Insomnia Health Issues : ಹೀಗೆ ಮಾಡಿ ನಿದ್ರಾ ಹೀನತೆಯಿಂದ ಮುಕ್ತರಾಗಿ

0

Insomnia Health Issues : ಇಂದಿನ ಬ್ಯುಸಿ ಲೈಪ್ ನಲ್ಲಿ ಹಲವರಿಗೆ ನಿದ್ದೆ ಮಾಡೋದಕ್ಕೂ ಟೈಂ ಇಲ್ಲ. ವಾರವಿಡೀ ಸರಿಯಾಗಿ ನಿದ್ರೆ ಇಲ್ಲಾ. ಹೀಗಾಗಿ ವೀಕೆಂಡ್ ನಲ್ಲಿ ಜಾಸ್ತಿ ಹೊತ್ತು ಮಲಗಬೇಕು ಅಂತಾ ಅಂದುಕೊಳ್ಳೋರೇ ಜಾಸ್ತಿ. ಆದರೆ ವಿಕೇಂಡ್ ಮುಗಿಯುತ್ತಿದ್ದಂತೆಯೇ ಮತ್ತದೇ ಕೆಲಸ, ಅರೆಬರೆ ನಿದ್ರೆ. ಹೀಗೆ ಮಾಡಿದ್ರೆ ಆರೋಗ್ಯ ಕೆಡುವುದು ಗ್ಯಾರಂಟಿ ಅಂತಿದೆ ಅಧ್ಯಯನ. ವೀಕೆಂಡ್​ ಜಾಸ್ತಿ ಹೊತ್ತು ಮಲಗುವುದರಿಂದ ದೇಹಕ್ಕೆ ವಿಶ್ರಾಂತಿಯೇನೋ ಸಿಗುತ್ತದೆ. ಆದರೆ ವಾರವೀಡಿ ಬಾಕಿ ಇರೋ ನಿದ್ರೆಯನ್ನೆಲ್ಲಾ ಮುಗಿಸಬಹುದು ಅಂತಾ ಅಂದ್ಕೊಳ್ಳೋದು ತಪ್ಪು ಗ್ರಹಿಕೆ.

2 ದಿನಗಳು ರಜೆ ಸಿಕ್ಕರೂ ನಿದ್ರೆಯಲ್ಲೇ ರಜೆ ಕಳೆಯುವವರು ಕೂಡ ಇದ್ದಾರೆ. ಆದರೆ, ಇದು ಒಳ್ಳೆಯದಲ್ಲ ಎನ್ನುತ್ತದೆ ಒಂದು ಅಧ್ಯಯನ. 18ರಿಂದ 39 ವರ್ಷದೊಳಗಿನ 36 ಆರೋಗ್ಯವಂತ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. 2 ವಾರಗಳ ಕಾಲ ಲ್ಯಾಬೋರೇಟರಿಯಲ್ಲಿ ಅವರನ್ನು ನಿಗಾದಲ್ಲಿ ಇರಿಸಲಾಯಿತು.  ಆಹಾರ, ಬೆಳಕಿಗೆ ಎಷ್ಟು ಎಕ್ಸ್​ಪೋಸ್​ ಆಗುತ್ತಾರೆ, ಎಷ್ಟು ಹೊತ್ತು ನಿದ್ರೆ ಮಾಡುತ್ತಾರೆ ಎಂಬುದನ್ನು ಸಮೀಕ್ಷೆಯಲ್ಲಿ ಗಮನಿಸಲಾಯಿತು. ನಂತರ ಅವರನ್ನು ನಾಲ್ಕೈದು ತಂಡಗಳಾಗಿ ಬೇರ್ಪಡಿಸಲಾಯಿತು. ಸಮೀಕ್ಷೆಯ ಕೆಲವು ಹಂತಗಳಲ್ಲಿ ವೀಕೆಂಡ್​ ಹೆಚ್ಚು ನಿದ್ರೆ ಮಾಡುವವರಿಗಿಂತ ಬೇರೆಯವರೇ ಬೆಸ್ಟ್​ ಎನಿಸಿದ್ದರು. ಕಳೆದು ಹೋದ ದಿನಗಳ ನಿದ್ರೆಯನ್ನು ಒಂದೇ ಬಾರಿಗೆ ಮಾಡುತ್ತೇವೆ ಎಂದು ಹೇಳುವುದು ಮೂರ್ಖತನ.

