Health tips pigmentation : ಸ್ಕಿನ್‌ ಪಿಗ್ಮೆಂಟೇಷನ್‌ಗೆ ಇಲ್ಲಿದೆ ಶಾಶ್ವತ ಪರಿಹಾರ

0

Health tips pigmentation : ಸಾಮಾನ್ಯವಾಗಿ ಪುರುಷರು ಹಾಗೂ 30 ವರ್ಷ ದಾಡಿದ ಮಹಿಳೆಯರಲ್ಲಿ ಕಾಡುವ ಚರ್ಮದ ತೊಂದರೆಗಳಲ್ಲಿ ಸ್ಕಿನ್‌ ಪಿಗ್ಮೆಂಟೇಷನ್‌ (ಬಂಗು ಅಥವಾ ಕರಂಗ್ರ) ಕೂಡ ಒಂದು. ಈ ಸಮಸ್ಯೆಯಿಂದ ಮುಖದ ಮೇಲೆ ಕಪ್ಪಾಗುವುದರಿಂದ ತುಂಬಾ ಕಿರಿ ಕಿರಿಯನ್ನು ಅನುಭವಿಸುತ್ತಾರೆ.

ಎಷ್ಟೋ ಮಂದಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ. ದೇಹದಲ್ಲಿ ಹಾರ್ಮೋನುಗಳ ಬದಲಾವಣೆ, ವಿಪರೀತ ಒತ್ತಡ, ಥೈರಾಯ್ಡ್ ಸಮಸ್ಯೆ ಹಾಗೂ ಜನನ ನಿಯಂತ್ರಣ ಮಾತ್ರೆಗಳ ಬಳಕೆಯಿಂದಲೂ ಸಹ ದೇಹದಲ್ಲಿ ಮೆಲನಿನ್ ಅಂಶ ಹೆಚ್ಚಾಗುತ್ತದೆ. ಇದರಿಂದಾಗಿ ಸ್ಕಿನ್‌ ಪಿಗ್ಮೆಂಟೇಷನ್‌ ಕಾಣಿಸಿಕೊಳ್ಳುತ್ತದೆ. ಹಲವರು ದುಬಾರಿ ವೆಚ್ಚ ಮಾಡಿದರೂ ಕೂಡ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲಾ ಅನ್ನೋ ಕೊರಗಿನಲ್ಲಿದ್ದಾರೆ. ಇಂತಹವರು ಸುಲಭ ಮನೆಮದ್ದಿನಿಂದ ಬಂಗು ಸಮಸ್ಯೆಯಿಂದ ಮುಕ್ತರಾಗಬಹುದು.

ಪರಂಗಿ ಹಣ್ಣು : ಸ್ಕಿನ್‌ ಪಿಗ್ಮೆಂಟೇಷನ್‌ ನಿವಾರಣೆಗೆ ಪರಂಗಿ ಹಣ್ಣು ಕೂಡ ಉತ್ತಮ ಮನೆ ಮದ್ದು. ಅರ್ಧ ಕಪ್ ನಷ್ಟು ಪರಂಗಿ ಹಣ್ಣುಗಳನ್ನು ರುಬ್ಬಿಕೊಂಡು, ಒಂದು ಚಮಚ ಅರಶಿನಪುಡಿ, ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಪೇಸ್ಟ್ ಮಾಡಿಕೊಂಡು ಮುಖದ ಮೇಲೆ ಲೇಪನ ಮಾಡಬೇಕು. ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಒಂದು ತಿಂಗಳುಗಳ ಕಾಲ ಬಳಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುತ್ತದೆ.

ಎಕ್ಕದ ಹಾಲು, ಕಸ್ತೂರಿ : ಎಕ್ಕದ ಗಿಡ ಹಾಲಿನಲ್ಲಿ ಅರಶಿನ ಹಾಗೂ ಕಸ್ತೂರಿಯನ್ನು ಕಲಸಿ ಹಚ್ಚುತ್ತಾ ಬಂದರೆ ಬಂಗು ಬೇಗ ಗುಣವಾಗುತ್ತದೆ.

