ಇಮ್ಯೂನಿಟಿ ಪವರ್ ಹೆಚ್ಚಿಸಿಕೊಳ್ಳೋದು ಹೇಗೆ ಗೊತ್ತಾ ?

0
  • ಅಂಚನ್ ಗೀತಾ

ಆರೋಗ್ಯವೇ ಭಾಗ್ಯ ಅನ್ನೋ ಗಾದೆಯೊಂದಿದೆ. ಈ ಗಾದೆ ಮಾತು ಪ್ರಸಕ್ತ ಕಾಲಕ್ಕೆ ಕೈಗನ್ನಡಿಯಂತಿದೆ. ಯಾಕಂದ್ರೆ‌ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ‌(ಇಮ್ಯುನಿಟಿ ಪವರ್) ಹೆಚ್ಚಾಗಿದ್ರೆ ಯಾವುದೇ ತೊಂದರೆಯಿಲ್ಲ‌ ಅನ್ನುತ್ತಿದೆ ಆಯುರ್ವೇದ.

ಆದ್ರೆ ಕೋರೊನ ರೋಗಿಯಿಂದ ಅಂತರ ಕಾಯೋದು ಎಷ್ಟು ಮುಖ್ಯನೋ ಅಷ್ಟೆ‌ ಮುಖ್ಯ ನಮ್ಮ‌ ರೋಗ ನಿರೋಧಕ ಶಕ್ತಿ. ಹಾಗಿದ್ರೆ ಇಮ್ಯೂನಿಟಿ ಪವರ್ ಹೆಚ್ಚಿಸೋದು ಹೇಗೆ ಅನ್ನೋ ಟಿಪ್ಸ್ ಇಲ್ಲಿದೆ ನೋಡಿ..

ನಿತ್ಯ ಬಿಸಿ ನೀರನ್ನು ಕುಡಿಯಿರಿ. ಕೊರೊನಾ ವೈರಸ್ ಸಾಮಾನ್ಯವಾಗಿ ನಮ್ಮ ಗಂಟಲಿನಲ್ಲಿ ನಾಲ್ಕು ದಿನಗಳ ಕಾಲ ಇರುತ್ತೆ. ಹೀಗಾಗಿ ಶುದ್ದವಾಗಿರೋ ಬಿಸಿನೀರು ಸೇವನೆ ಮಾಡೋದು ಹೆಚ್ಚು ಸಹಾಯಕ.

ಚೆನ್ನಾಗಿ ಕುದಿಸಿರೋ ನೀರಿಗೆ ಎಂಟರಿಂದ ಹತ್ತು ತುಳಸಿ ಎಲೆಯನ್ನು ಹಾಕಿ 10ನಿಮಿಷದ ಬಳಿಕ ಕುಡಿರಿ.. ಯಾಕಂದ್ರೆ ತುಳಸಿಲಿ ರೋಗ ನಿರೋಧಕ ಶಕ್ತಿ ಇದೆ.

ಇನ್ನು ಲಾವಂಚದ ಎಲೆಯಲ್ಲು ರೋಗ ನಿರೋಧಕ ಶಕ್ತಿಯಿದ್ದು ಅದನ್ನು ನೀರಲ್ಲಿ ಕುದಿಸಿ ಕುಡಿರಿ..

ಶುಂಠಿ, ಬೆಳ್ಳುಳಿಯಲ್ಲಿ ಹೆಚ್ಚಿನ ಶಕ್ತಿಯಿದ್ದು ಇವು ವೈರಸ್ ಗಳ ಜೊತೆ ಹೊರಡುತ್ತೆ ಅಲ್ಲದೆ, ಜ್ವರ,ಕೆಮ್ಮಿನಿಂದ ದೂರ ಇಡುತ್ತೆ..

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಹಾರ ಪದ್ದತಿ ಕೂಡ ಅಷ್ಟೇ ಮುಖ್ಯ. ಹಳ್ಳಿಯಲ್ಲಿ ಸಿಗೋ ಒಂದೆಲಗದ ಚಟ್ನಿಯನ್ನು ಮಾಡಿ ತಿನ್ನಿ. ಒಂದೆಲಗ ಹೆಚ್ಚು ಪ್ರಯಾಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.

ಅಡುಗೆಯಲ್ಲಿ ಹೆಚ್ಚು ಪ್ರಯಾಣದಲ್ಲಿ ಶುಂಠಿ, ಜೀರಿಗೆ, ಮೆಂತ್ಯ ತಂಬುಳಿ ಮಾಡಿ ಊಟಕ್ಕೆ ಬಳಸಿ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವಂತೆ ಮಾಡಲು ಮಕ್ಕಳಿಗೆ ದೋಸೆಯ ಜೊತೆ ಜೇನುತುಪ್ಪವನ್ನು ನೀಡಿ.

ಗುಡ್ಡದಲ್ಲಿರುವ ನೆಲ್ಲಿಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿಯಿದೆ. ಹೀಗಾಗಿ ಹೆಚ್ಚು ಹೆಚ್ಚಾಗಿ ನೆಲ್ಲಿ ಕಾಯಿ ಸೇವನೆ ಮಾಡುವುದು ಅತ್ಯುತ್ತಮ

ಜೇಷ್ಠ ಮಧುವಿನ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ.. ಹೀಗಾಗಿ ಜೇಷ್ಠ ಮಧು ಸೇವನೆ ಮಾಡೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದಾಗಿದೆ. ‌

ಹೀಗೆ ನಿತ್ಯವು ನಾವು ಬಳಸೋ ಆಹಾರದಲ್ಲಿ ಹೇರಳ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ ಮಾಡೊದ್ರಿಂದ ಶೀತ, ಜ್ವರ, ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಕೊರೋನಾದಂತ ರೋಗದಿಂದ ಸೇಫ್ ಆಗಬಹುದು.

Leave A Reply

Your email address will not be published.