ನಿನ್ನೆಯ ನಿದ್ರೆಯನ್ನು ನಾವು ಇಂದು ಮಾಡಲು ಸಾಧ್ಯವೇ ಇಲ್ಲ. ನಿದ್ರೆಯ ಕೊರತೆಯಿಂದಲೇ ಹಲವು ಬಗೆಯ ತೊಂದರೆಗಳು ಕಂಡುಬರುತ್ತವೆ. ಹಾಗಾದ್ರೆ ನಿದ್ರಾ ಹೀನತೆಗೆ ಏನು ಪರಿಹಾರ ? ಅಂತಾ ಯೋಚಿಸಬೇಡಿ. ಮನೆಮದ್ದು ಮಾಡಿ ನಿದ್ರಾ ಹೀನತೆಯಿಂದ ಮುಕ್ತರಾಗಿ.

ಮೊಬೈಲ್ ದೂರವಿಡಿ :

ನಿದ್ರೆ ಸರಿಯಾಗಿಲ್ಲ ಎಂದರೆ ಇಡೀ ದಿನ ಮೂಡ್ ಸರಿಯಾಗಿರುವುದಿಲ್ಲ. ಅದರಿಂದ ನಾವು ಮಾಡುವ ಕೆಲಸವನ್ನು ಕೂಡ ಏಕಾಗ್ರತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ. ಈಗಿನ ಕಾಲದಲ್ಲಿ ನಿದ್ರಾಹೀನತೆ ಬಹಳ ಸಾಮಾನ್ಯ ಎಂಬಂತಾಗಿದೆ. ಮಲಗಿದ ಕೂಡಲೆ ಬಹುತೇಕರಿಗೆ ಮೊಬೈಲ್ ನೋಡುವ ಅಭ್ಯಾಸ ಇರುತ್ತದೆ. ಮೊಬೈಲ್​ನಲ್ಲಿ ವಿಡಿಯೋಗಳನ್ನು ನೊಡುತ್ತಾ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಅದರಿಂದ ಕಣ್ಣು ಒಣಗಿದಂತಾಗಿ ನಿದ್ರೆಯೂ ದೂರ ಹೋಗುತ್ತದೆ.

ಹೊಟ್ಟೆ ತುಂಬಾ ತಿನ್ನಬೇಡಿ :

Insomnia Health Issues Health tips

ರಾತ್ರಿ ಆರಾಮಾಗಿ ಕುಳಿತು ಹೊಟ್ಟೆತುಂಬ ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ, ಈ ಅಭ್ಯಾಸವನ್ನು ಬಿಟ್ಟುಬಿಡುವುದು ಉತ್ತಮ. ನಿದ್ರೆ ಬಾರದಿದ್ದರೆ ಕೆಟ್ಟ ಯೋಚನೆ ಮಾಡುವ ಬದಲು ಒಳ್ಳೆಯ ಸಂಗೀತ ಕೇಳಿ, ಪುಸ್ತಕ ಓದಿ. ಆಗ ಚೆನ್ನಾಗಿ ನಿದ್ರೆ ಬರುತ್ತದೆ.

ಮಂದ ಬೆಳಕಿನಲ್ಲಿಯೂ ಮಲಗಬೇಡಿ :

