Home Remedies for Stretch Mark : ಪ್ರೆಗ್ನೆನ್ಸಿ ನಂತರದ ಸ್ಟ್ರೆಚ್‌ ಮಾರ್ಕ್‌ಗೆ ಇಲ್ಲಿದೆ ಮನೆಮದ್ದು

ನಮ್ಮ ಬಾಹ್ಯ ಸೌಂದರ್ಯವು (Beauty) ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವ ಪಡೆದುಕೊಳ್ಳುತ್ತಿದೆ. ಆದರೆ ಕೆಲವೊಮ್ಮೆ ಮುಜುಗರಕ್ಕೊಳಪಡುವ ಸಂದರ್ಭಗಳು ಬರುತ್ತವೆ. ದೇಹದ ಮೇಲಾದ ಕಲೆಗಳು ಆತ್ಮವಿಶ್ವಾಸವನ್ನು ಕುಗ್ಗಿಸಿ ಬಿಡುತ್ತದೆ. ಚೆಂದದ ಉಡುಪುಗಳನ್ನು ಧರಿಸಲು ಕಷ್ಟವಾಗುತ್ತದೆ. ಅವುಗಳಲ್ಲಿ ಸ್ಟ್ರೆಚ್‌ ಮಾರ್ಕ್‌ ಸಹ ಒಂದು. ಇದು ಬಹಳಷ್ಟು ಮಹಿಳೆಯರು ಚಿಂತೆಗೊಳಗಾಗುವ ವಿಷಯವಾಗಿದೆ (Home Remedies for Stretch Mark).

ಹೆಚ್ಚಾಗಿ ಪ್ರೆಗ್ನೆನ್ಸಿಯ ನಂತರ ಅಥವಾ ತೂಕ ಇಳಿಕೆಯ ನಂತರ ದೇಹದ ಹಲವು ಭಾಗಗಳಲ್ಲಿ ಸ್ಟ್ರೆಚ್‌ ಮಾರ್ಕ್‌ ಕಾಣಿಸುತ್ತದೆ. ಹೀಗೆ ಕಾಣಿಸುವ ಸ್ಟ್ರೆಚ್‌ ಮಾರ್ಕ್‌ಗಳು ನೀಲಿ ಬಣ್ಣದ ನರಗಳು. ಇವುಗಳು ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಕಾಣಿಸುತ್ತದೆ. ಸ್ಟ್ರೆಚ್‌ ಮಾರ್ಕ್‌ಗಳು ಯಾವುದೇ ಕಾಯಿಲೆಗಳಲ್ಲ ಅಥವಾ ಹಾನಿಕಾರಕವೂ ಅಲ್ಲ. ಆದರೆ ಇದು ಒಂದು ರೀತಿಯ ಮುಜುಗರದ ಅನುಭವ ನೀಡುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಅನೇಕ ರೀತಿಯ ಸೌಂದರ್ಯದ ಉತ್ಪನ್ನಗಳನ್ನು ಬಳಸುತ್ತಾರೆ. ಅತಿಯಾದ ರಾಸಾಯನಿಕಗಳು ಉತ್ತಮವಾದುದಲ್ಲ. ಅದರ ಬದಲಿಗೆ ಮನೆಮದ್ದುಗಳನ್ನು ಉಪಯೋಗಿಸಿ ಸ್ಟ್ರೆಚ್‌ ಮಾರ್ಕ್‌ ಅನ್ನು ಹೋಗಲಾಡಿಸಿಕೊಳ್ಳಬಹುದು.

ಸ್ಟ್ರೆಚ್‌ ಮಾರ್ಕ್‌ ಹೋಗಲಾಡಿಸುವ ಮನೆಮದ್ದುಗಳು:

  • ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆ:
    ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಗಳು ಚರ್ಮದ ಮೇಲೆ ಕಾಣಿಸುವ ಸ್ಟ್ರೆಚ್ ಮಾರ್ಕ್‌ ಅನ್ನು ಬಹು ಬೇಗನೆ ಹೋಗಲಾಡಿಸುತ್ತವೆ. ಅದಕ್ಕಾಗಿ ಮೊದಲಿಗೆ ಒಂದು ಬೌಲ್‌ ಅಲ್ಲಿ ಸಮಪ್ರಮಾಣದಲ್ಲಿ ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆ ತೆಗೆದುಕೊಳ್ಳಿ. ಚೆನ್ನಾಗಿ ಮಿಕ್ಸ್‌ ಮಾಡಿ. ಈ ಎಣ್ಣೆಯನ್ನು ಪ್ರತಿದಿನ ಸ್ಟ್ರೆಚ್‌ ಮಾರ್ಕ್‌ ಜಾಗಕ್ಕೆ ಹಚ್ಚುವುದರಿಂದ ಪರಿಣಾಮವನ್ನು ನೋಡಬಹುದು.
  • ಅಲೋವೆರಾ ಜೆಲ್‌ :
    ಆಂಟಿಒಕ್ಸಿಡೆಂಟ್‌ ಹೆಚ್ಚಿನ ಪ್ರಮಾಣದಲ್ಲಿರುವ ಅಲೋವೆರಾವು ಸ್ಟ್ರೆಚ್‌ಮಾರ್ಕ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಅಲೋವೆರಾ ಜೆಲ್‌ ಅನ್ನು ಹಚ್ಚುವುದರಿಂದ ಪರಿಣಾಮವನ್ನು ನೀವು ಕಾಣಿಬಹುದಾಗಿದೆ. ಅಲೋವೆರಾ ಜೆಲ್‌ ಅನ್ನು ಸ್ನಾನದ ನಂತರ ಮತ್ತು ಮಲಗುವ ಮೊದಲು ಹೆಚ್ಚಬೇಕು.
  • ಮೊಟ್ಟೆ ಮತ್ತು ವಿಟಮಿನ್‌ E–ಕ್ಯಾಪ್ಸುಲ್‌ಗಳು :
    ಮೊಟ್ಟೆ ಮತ್ತು ವಿಟಮಿನ್‌ E–ಕ್ಯಾಪ್ಸುಲ್‌ಗಳು ಸ್ಟ್ರೆಚ್‌ ಮಾರ್ಕ್‌ ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ. ಮೊಟ್ಟೆಯು ಪ್ರೋಟೀನ್‌ನ ಉತ್ತಮ ಮೂಲವಾಗಿರುವುದರಿಂದ ಇದು ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ ಮತ್ತು ವಿಟಮಿನ್‌ E ಯ ಸ್ಟ್ರೆಚ್‌ ಮಾರ್ಕ್‌ ಅನ್ನು ಬಹು ಬೇಗನೆ ತೆಗೆದುಹಾಕುತ್ತದೆ. 2 ಮೊಟ್ಟೆಯ ಬಿಳಿ ಭಾಗ ತೆಗೆದುಕೊಂಡು ಅದಕ್ಕೆ 2 ವಿಟಮಿನ್ E ಕ್ಯಾಪ್ಸುಲ್‌ಗಳನ್ನು ಸೇರಿಸಿ. ಅದನ್ನು ಚೆನ್ನಾಗಿ ಮಿಕ್ಸ್‌ ಮಾಡಿ. ಬ್ರೆಷ್‌ನ ಸಹಾಯದಿಂದ ಸ್ಟ್ರೆಚ್ ಮಾರ್ಕ್‌ ಆದ ಜಾಗಕ್ಕೆ ಹಚ್ಚಿ, ಒಣಗಿದ ನಂತರ ನೀರಿನಿಂದ ತೊಳೆಯಿರಿ.
  • ಸವತೆಕಾಯಿ ಮತ್ತು ಲಿಂಬು ರಸ:
    ಲಿಂಬು ನೈಸರ್ಗಿಕ ಆಸಿಡ್‌ ಆಗಿರುವುದರಿಂದ ಸ್ಟ್ರೆಚ್‌ ಮಾರ್ಕ್‌ ಕಡಿಮೆ ಮಾಡುತ್ತದೆ ಮತ್ತು ಸವತೆಕಾಯಿ ರಸ ತ್ವಚೆಯನ್ನು ಫ್ರೆಶ್‌ ಆಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇವೆರಡನ್ನು ಸಮಪ್ರಮಾಣದಲ್ಲಿ ಮಿಕ್ಸ್‌ ಮಾಡಿಕೊಳ್ಳಿ. ಇದನ್ನು ಸ್ಟ್ರೆಚ್‌ ಮಾರ್ಕ್‌ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ.

ಇದನ್ನೂ ಓದಿ : Home Remedies for Diabetes : ಸಕ್ಕರೆ ಕಾಯಿಲೆ ಸಮಸ್ಯೆಗೆ, ಒಣ ನೆಲ್ಲಿಕಾಯಿ ಪುಡಿಯಲ್ಲಿದೆ ಚಮತ್ಕಾರ

ಇದನ್ನೂ ಓದಿ : Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

(Home Remedies for Stretch Mark, use these effective home remedies)

Comments are closed.