂಚನ್ ಗೀತಾ

ಮೊಟ್ಟೆಯ ಉಪಯೋಗದಿಂದ ಆರೋಗ್ಯದಲ್ಲಾಗುವ ಪ್ರಯೋಜನಗಳು ನೂರಾರು. ಇನ್ನು ಪ್ರತಿನಿತ್ಯ ಮೊಟ್ಟೆ ಸೇವನೆಯಿಂದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿವಿಧ ಬಗೆಯ ವಿಟಮಿನ್ ಗಳು ಮತ್ತು ಸತ್ವಗಳ ಮೂಲಗಳಿಂದ ಜನರ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿದೆ.

ನಾವೂ ಸೇವಿಸೋ ಆಹಾರದಲ್ಲಿ ಪೌಷ್ಠಿಕಾಂಶಗಳ ಕೊರತೆ ಉಂಟಾದರೆ ಅದು ನಮ್ಮ ದೇಹದ ಅಪೌಷ್ಠಿಕತೆಗೆ ಕಾರಣವಾಗುತ್ತದೆ. ಆದರಿಂದ ನಾವೂ ಯಾವುದೇ ಆಹಾರ ಸೇವನೇ ಮಾಡಿದರು ಮೊದಲು ಅದರಲ್ಲಿರುವ ಪೌಷ್ಠಿಕ ಸತ್ವಗಳ ಮತ್ತು ಖನಿಜಾಂಶಗಳ ಕಡೆಗೆ ಗಮನ ಕೊಡಬೇಕು. ಮೊಟ್ಟೆಯ ಪ್ರಸ್ತಾಪದಲ್ಲು ಅಷ್ಟೆ. ನೋಡಲು ಚಿಕ್ಕದ್ದಿದರೂ ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಠಿಕ ಸತ್ವಗಳು ಅಡಗಿದೆ.

ದಿನಕ್ಕೊಂದು ಮೊಟ್ಟೆ ತಿನ್ನಿ ಮೊಟ್ಟೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮೊಟ್ಟೆಗಳು ಪ್ರೋಟೀನ್ ಅಂಶದ ಉತ್ತಮ ಮೂಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಮೊಟ್ಟೆಗಳಲ್ಲಿ ಮನುಷ್ಯನ ಹೃದಯದ ಆರೋಗ್ಯಕ್ಕೆ ಸಹಾಕಾರಿಯಾಗಿರುವ ಒಳ್ಳೆಯ ಕೊಬ್ಬಿನ ಅಂಶಗಳು ಎಂದೇ ಖ್ಯಾತಿಯಾದ “ಅಪರ್ಯಾಪ್ತ ಕೊಬ್ಬಿನ ಅಂಶಗಳು ಮತ್ತು ಬಹು ಮುಖ್ಯವಾದ ವಿಟಮಿನ್ ‘ಬಿ6,ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಅಂಶಗಳು ಸೇರಿದೆ ಎಂದು ತಜ್ಞರು ಅಭಿಪ್ರಾಯ ಪಡ್ತಾರೆ.

ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶವಾಯು ಸಮಸ್ಯೆ ಮತ್ತು ಇನ್ನಿತರ ಪ್ರಮುಖ ಕಾಯಿಲೆಗಳು ಹತ್ತಿರ ಕೂಡ ಸುಳಿಯೋದಿಲ್ಲ.

ಒಂದು ಅಧ್ಯಯನದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಆರು ವಾರಗಳ ತನಕ ದಿನಕ್ಕೆ ಎರಡರಂತೆ ಮೊಟ್ಟೆ ಸೇವಿಸುತ್ತಾ ಬಂದರೆ ಆತನ ರಕ್ತದಲ್ಲಿ ಸುಮಾರು 10% ದಷ್ಟು ಹೆಚ್ ಡಿ ಎಲ್ ಅಂಶ ಹೆಚ್ವಾಗುತ್ತದೆ. ಹಾಗೇನೆ ಮೊಟ್ಟೆಯ ಬಿಳಿ ಭಾಗವನ್ನು ಸಕ್ಕರೆ ಜೊತೆ ಸೇರಿಸಿ ಮುಖಕ್ಕೆ ಲೇಪಿಸಿ. ಹತ್ತು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ. ಮುಖ ಮೃದುವಾಗೋದಲ್ಲದೆ ಸುಂದರವಾಗಿರುತ್ತದೆ.

ಮೊಟ್ಟೆಯಲ್ಲಿರುವ ಹಳದಿ ಅಂಶದಿಂದ ದೃಷ್ಟಿ ವೃದ್ದಿಯಾಗುತ್ತದೆ. ಇನ್ನು ಮುಂಜಾನೆ ಮೊಟ್ಟೆಯ ಸೇವನೆಯಿಂದ ಆರೋಗ್ಯ ವೃದ್ದಿಯಾಗೋದಲ್ಲದೆ ಯಾವುದೇ ರೀತಿಯ ಕಾಯಿಲೆಗಳು ಹತ್ತಿರ ಬರಲ್ಲ ಅನ್ನೋದು ಅಧ್ಯಯನದ ವರದಿ.

ಅಷ್ಟೇ ಅಲ್ಲ ತಲೆ ಕೂದಲು ರಫ್ ಇದೆ ಅನ್ನೋರಿಗೆ ಇದು ಕಂಡೀಷನರ್ ತರ ಕಾರ್ಯನಿವರ್ಹಿಸುತ್ತೆ. ಮೊಟ್ಟೆಯ ಬಿಳಿ ಭಾಗವನ್ನು ಮೊಸರಿನ ಜೊತೆ ಸೇರಿಸಿ ತಲೆಗೆ ಹಚ್ಚಿದರೆ ತಲೆ ಕೂದಲು ತುಂಬಾ ಮೃದುವಾಗೋದು.

ಹೀಗೆ ಆರೋಗ್ಯ ಮತ್ತು ತ್ವಚೆ, ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಟ್ಟೆ ಪ್ರಮುಖ ಪಾತ್ರವಹಿಸುತ್ತದೆ.

Comments are closed.