Foot Odor : ಪಾದದ ವಾಸನೆಗೆ ಪರಿಹಾರಗಳು

Foot Odor : ಸಮಸ್ಯೆಗಳೇ ಹಾಗೆ ಯಾವಾಗ ಹೇಗೆ ಬರುತ್ತದೆ ಎಂದು ಊಹಿಸುವುದು ಕಷ್ಟ. ಅದು ಧೈಹಿಕ ಸಮಸ್ಯೆ ಇರಬಹುದು ಅಥವಾ ಮಾನಸಿಕ ಸಮಸ್ಯೆಯೇ ಇರಬಹುದು. ಹಾಗಂತ ಕಷ್ಟ ಬಂತು ಎಂದು ಯೋಚಿಸಿ ಕುಳಿತು ಪ್ರಯೋಜನವಿಲ್ಲ. ಅದರ ಬದಲಾಗಿ ಉಪಾಯ ಕಂಡುಕೊಳ್ಳಬೇಕು. ಇವತ್ತು ನಾವು ಹೇಳಲು ಹೊರಟಿರುವುದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡು ಬರುವ ಸಮಸ್ಯೆಯೇ ಆಗಿದೆ. ಅದುವೇ ಶೂ ಹಾಕಿದಾಗ ಬರುವ ವಾಸನೆಯಿಂದ ಹೇಗೆ ನಮ್ಮನ್ನು ನಾವು ಹೇಗೆ ರಕ್ಷಿಸಕೊಳ್ಳಬಹುದು ಎಂದು.

ಈ ಸಮಸ್ಯೆಯು ಸಾಮಾನ್ಯವಾಗಿ ಹೆಚ್ಚಿನ ಸಮಯವನ್ನು ಶೂ ಹಾಕಿಕೊಂಡೇ ಇರುವರಿಗೆ ಕಂಡು ಬರುತ್ತದೆ. ಹೆಚ್ಚಿನ ಸಮಯದವರೆಗೆ ಶೂ ಹಾಕಿಕೊಂಡು ಇರುವುದರಿಂದ ಕಾಲು ಬೆವರಿ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಕಿರಿಕಿರಿ ಶುರುವಾಗುತ್ತದೆ. ಎಷ್ಟು ಬಾರಿ ಕಾಲು ತೊಳೆದ್ರೂ ವಾಸನೆ ಮಾತ್ರ ಹೋಗೋದಿಲ್ಲ. ಅಲ್ಲದೇ ಈ ವಾಸನೆ ಬೇರೆಯವರೆದುರು ಮುಜುಗರ ಉಂಟು ಮಾಡುತ್ತದೆ. ನಿಮ್ಮ ಪಾದದಿಂದಲೂ ಈ ವಾಸನೆ ಬರ್ತಾ ಇದ್ದರೆ ಸುಲಭವಾಗಿ ಅದಕ್ಕೆ ಗುಡ್ ಬೈ ಹೇಳ ಬಹುದು. ಅದಕ್ಕೇನು ಹೆಚ್ಚಿನ ಹಣದ ಅವಶ್ಯಕತೆ ಇಲ್ಲ. ನಮ್ಮಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹೌದು. ನೀವು ಮಾಡಬೇಕಾಗಿರುವುದು ಇಷ್ಟೇ. ಟೀ ಎಲೆಗಳನ್ನು ಬಳಸಿಕೊಂಡು ನೀವು ಈ ವಾಸನೆಯನ್ನು ಹೋಗಲಾಡಿಸಬಹುದು. ಮೊದಲು ಟೀ ಎಲೆಗಳನ್ನು ಕುದಿಸಿಕೊಳ್ಳಿ. ನಂತರ ಆ ನೀರಿನಲ್ಲಿ 30 ನಿಮಿಷಗಳ ಕಾಲ ನಿಮ್ಮ ಪಾದವನ್ನಿಡಿ. ಇದ್ರಿಂದ ಕಾಲಿನಲ್ಲಿರುವ ಬ್ಯಾಕ್ಟೀರಿಯಾ ಸಾಯುವ ಜೊತೆಗೆ ವಾಸನೆ ಮಾಯವಾಗುತ್ತದೆ. ಹಾಗೂ ನೈಲಾನ್ ಹಾಗೆ ಬೇರೆ ಕಡಿಮೆ ಗುಣಮಟ್ಟದ ಸಾಕ್ಸ್ ಹಾಕುವುದರಿಂದ ಪಾದಗಳು ಜಾಸ್ತಿ ಬೆವರುತ್ತವೆ. ಹಾಗಾಗಿ ಉತ್ತಮ ಗುಣಮಟ್ಟದ ಸಾಕ್ಸ್ ಹಾಕಿ. ಹಾಗೆ ಸುಲಭವಾಗಿ ಗಾಳಿಯಾಡುವ ಶೂ ಹಾಕಿ. ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೇಕಿಂಗ್ ಸೋಡಾ ಹಾಗೂ ನಿಂಬು ರಸವನ್ನು ಬೆರೆಸಿ ಪಾದಕ್ಕೆ ಹಾಕಿ. ಹೀಗೆ ಮಾಡುವುದರಿಂದ ಪಾದದಿಂದ ಬರುವ ವಾಸನೆ ಕಡಿಮೆಯಾಗುತ್ತದೆ. ಒಂದು ಪಾತ್ರೆಗೆ ಬಿಸಿ ನೀರನ್ನು ಹಾಕಿ ನಾಲ್ಕು ಚಮಚ ಸ್ಪಟಿಕವನ್ನು ಹಾಕಿ. ನಂತ್ರ ಈ ನೀರಿನಲ್ಲಿ 30 ನಿಮಿಷ ಪಾದವನ್ನಿಡಿ. ಇದಲ್ಲದೆ ಆಗಾಗ ಸ್ಕ್ರಬ್ಬಿಂಗ್ ಮಾಡುವುದರಿಂದ ಕೂಡ ವಾಸನೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Minority Communities Scholarship Schemes: ಅಲ್ಪಸಂಖ್ಯಾತ ಸಮುದಾಯಗಳಿಗೆ ವಿದ್ಯಾರ್ಥಿವೇತನ ಯೋಜನೆಗಳು

ಇದನ್ನೂ ಓದಿ: Rishabh Pant helped Cricket Australia : ರಿಷಭ್ ಪಂತ್ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಖಜಾನೆಗೆ ಕೋಟಿ ಕೋಟಿ ದುಡ್ಡು.. ಹೇಗೆ ಗೊತ್ತಾ?

(Home Remedies for Foot Odor)

Comments are closed.