Carrot : ನಿತ್ಯವೂ ಕ್ಯಾರೆಟ್‌ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

ಪ್ರಪಂಚದಾದ್ಯಂತ ಕ್ಯಾರೆಟ್‌ ಅನ್ನು ಹೆಚ್ಚಿನವರು ಇಷ್ಟ ಪಟ್ಟು ತಿನ್ನತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ನೈಸರ್ಗಿಕವಾದ ಸಿಹಿ ರುಚಿ ಹಾಗೂ ಇದರಲ್ಲಿರುವ ಆರೋಗ್ಯಕ್ಕೆ ಉತ್ತಮ ಫೋಷಕಾಂಶ. ಕ್ಯಾರೆಟ್‌ ಸಾಮಾನ್ಯ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತದೆ. ಆದರೆ ಇದರಲ್ಲಿ ಅಡಗಿರುವ ಪೌಸ್ಟಿಕಾಂಶ ಮನುಷ್ಯನ ಆರೋಗ್ಯಕ್ಕೆ ತುಂಬಾ ಮುಖ್ಯವಾದದ್ದು.

ಕ್ಯಾರೆಟ್‌ ರುಚಿಕರ ಮಾತ್ರವಲ್ಲ ಪುರುಷರ ಆರೋಗ್ಯಕ್ಕೆ ಬಹಳ ಸಹಕಾರಿ. ದಿನಕ್ಕೆ ಒಂದು ಕ್ಯಾರೆಟ್‌ ಅಥವಾ ಒಂದು ಗ್ಲಾಸ್‌ ಕ್ಯಾರೆಟ್‌ ಜೂಸ್‌ ಸೇವಿಸಿದರೆ ಹೃದಯ ಸಂಭಂದಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಲ್ಲದೇ ಕ್ಯಾರೆಟ್‌ ಸೇವನೆಯಿಂದ ಕಣ್ಣಿನ ದೃಷ್ಟಿ ವೃದ್ದಿಸುತ್ತದೆ. ಕ್ಯಾರೆಟ್‌ ದೃಷ್ಟಿಯನ್ನು ಕಾಪಾಡುದಲ್ಲದೇ ವೃದ್ದಾವ್ಯದಲ್ಲಿ ಬರುವ ಕಣ್ಣಿನ ತೊಂದರೆಗಳನ್ನು ತಡೆಯುತ್ತದೆ.

ಇದನ್ನೂ ಓದಿ: Radish : ಮೂಲಂಗಿ ಅಂದ್ರೆ ನಿಮಗೆ ಅಲರ್ಜಿನಾ ? ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಅಂತಾ ತಿಳಿದ್ರೆ ಬೇಡಾ ಅಂದ್ರೂ ಮೂಲಂಗಿ ತಿನ್ನುತ್ತೀರಿ

ನಿತ್ಯವು ಒಂದು ಮಧ್ಯಮ ಗಾತ್ರದ ಕ್ಯಾರೆಟ್‌ ತಿಂದರೆ ಶ್ವಾಸಕೋಶದ ಕ್ಯಾನ್ಸರ್‌ ಅನ್ನು ತಡೆಯುತದೆ. ಅಲ್ಲದೇ ಕ್ಯಾರೆಟ್‌ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಬ್ಲಡ್‌ ಶುಗರ್‌ ಅನ್ನು ಕೂಡ ಇದು ನಿಯಂತ್ರಣ ದಲ್ಲಿರಿಸುತ್ತದೆ. ಅಲ್ಲದೇ ಮಲಬದ್ದತೆಯ ಸಮಸ್ಯೆ ಯಿಂದಲ್ಲು ನಿಮ್ಮ ರಕ್ಷಿಸುತ್ತೆ.

ತೂಕ ಇಳಿಸಲು ಬಯಸುವವರು ತಮ್ಮ ಬಾಯಿ ಚಪಲವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಾದರೆ ಹಸಿ ಕ್ಯಾರೆಟ್‌ ಸೇವೆಯನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮ. ಇದರಿಂದ ದೇಹ ತೂಕವು ಕಡಿಮೆಯಾಗಲು ಸಹಾಯಕ ಆಗುತ್ತದೆ. ಕ್ಯಾರೆಟ್‌ ನಲ್ಲಿ ಹೆಚ್ಚಿನ ಖನಿಜಾಂಶಗಳು ಇರುವುದರಿಂದ ಇದು ದೇಹಕ್ಕೆ ಅವಶ್ಯವಾದ ಹೆಚ್ಚಿನ ಎಲ್ಲಾ ಪೌಸ್ಟಿಕಾಂಶವನ್ನು ವದಗಿಸುತ್ತದೆ.

ಇದನ್ನೂ ಓದಿ: Guava : ಮುಖದ ಸೌಂದರ್ಯಕ್ಕೆ ಪೇರಳೆ ತಿನ್ನಿ

(Is eating carrots every day good for health?)

Comments are closed.