Health care : ಹಸಿರು ಟೊಮ್ಯಾಟೋ ಸೇವನೆಯ ಹಿಂದೆ ಇದೆ ಇಷ್ಟೆಲ್ಲ ಲಾಭ

Health care :ಟೊಮ್ಯಾಟೋ ಒಂದು ಉತ್ತಮ ಆಹಾರ ಪದಾರ್ಥವಾಗಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಯಾವುದೇ ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಇದನ್ನು ಸಲಾಡ್​ ಆಗಿಯೂ ಸೇವನೆ ಮಾಡುವವರಿದ್ದಾರೆ.ಟೊಮ್ಯಾಟೋ ಚಟ್ನಿ, ಟೊಮ್ಯಾಟೋ ಸೂಪ್​, ಜ್ಯೂಸ್​ , ಪಲ್ಯ, ಸಾಂಬಾರು ಹೀಗೆ ನಾನಾ ವಿಧಗಳಲ್ಲಿ ಜನರು ಟೊಮ್ಯಾಟೋವನ್ನು ಸೇವನೆ ಮಾಡುತ್ತಾರೆ. ಹೀಗಾಗಿ ಕೆಂಪು ಬಣ್ಣದ ಟೊಮ್ಯಾಟೋ ಎಲ್ಲರ ಮನೆಯಲ್ಲಿಯೂ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಎಂದಾದರೂ ಹಸಿರು ಬಣ್ಣದ ಟೊಮ್ಯಾಟೋವನ್ನು ಮನೆಗೆ ತಂದಿದ್ದೀರೇ..? ಆರೋಗ್ಯ ತಜ್ಞರು ಹೇಳುವ ಪ್ರಕಾರ ಹಸಿರು ಟೊಮ್ಯಾಟೋದಲ್ಲಿ ಅಗಾಧ ಪ್ರಮಾಣದಲ್ಲಿ ಪೋಷಕಾಂಶಗಳು ಅಡಗಿದೆ. ವಿಟಾಮಿನ್​ ಸಿ, ಎ , ಕ್ಯಾಲ್ಶಿಯಂ, ಪೊಟ್ಯಾಷಿಯಂ ಹೀಗೆ ನಾನಾ ಅಂಶಗಳು ಈ ಹಸಿರು ಬಣ್ಣದ ಟೊಮ್ಯಾಟೋದಲ್ಲಿ ಅಡಗಿದೆ.
ಹಸಿರು ಟೊಮ್ಯಾಟೋವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ .ಇದು ಮಾತ್ರವಲ್ಲದೇ ಹಸಿರು ಟೊಮ್ಯಾಟೋ ಸೇವನೆಯಿಂದ ಇನ್ನೂ ಹತ್ತು ಹಲವಾರು ರೀತಿಯ ಪ್ರಯೋಜನಗಳು ಇವೆ.

ಕಣ್ಣುಗಳ ಆರೋಗ್ಯ
ಕಣ್ಣುಗಳಿಗೆ ಆರೋಗ್ಯಕ್ಕೆ ಬಹುಮುಖ್ಯ ಎನಿಸುವ ಬೀಟಾ-ಕ್ಯಾರೋಟಿನ್ ಹಸಿರು ಟೊಮೆಟೊಗಳಲ್ಲಿ ಅಗಾಧ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ಬೀಟಾ ಕ್ಯಾರೋಟಿನ್​ಗಳನ್ನು ನೀವು ಸೇವನೆ ಮಾಡಿದರೆ ಕಣ್ಣಿನ ಆರೋಗ್ಯ ಸೊಂಪಾಗಿ ಇರುತ್ತದೆ.

ರಕ್ತದೊತ್ತಡ
ಕಳಪೆ ಜೀವನಶೈಲಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಔಷಧಿಗಳನ್ನೂ ಸೇವಿಸುತ್ತಾನೆ, ಆದರೆ ಈ ಔಷಧಿಗಳು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಹಾನಿಕಾರಕವಾಗಿದೆ. ನೀವು ಹಸಿರು ಟೊಮೆಟೊಗಳನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಹಸಿರು ಟೊಮ್ಯಾಟೋದಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.


ಚರ್ಮದ ಆರೋಗ್ಯ
ಪ್ರತಿಕೂಲ ಹವಾಮಾನದಿಂದಾಗಿ ಮುಖದ ಮೇಲೆ ಮೊಡವೆಗಳು ಹಾಗೂ ಕಪ್ಪು ಕಲೆಗಳು ಉಂಟಾಗೋದು ಸಾಮಾನ್ಯವಾಗಿದೆ. ಇದನ್ನು ಕಡಿಮೆ ಮಾಡಲು ವಿವಿಧ ರಾಸಾಯನಿಕ ಉತ್ಪನ್ನಗಳನ್ನು ಬಳಕೆ ಮಾಡಲು ಆರಂಭಿಸುತ್ತೇವೆ. ಆದರೆ ನೀವು ಮನಸ್ಸು ಮಾಡಿದರೆ ಮನೆಮದ್ದುಗಳ ಮೂಲಕ ನೀವು ಈ ಸಮಸ್ಯೆಯನ್ನು ಬಗೆಹರಿಸಬಹುದು. ಇದರಲ್ಲಿರುವ ವಿಟಾಮಿನ್​ ಸಿ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

health care tips green tomato is best in boosting immunity know its other benefits

ಇದನ್ನು ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಹಣವನ್ನು ಇಟ್ಟರೆ ಇರಲಿದೆ ಲಕ್ಷ್ಮೀಯ ಕೃಪೆ

ಇದನ್ನೂ ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

Comments are closed.