IND vs SL T20 : ಎರಡನೇ ಪಂದ್ಯದಲ್ಲಿ ಎಡವಿದ ಭಾರತ : ಟಿ20 ಸರಣಿ ಸಮಬಲ ಸಾಧಿಸಿದ ಶ್ರೀಲಂಕಾ

ಕೊಲಂಬೋ : T20 ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಸಮಬಲ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ ಕೂಡ ಟೀಂ ಇಂಡಿಯಾದ ಬೌಲರ್‌ಗಳ ಸಂಘಟಿತ ಪ್ರದರ್ಶನ ನೀಡಿದ್ರು. ಆದರೂ ಅಂತಿಮ ಘಟ್ಟದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾಕ್ಕೆ ಆರಂಭಿಕರಾದ ಶಿಖರ್‌ ಧವನ್‌ ಹಾಗೂ ರುತುರಾಜ್‌ ಗಾಯಕ್‌ವಾಡ್‌ ಭರ್ಜರಿ ಆರಂಭ ಒದಗಿಸಿದ್ರು. ಮೊದಲ ವಿಕೆಟ್‌ಗೆ 49 ರನ್‌ ಜೊತೆಯಾಟ ನೀಡಿದ್ರು. ಆದ್ರೆ ರುತುರಾಜ್‌ ಗಾಯಕ್‌ವಾಡ್‌ ಶನಕಾ ಬೌಲಿಂಗ್‌ ನಲ್ಲಿ ಕೆಟ್ಟ ಹೊಡೆತಕ್ಕೆ ವಿಕೆಟ್‌ ಒಪ್ಪಿಸಿದ್ರು. ನಂತರ ಧವನ್‌ ಜೊತೆಯಾದ ಕನ್ನಡಿಗ ದೇವದತ್ತ ಪಡಿಕ್ಕಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ರು, ಧವನ್‌ 42 ಎಸೆತಗಳಲ್ಲಿ 40 ರನ್‌ ಗಳಿಸಿದ್ರೆ, ದೇವದತ್ತ ಪಡಿಕ್ಕಲ್‌ 23 ಎಸೆತಗಳನ್ನು ಎದುರಿಸಿ 1 ಸಿಕ್ಸರ್‌ ಹಾಗೂ ಒಂದು ಬೌಂಡರಿ ನೆರವಿನಿಂದ 29 ರನ್‌ ಬಾರಿಸಿದ್ರು.

ಆದರೆ ನಂತರ ಬಂದ ಸಂಜು ಸ್ಯಾಮ್ಸನ್‌, ನಿತೀಶ್‌ ರಾಣಾ ನಿರಾಸೆ ಅನುಭವಿಸಿದ್ರು. ಆದರೆ ವೇಗಿ ಭುವನೇಶ್ವರ್‌ ಕುಮಾರ್‌ 11 ಎಸೆತಗಳಲ್ಲಿ 13 ರನ್‌ ಬಾರಿಸಿ ತಂಡ ರನ್‌ ಏರಿಕೆ ಮಾಡಿದ್ರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಿತ್ತು. ಶ್ರೀಲಂಕಾ ಪರ ಅಖಿಲ ಧನಂಜಯ 2 ಹಾಗೂ ಹಸರಂಗ, ಶನಕ ಹಾಗೂ ಚಾಮೀರ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಕೃನಾಲ್‌ ಪಾಂಡ್ಯಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೃನಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ, ದೀಪಕ್‌ ಚಹರ್‌, ಪ್ರಥ್ವಿಶಾ, ಸೂರ್ಯಕುಮಾರ್‌ ಯಾದವ್‌, ಯಜುವೇಂದ್ರ ಚಹಲ್‌ ಇಂದಿನ ಪಂದ್ಯದಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡಿಗರ ದೇವದತ್ತ ಪಡಿಕ್ಕಲ್‌, ರುತುರಾಜ್‌ ಗಾಯಕ್‌ ವಾಡ್‌, ನಿತೀಶ್‌ ರಾಣಾ ಟಿ20 ಪಂದ್ಯಕ್ಕೆ ಪದಾರ್ಪಣೆಯನ್ನು ಮಾಡಿದ್ದರು.

ಸಂಕ್ಷಿಪ್ತ ಸ್ಕೋರ್‌ :
ಭಾರತ : ಶಿಖರ್‌ ಧವನ್‌ 40, ದೇವದತ್ತ ಪಡಿಕ್ಕಲ್‌ 29, ರುತುರಾಜ್‌ ಗಾಯಕ್‌ ವಾಡ್‌ 21, ಭುವನೇಶ್ವರ್‌ ಕುಮಾರ್‌ 12, ನಿತೀಶ್‌ ರಾಣಾ 9, ಸಂಜು ಸ್ಯಾಮ್ಸನ್‌ 7. ಅಖಿಲ ಧನಂಜಯ 29/2, ಚಾಮೀರ 23/1. ಹಸರಂಗ 30/1, ಶನಕ 14/1

ಶ್ರೀಲಂಕಾ : ಧನಂಜಯ ಡಿಸಿಲ್ವಾ 40, ಬಾನುಕ 36, ಹಸರಂಗ 15, ಅವಿಷ್ಕಾ ಫೆರ್ನಾಂಡೋ 11, ಕುಲದೀಪ್‌ ಯಾದವ್‌ 30/2, ರಾಹುಲ್‌ ಚಹರ್‌ 27/1, ಭುವನೇಶ್ವರ ಕುಮಾರ್‌ 21/1

Comments are closed.