Insomnia Health Issues Health tips

ನೀವು ಮಲಗುವ ಕೋಣೆ ಕತ್ತಲಾಗಿದ್ದಷ್ಟೂ ಒಳ್ಳೆಯದು. ರಾತ್ರಿ ಎದ್ದಾಗ ಬೇಕಾಗುತ್ತದೆ ಎಂದು ಮಬ್ಬು ಬೆಳಕಿನ ಬಲ್ಬ್​ ಹಾಕಿಕೊಂಡು ಮಲಗಬೇಡಿ. ಸಾಧ್ಯವಾದರೆ ಹಗಲು ನಿದ್ರೆ ಮಾಡುವುದನ್ನು ಅವಾಯ್ಡ್​ ಮಾಡಿ.ಹಗಲು ನಿದ್ರೆ ಮಾಡಿದರೆ ರಾತ್ರಿ ನಿದ್ರೆ ಬರುವುದಿಲ್ಲ. ನಿದ್ರೆಯಿಲ್ಲದೆ ಆಯಾಸವಾದಾಗ ರಾತ್ರಿ ಬೇಗ ನಿದ್ರೆ ಮಾಡಲು ಸಾಧ್ಯವಾಗುತ್ತದೆ.

ಸಡಿಲವಾದ ಬಟ್ಟೆ ಧರಿಸಿ :

Insomnia Health Issues Health tips

ಮಲಗುವಾಗ ಸಡಿಲವಾದ ಉಡುಪು ಧರಿಸಿ. ಬಿಗಿಯಾದ ಬಟ್ಟೆ ಧರಿಸುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಹೀಗಾಗಿ, ಆರಾಮದಾಯಕವಾದ ಕಾಟನ್ ಬಟ್ಟೆ ಧರಿಸಿ.

ಪಿಸ್ತಾ ಕಾಳು ಸೇವಿಸಿ :

Insomnia Health Issues Health tips

ಮಲಗುವ ಸ್ವಲ್ಪ ಸಮಯ ಮುನ್ನ ಪಿಸ್ತಾ ಕಾಳುಗಳನ್ನು ಸೇವಿಸುವುದು ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ಬದಿಗಿರಿಸುತ್ತದೆ. ಮೆಗ್ನಿಷಿಯಂ ಹಾಗೂ ವಿಟಮಿನ್‌ ಬಿ6 ಹೊಂದಿರುವ ಪಿಸ್ತಾ ಕಾಳುಗಳಲ್ಲಿರುವ ಕೆಲ ಅಂಶಗಳು ನಿದ್ರೆಗೆ ಪೂರಕವಾಗಿವೆ. ನಿದ್ರೆ ಚೆನ್ನಾಗಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡೂ ಚೆನ್ನಾಗಿರುತ್ತದೆ. ನಿದ್ರೆ ಮಾಡಲು ರೂಮಿನ ವಾತಾವರಣ ಕೂಡ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ. ಹೀಗಾಗಿ, ರಾತ್ರಿ ಮಲಗುವಾಗ ಆಫೀಸ್, ಮನೆ, ಮಕ್ಕಳು, ಗಂಡ, ಹೆಂಡತಿ ಎಂದೆಲ್ಲ ತಲೆಕೆಡಿಸಿಕೊಳ್ಳದೆ ಆರಾಮಾಗಿ ನಿದ್ರಿಸಿ. ರಾತ್ರಿ ಬೇಗ ಮಲಗಿ ಬೇಗ ಏಳುವ ಅಭ್ಯಾಸವನ್ನು ರೂಪಿಸಿಕೊಂಡರೆ ಮನಸು ಉಲ್ಲಸಿತವಾಗಿರುತ್ತದೆ.

ಇದನ್ನೂ ಓದಿ : Ginger Tea Health Benefits: ಸರ್ವ ರೋಗಕ್ಕೂ ರಾಮಬಾಣ ಶುಂಠಿ ಚಹಾ

ಇದನ್ನೂ ಓದಿ : ರುಚಿಗೂ ಆರೋಗ್ಯಕ್ಕೂ ಸೈ ಎನಿಸಿಕೊಂಡ ಕೊತ್ತಂಬರಿ ಸೊಪ್ಪು; ಕೊತ್ತಂಬರಿ ಸೊಪ್ಪು ತಿಂದ್ರೆ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ!

ಆರೋಗ್ಯ ಹಾಗೂ ಸೌಂದರ್ಯ ಸಲಹೆ ಕುರಿತು ಲೇಖನಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Insomnia Health Issues Health tips

Leave A Reply

Your email address will not be published.