Maharashtra Lockdown : ಮಹಾರಾಷ್ಟ್ರದಲ್ಲಿ ಲಾಕ್ ಡೌನ್ : 11 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ

ಮುಂಬೈ: ಕೊರೊನಾ ಮೂರನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಮುಂದುವರಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಹಾಗೂ 14 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿ ಮಾಡಿದೆ. ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರ, ಪುಣೆ, ರತ್ನಗಿರಿ, ಸಿಂಧುದುರ್ಗ, ಸೊಲ್ಲಾಪುರ, ಅಹಮದ್ ನಗರ, ಬೀಡ್, ರಾಯಗಡ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿಸಲಾಗುತ್ತಿದೆ.

ಇನ್ನು ಮುಂಬೈ, ಮುಂಬೈ ಉಪನಗರ ಮತ್ತು ಥಾಣೆ ಜಿಲ್ಲೆಗಳ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸ್ತುತ ಪ್ರದೇಶಗಳಲ್ಲಿ ಇರುವ ನಿರ್ಬಂಧಗಳನ್ನು ನಿರ್ಧರಿಸುವ ವಿವೇಚನೆಯನ್ನು ಸರ್ಕಾರ ನೀಡಿದೆ. ಈ 14 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಪ್ರದೇಶಗಳು ನಾಳೆಯಿಂದ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಅಗತ್ಯ ಸೇವೆಯನ್ನು ಹೊರತು ಪಡಿಸಿ ಉಳಿದ ಅಂಗಡಿ ಸಂಜೆ 4 ರ ಬದಲಿಗೆ ರಾತ್ರಿ 8 ರವರೆಗೆ ತೆರೆದಿರುತ್ತವೆ.

ಮಾರ್ಗಸೂಚಿಯಲ್ಲೇನಿದೆ ?
ಕಚೇರಿ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಣೆಯನ್ನು ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇನ್ನು ಎಲ್ಲಾ ಸಾರ್ವಜನಿಕ ಉದ್ಯಾನಗಳು ಮತ್ತು ಆಟದ ಮೈದಾನ ಗಳನ್ನು ವ್ಯಾಯಾಮ, ವಾಕಿಂಗ್, ಜಾಗಿಂಗ್ ಮತ್ತು ಸೈಕ್ಲಿಂಗ್ ಉದ್ದೇಶಕ್ಕಾಗಿ ತೆರೆದಿಡಬಹುದು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು.

ಎಲ್ಲಾ ಅಗತ್ಯ ಮತ್ತು ಅನಿವಾರ್ಯವಲ್ಲದ ಅಂಗಡಿಗಳು (ಶಾಪಿಂಗ್ ಮಾಲ್‌ಗಳು ಸೇರಿದಂತೆ) ಎಲ್ಲಾ ವಾರದ ದಿನಗಳಲ್ಲಿ ರಾತ್ರಿ 8 ಗಂಟೆಯವರೆಗೆ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ತೆರೆದಿರುತ್ತವೆ. ಅಗತ್ಯ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ಮತ್ತು ಮಾಲ್‌ಗಳು ಭಾನುವಾರದಂದು ಮುಚ್ಚಲ್ಪಡುತ್ತವೆ. ಎಲ್ಲಾ ಕೃಷಿ ಚಟುವಟಿಕೆ ಗಳು, ನಾಗರಿಕ ಕೆಲಸಗಳು, ಕೈಗಾರಿಕಾ ಚಟುವಟಿಕೆಗಳು, ಸರಕುಗಳ ಸಾಗಣೆ ಸಂಪೂರ್ಣ ನಿರ್ವಹಿಸ ಬಹುದಾಗಿದೆ. ಜಿಮ್ನಾಶಿಯಂಗಳು, ಯೋಗ ಕೇಂದ್ರಗಳು, ಹೇರ್ ಕಟಿಂಗ್ ಸೆಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು, ಸ್ಪಾಗಳು ಹವಾನಿಯಂತ್ರಣ ಬಳಸದೆ ಮತ್ತು 50% ಸಾಮರ್ಥ್ಯದೊಂದಿಗೆ ವಾರದ ದಿನಗಳಲ್ಲಿ ರಾತ್ರಿ 8 ಗಂಟೆಯವರೆಗೆ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ತೆರೆದಿರುತ್ತವೆ.

ಎಲ್ಲಾ ಕೋವಿಡ್ -19 ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ವಾರದ ದಿನಗಳಲ್ಲಿ ಸಂಜೆ 4 ಗಂಟೆಯವರೆಗೆ ರೆಸ್ಟೋರೆಂಟ್‌ಗಳು 50% ಆಸನ ಸಾಮರ್ಥ್ಯದೊಂದಿಗೆ ತೆರೆದಿರುತ್ತವೆ. ಪಾರ್ಸೆಲ್ ಮತ್ತು ಟೇಕ್‌ಅವೇ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಮುಂದಿನ ಆದೇಶದವರೆಗೆ ಎಲ್ಲಾ ಚಿತ್ರಮಂದಿರಗಳು, ನಾಟಕ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು (ಸ್ವತಂತ್ರ ಮತ್ತು ಒಳಗಿನ ಮಾಲ್‌ಗಳು) ಮುಚ್ಚಲ್ಪಡುತ್ತವೆ. ಅಲ್ಲದೇ ಧಾರ್ಮಿಕ ಕೇಂದ್ರಗಳ ಮೇಲೆಯೂ ನಿರ್ಬಂಧವನ್ನು ಹೇರಲಾಗುತ್ತಿದೆ.

ಪ್ರಮುಖವಾಗಿ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ ಜನಸಂದಣಿಯನ್ನು ತಪ್ಪಿಸಲು, ಹುಟ್ಟುಹಬ್ಬದ ಆಚರಣೆಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು, ಚುನಾವಣೆ, ಚುನಾವಣಾ ಪ್ರಚಾರ, ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳನ್ನು ಮುಂದುವರಿಸಲು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೇ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ನೈಟ್‌ ಕರ್ಪ್ಯೂ ಜಾರಿ ಮಾಡಲಾಗಿದೆ.

Comments are closed.