ಕಿತ್ತಳೆ ಹಣ್ಣಿ ಸಿಪ್ಪೆ : ಕಿತ್ತಳೆ ಹಣ್ಣು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಹೀಗಾಗಿ ನಿತ್ಯವೂ ಮುಖವನ್ನು ಶುದ್ದವಾಗಿರೋ ನೀರಿನಲ್ಲಿ ತೊಳೆದು ಕಿತ್ತಳೆಯ ಸಿಪ್ಪೆಯನ್ನು ಹಚ್ಚುತ್ತಾ ಬಂದರೆ ಸ್ಕಿನ್‌ ಪಿಗ್ಮೆಂಟೇಷನ್‌ ಕಡಿಮೆಯಾಗುವುದರ ಜೊತೆಗೆ ಮುಖದ ಕಾಂತಿಯೂ ಹೆಚ್ಚುತ್ತದೆ.

ಅಲೋವೆರಾ – ನಿಂಬೆ ರಸ : ಮುಖದಲ್ಲಿ ಕಾಣಿಸಿಕೊಳ್ಳುವ ಬಂಗುವಿಗೆ ಅಲೋವೆರಾ ಹಾಗೂ ನಿಂಬೆ ರಸ ರಾಮಬಾಣ. ಅಲೋವೆರಾ ತಿರುಳುಗಳಿಗೆ ನಿಂಬೆಯ ರಸವನ್ನು ಬೆರೆಸಿ ಮಲಗುವ ಮುನ್ನ ಮುಖಕ್ಕೆ ಹಚ್ಚುತ್ತಾ ಬಂದರೆ ಹೆಚ್ಚು ಪ್ರಯೋಜನಕಾರಿ.

ಕರ್ಪೂರ, ನಿಂಬೆ ರಸ : ಅರ್ಧ ಚಮಚ ಕರ್ಪೂರದ ಪುಡಿ, ಅರ್ಧ ಚಮಚ ನಿಂಬೆ ರಸ ಹಾಗೂ ಒಂದೂವರೆ ಚಮಚ ಮುಲ್ತಾನಿ ಮಿಟ್ಟೆಯನ್ನು ಚೆನ್ನಾಗಿ ಬೆರೆಸಿ ಮುಖದ ಮೇಲೆ ಲೇಪನ ಮಾಡಬೇಕು. ಅರ್ಧಗಂಟೆ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ಹೀಗೆ ಮಾಡಿದ ಎರಡು ಗಂಟೆಯವರೆಗೂ ಯಾವುದೇ ರಾಸಾಯನಿಕವನ್ನು ಮುಖಕ್ಕೆ ಹಚ್ಚಬೇಡಿ. ಒಂದು ತಿಂಗಳ ಕಾಲ ಮಾಡಿದ್ರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಕೊಬ್ಬರಿ, ಕರ್ಪೂರ : ಎರಡು ಚಮಚ ಕೊಬ್ಬರಿ ಎಣ್ಣೆ, ಅರ್ಧ ಚಮಚ ಕರ್ಪೂರದ ಪುಡಿಯನ್ನು ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಚರ್ಮದ ಸಮಸ್ಯೆಯಿಂದ ಮುಕ್ತಿಯನ್ನು ಕಾಣಬಹುದು.

ಕೆಂಪು ನೀರುಳ್ಳಿ : ಮಿಟಮಿನ್ ಸಿ ಯಥೇಚ್ಚವಾಗಿರುವ ಆಂಟಿ ಆಕ್ಸಿಡೆಂಟ್ ಗಳಲ್ಲಿ ಒಂದಾದ ಕೆಂಪು ಈರುಳ್ಳಿಯನ್ನು ಕತ್ತರಿಸಿ ಕಲೆಗಳಿರುವ ಭಾಗಕ್ಕೆ ದಿನಕ್ಕೆರಡು ಬಾರಿ ಹಚ್ಚುತ್ತಾ ಬಂದ್ರೆ ಬಂಗು ವಿರುದ್ದ ಅದ್ಬುತವಾದ ಫಲಿತಾಂಶವನ್ನು ನೀಡುತ್ತದೆ.

