Temple inspired Parliament House : ಪಾರ್ಲಿಮೆಂಟ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾದ ದೇಗುಲ

  • ಹೇಮಂತ್ ಚಿನ್ನು

ಭಾರತದಲ್ಲಿ ಹಲವು ರೀತಿಯ ದೇಗುಲಗಳು ಇವೆ. ಹಲವು ದೇವರ ಆರಾಧನೆಗೆ ಮತ್ತು ಹಲವು ತಂತ್ರಶಕ್ತಿ ಯನ್ನು ಪ್ರತಿನಿಧಿಸುವ ದೇವರು ಗಳ ಆರಾಧನೆಗೆ, ( Temple inspired Parliament House ) ಭಾರತದಲ್ಲಿ 7ನೇ ಶತಮಾನದಲ್ಲಿ ಯೋಗಿನೀ ಆರಾಧನೆ ಪ್ರಾರಂಭವಾಯಿತು.

ಯೋಗಿನಿ ಆರಾಧನೆಯು ತಂತ್ರ ಶಕ್ತಿ (ಬ್ಲ್ಯಾಕ್ ಮ್ಯಾಜಿಕ್) ಯನ್ನು ಪ್ರಸಾದಿಸುವವರು ಅನ್ನುವ ನಂಬಿಕೆ ಆ ಕಾಲದಲ್ಲಿ ಇತ್ತು. ಉತ್ತರ ಭಾರತದಲ್ಲಿ ನಾಲ್ಕು ಚೌಸತ್ ಯೋಗಿನಿ ದೇಗುಲಗಳಿವೆ. ಈಗ ತಂತ್ರ,ಬ್ಲ್ಯಾಕ್ ಮ್ಯಾಜಿಕ್ ಏನೂ ಇಲ್ಲ ಬರೀ ದೇಗುಲ ಮಾಮೂಲಿ ಪೂಜೆ ಅಷ್ಟೇ. ಆದರೆ ವಿಶಿಷ್ಟ  ನಿರ್ಮಾಣ ದ ದೃಷ್ಟಿಯಿಂದ ನಾವು ಭೇಟಿ ನೀಡಲೇಬೇಕಾದ ಸ್ಥಳಗಳು ಇವು. ಚೌಸಠ್ ಅಂದರೆ 64 ಯೋಗಿನಿಯರ ದೇಗುಲ ಎಂದು ಅರ್ಥ.

 Temple inspired Parliament House : The chapel that inspired the design of the Parliament House

ದಕ್ಷಿಣ ಭಾರತದಲ್ಲಿ ನಾವು ಈ ದೇವತೆಗಳನ್ನು ದುರ್ಗಾ ದೇವತೆಯರ ರೂಪಗಳು ಎಂದು ಭಾವಿಸುತ್ತೇವೆ. ಈ ನಾಲ್ಕೂ ದೇಗುಲಗಳು ವೃತ್ತಾಕಾರವಾಗಿದ್ದು ಮತ್ತೆ ಒಳಗೆ 64 ಉಪ ದೇಗುಲಗಳಿದ್ದು ಒಂದೊಂದು ಗುಡಿ ಯಲ್ಲಿ ಒಂದೊಂದು ಯೋಗಿನಿಯನ್ನು ಪ್ರತಿಷ್ಟಿಸ ಲಾಗಿದೆ. ಮಧ್ಯೆ ಶಿವನನ್ನು ಪ್ರತಿಷ್ಟಿಸಲಾಗಿದೆ. ಈ ಕಲ್ಲಿನ ನಿರ್ಮಾಣ ಗಳನ್ನು ನೋಡುವುದೇ ಸೊಗಸು. ಎರಡು ಚೌಸಠ್ ಯೋಗಿನಿ ದೇವಾಲಯ ಮಧ್ಯಪ್ರದೇಶದಲ್ಲಿ, ಇನ್ನೆರಡು ದೇವಾಲಯಗಳು ಒಡಿಶಾದಲ್ಲಿ ಇವೆ. ನಿರ್ಮಾಣದಲ್ಲಿ ಕೆಲವು ಸೀಮಿತ ವ್ಯತ್ಯಾಸಗಳಿವೆ.

