Kiwi Fruit : ಈ ಸಮಸ್ಯೆ ಇರುವವರು ಕಿವಿ ಹಣ್ಣು ತಿನ್ನಲೇಬೇಡಿ

ಹಣ್ಣುಗಳು (Fruits) ಕಡಿಮೆ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸಿ, ನಿಶ್ಯಕ್ತಿ ನಿವಾರಿಸುತ್ತವೆ. ವೈರಲ್‌ ಜ್ವರ ಭಾದಿಸಿದಾಗ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಕಿವಿ ಹಣ್ಣು (Kiwi Fruit) ತಿನ್ನುವ ಸಲಹೆ ನೀಡುತ್ತಾರೆ. ಕಿವಿಯಲ್ಲಿರುವ ಗುಣಗಳು ಆರೋಗ್ಯಕ್ಕೆ ಪ್ರಯೋಜನವನ್ನು ನೀಡಬಲ್ಲದು. ಆಂಟಿ–ಇನ್ಫಮೆಟರಿ, ಆಂಟಿಒಕ್ಸಿಡೆಂಟ್‌, ಆಂಟಿ–ವೈರಲ್‌ ಗುಣಗಳು ಕಿವಿಯಲ್ಲಿದೆ. ಇದರ ಜೊತೆಗೆ ಅನೇಕ ವಿಟಮಿನ್‌, ಮಿನರಲ್‌ ಗಳನ್ನು ಹೊಂದಿದೆ. ವಿಟಮಿನ್‌ ಸಿ, ವಿಟಮಿನ್‌ ಬಿ6, ಫೈಬರ್‌, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌, ಬೀಟಾಕೆರಟಿನ್‌ ಗಳು ಭಾರಿ ಮಾತ್ರದಲ್ಲಿ ಇರುತ್ತದೆ.

ಕಿವಿ ಹಣ್ಣಿನಲ್ಲಿರುವ ಈ ಗುಣಗಳು ನಿಮ್ಮನ್ನು ಅನೇಕ ರೋಗಗಳಿಂದ ಕಾಪಾಡಬಲ್ಲದು. ಆದರೆ ನಿಮಗೆ ಗೊತ್ತೇ, ಅತಿಯಾಗಿ ಕಿವಿ ಹಣ್ಣನ್ನು ತಿನ್ನುವುದರಿಂದ ಆರೋಗ್ಯ ಹೆದಗೆಡುತ್ತದೆ. ಕೆಲವು ಆರೋಗ್ಯ ಸಂಬಂಧ ಸಮಸ್ಯೆ ಇರುವವರು ಕಿವಿ ಹಣ್ಣನ್ನು ತಿನ್ನುವ ಮೊದಲು ಯೋಚಿಸುವುದು ಉತ್ತಮ. ಏಕೆಂದರೆ ಅಂತಹವರ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಓರಲ್‌ ಅಲರ್ಜಿ ಸಿಂಡ್ರೋಮ್‌ :
ಕೆಲವರಲ್ಲಿ ಕಿವಿ ಹಣ್ಣನ್ನು ತಿನ್ನುವುದರಿಂದ ಓರಲ್‌ ಅಲರ್ಜಿ ಸಿಂಡ್ರೋಮ್‌ ಅಪಾಯ ಕಾಣಿಸುತ್ತದೆ. ಇದರಿಂದ ತುಟಿ ಮತ್ತು ನಾಲಿಗೆಯಲ್ಲಿ ಊತ ಸಂಭವಿಸುತ್ತದೆ. ಅಂತಹ ಪರಿಸ್ಥಿಯಲ್ಲಿ ತಕ್ಷಣ ವೈದ್ಯರನ್ನು ಸಂರ್ಪಕಿಸಿ ಮತ್ತು ಈ ಸಮಸ್ಯೆ ಇರುವವರು ಕಿವಿ ಹಣ್ಣನ್ನು ತಿನ್ನದೇ ಇರುವುದೇ ಒಳ್ಳೆಯದು.

ಅಲರ್ಜಿ:
ಕಿವಿ ಹಣ್ಣಿನಿಂದ ಕೆಲವು ಅಲರ್ಜಿ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ. ಚರ್ಮದ ಮೇಲೆ ದದ್ದು ಕಾಣಿಸುವುದು, ತುಟಿ ಮತ್ತು ಬಾಯಿಯೊಳಗೆ ಊತ ಮತ್ತು ಕಿರಿಕಿರಿ, ಅಸ್ತಮಾ ಮುಂತಾದ ಅಲರ್ಜಿ ಸಮಸ್ಯೆಗಳಿದ್ದರೆ ಈ ಹಣ್ಣಿನ ಸೇವನೆಯಿಂದ ಇವೆಲ್ಲವೂ ಹೆಚ್ಚಾಗುವ ಸಾಧ್ಯತೆ ಇದೆ.

ಡೈಯೇರಿಯಾ :
ಕಿವಿಯಲ್ಲಿ ಫೈಬರ್‌ ಅತ್ಯಧಿಕವಾಗಿ ಇರುತ್ತದೆ. ಇದರ ಕಾರಣದಿಂದ ಡೈಯೇರಿಯಾ ಸಮಸ್ಯೆ ಉಂಟಾಗುತ್ತದೆ. ಇದರಿಂದ ಕೆಲವರಲ್ಲಿ ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.

ಕಿಡ್ನಿ ಸಮಸ್ಯೆ :
ಕಿಡ್ನಿ ರೋಗಿಗಳಿಗೆ ಕಿವಿ ಹಣ್ಣಿನಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಏಕೆಂದರೆ, ಕಿವಿಯಲ್ಲಿ ಪೊಟ್ಯಾಸಿಯಮ್‌ ಅಧಿಕವಾಗಿದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ : Diet In Dengue : ಡೆಂಗ್ಯೂ ದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಈ ಆಹಾರ ಕ್ರಮಗಳು

ಇದನ್ನೂ ಓದಿ : Fruits For Digestion : ಜೀರ್ಣ ಶಕ್ತಿ ಹೆಚ್ಚಿಸುವ 5 ಅದ್ಭುತ ಹಣ್ಣುಗಳು

(Kiwi Fruit side effects on health, be careful before eating)

Comments are closed.