ಪಪ್ಪಾಯ : ಪಪ್ಪಾಯ ಹಣ್ಣಿನಲ್ಲಿರುವ ಪ್ಯಾಪೇನ್ ಅಂಶವು ಉತ್ತಮ ರೀತಿಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ತಿರಿದ ಪಪ್ಪಾಯ ಹಣ್ಣಿನ ರಸವನ್ನು ನಿತ್ಯವೂ ಮುಖಕ್ಕೆ ಲೇಪಿಸಿ 10 ರಿಂದ 15 ನಿಮಿಷಗಳ ನಂತರ ಮುಖವನ್ನು ತೊಳೆದರೆ ನುಣುಪಾದ ಕಲೆ ರಹಿತ ತ್ವಜೆ ನಿಮ್ಮದಾಗುತ್ತದೆ.

ಬಾದಾಮಿ ಮತ್ತು ಹಾಲು : ಚರ್ಮದ ಅತಿಯಾದ ಒಣಗುವಿಕೆ ಕೂಡ ಸ್ಕಿನ್‌ ಪಿಗ್ಮೆಂಟೇಷನ್‌ ಕಾರಣವಾಗುತ್ತದೆ. ಹೀಗಾಗಿ ಫ್ಯಾಂಟಿ ಆಸಿಡ್ ಗಳಿಂದ ಕೂಡಿದ ಬಾದಾಮಿ ಭಂಗುವಿರುದ್ದ ಅದ್ಬುತವಾದ ಫಲಿತಾಂಶವನ್ನು ನೀಡುತ್ತದೆ. ಬಾದಾಮಿ ಬೀಜಗಳನ್ನು ಹಾಲಿನಲ್ಲಿ ನೆನೆಪಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಬೇಕು. ಹೀಗೆ ಹಚ್ಚಿದ 10 -15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಿಂದ ತೊಳೆಯುತ್ತಾ ಬಂದರೆ ಚರ್ಮಕ್ಕೆ ಅಗತ್ಯವಾಗಿರೋ ನ್ಯೂಟ್ರಿಯೆಂಟ್ ಲಭಿಸಿ ಚರ್ಮ ಕಾಂತಿಯುಕ್ತವಾಗುತ್ತದೆ.

ಶುಷ್ಕಗೊಂಡಿರುವ ಚರ್ಮಕ್ಕೆ ಮರುಜೀವ ಕೊಡುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಚರ್ಮಕ್ಕೆ ಮರುಜೀವ ಬರಲು ವಿಟಮಿನ್ – ಇ ಬೇಕೆ ಬೇಕು. ಅದಕ್ಕಾಗಿ ಚರ್ಮದ ಆರೈಕೆಗೆ ದುಬಾರಿ ಹಣಕೊಟ್ಟು ರಾಸಾಯನಿಕ ಯುಕ್ತ ವಸ್ತುಗಳನ್ನು ಬಳಸಿ ಚರ್ಮವನ್ನು ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಇರೋ ವಸ್ತುಗಳನ್ನು ಬಳಸಿ ಸ್ಕಿನ್‌ ಪಿಗ್ಮೆಂಟೇಷನ್‌ ಸಮಸ್ಯೆಯಿಂದ ಮುಕ್ತರಾಗಿ.

ಇದನ್ನೂ ಓದಿ : Hypertension : ಅಧಿಕ ರಕ್ತದೊತ್ತಡ ನಿಭಾಯಿಸಲು ಸಹಾಯ ಮಾಡುವ ಯೋಗಾ, ಆಕ್ಯಪಂಚರ್‌ ಮತ್ತು ಡಯಟ್‌!

ಇದನ್ನೂ ಓದಿ : Interesting Facts About Guava: ಪೇರಳೆ ಹಣ್ಣಿನ ಕುರಿತಾಗಿ ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿ

health tips pigmentation problem.

Leave A Reply

Your email address will not be published.