 Temple inspired Parliament House : The chapel that inspired the design of the Parliament House

ಮಧ್ಯಪ್ರದೇಶದ ಜಬಲ್ಪುರದ ಬಳಿ 1 ಆಲಯವಿದೆ, ಗ್ವಾಲಿಯರ್ ಬಳಿ ಮೆರೆನಾದಲ್ಲಿ 1ಆಲಯವಿದೆ. ಒರಿಸ್ಸಾದಲ್ಲಿ ಹೀರಾಪುರ್ ನಲ್ಲಿ 1ಆಲಯವಿದೆ ಇಲ್ಲಿ ಸುತ್ತಲೂ 64 ಯೋಗಿನಿ ಯರನ್ನು ಪ್ರತಿಷ್ಠೆ ಮಾಡಲಾ ಗಿದೆ. ಈಗ 56 ಮಾತ್ರ ಉಳಿದಿವೆ. ಮಧ್ಯೆ ಶಿವಲಿಂಗವಿದೆ. ವಿಸ್ತಾರದಲ್ಲಿ ನಾಲ್ಕೂ ದೇಗಲಗಳಲ್ಲಿ ಚಿಕ್ಕದು.

 Temple inspired Parliament House : The chapel that inspired the design of the Parliament House

ಒರಿಸ್ಸಾದ ರಾಣೀಪುರ್ ನಲ್ಲಿ ಮತ್ತೊಂದು ಆಲಯ ವಿದೆ ಈ ದೇಗುಲ ದಲ್ಲಿ ಸುತ್ತಲೂ 64 ಯೋಗಿನಿಯರು ಮಧ್ಯೆ ನಾಲ್ಕು ಕಂಬಗಳ ಗುಡಿಯಲ್ಲಿ ನಟೇಶ್ವರನನ್ನು ಪ್ರತಿಷ್ಟಿಸಲಾಗಿದೆ. ಇಲ್ಲಿ ನಮಗೆ ಆಸಕ್ತಿಕರ ವಿಷಯ ವೆಂದರೆ ಮೆರೆನಾದಲ್ಲಿ ಇರುವ ಚೌಸಠ್ ಯೋಗಿನಿ ಆಲಯದಿಂದ ಪ್ರೇರಿತರಾಗಿ   ವಾಸ್ತುಶಿಲ್ಪಿ ಗಳಾದ ಎಡ್ವಿನ್ ಲುಟಿಯನ್ಸ್ ಹಾಗೂ ಸರ್ ಹರ್ಬರ್ಟ್ ಬೇಕರ್ ರವರು 1921ರಲ್ಲಿ ಪಾರ್ಲಿಮೆಂಟ್ ಭವನ ವನ್ನು ದೆಹಲಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಪ್ರಾರಂಭಿಸಿದರು ಅದು1927ರಲ್ಲಿ ಪೂರ್ಣಗೊಂಡಿತು. ಸ್ವಾತಂತ್ರ್ಯದ ನಂತರ ಅದನ್ನು ನಮ್ಮ ಸರ್ಕಾರ ವಶಪಡಿಸಿಕೊಂಡಿತು. ಬ್ರಿಟಿಷ್ ವಾಸ್ತುಶಿಲ್ಪಿಗಳಿಗೆ ಸ್ಪೂರ್ತಿ ನೀಡಿದ ಭಾರತದ ಪ್ರಾಚೀನ ವಾಸ್ತುಶಿಲ್ಪಿಗಳಿಗೆ ನಮೋ ನಮಃ.

ಇದನ್ನೂ ಓದಿ : Tirupati Govindaraja Temple : ಅಭಿಷೇಕವೇ ನಡೆಯದ ವಿಗ್ರಹ : ತಿರುಪತಿಯಲ್ಲಿದೆ ಅಪರೂಪದ ದೇಗುಲ

ಇದನ್ನೂ ಓದಿ : volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

( Temple inspired Parliament House : The chapel that inspired the design of the Parliament House )

Comments are closed.