Me Time : ಇದು ನನ್ನ ಸಮಯ! ಮಹಿಳೆಯರೇ ನೀವೂ ಒಂದು ಸಮಯ ನಿಗದಿ ಪಡಿಸಿಕೊಳ್ಳಿ

ಈಗಿನ ದಿನಗಳಲ್ಲಿ ಅಮ್ಮಂದಿರು ಎಂದರೆ ಮನೆ, ಆಫೀಸ್‌, ಮಕ್ಕಳು, ಕುಟುಂಬ ಮತ್ತು ಸಾಮಾಜಿಕ ಜೀವನ ಹೀಗೆ ಎಲ್ಲವನ್ನೂ ಸರಿದೂಗಿಸುವ 24X7 ಕೆಲಸ ಮಾಡುವ ‘ಸುಪರ್‌ ಬಿಸಿ ವುಮನ್‌’ ಎಂದರೆ ತಪ್ಪಾಗಲಾರದು. ಇವೆಲ್ಲ ಕೆಲಸಗಳನ್ನು ಮಾಡುವ ಅಮ್ಮಂದಿರು ತಮಗೆ ಬೇಕಾದ ಸಮಯವನ್ನು ಯಾವಾಗಲೂ ಹಿಂದಕ್ಕೆ ಸರಿಸಿಬಿಡುತ್ತಾರೆ. ಆದರೆ, ದಣಿವಾರಿಸಿಕೊಳ್ಳಲು ಈ ‘ನನ್ನ–ಸಮಯ(Me Time)’ ಎಂಬುದು ಅತೀ ಅವಶ್ಯಕ. ಮಾನಸಿಕ ಒತ್ತಡ ಮತ್ತು ಸ್ಟ್ರೆಸ್‌ ನಿಭಾಯಿಸಲು ಅಗತ್ಯವಿರುವ ಶಕ್ತಿ ಮತ್ತು ಚೈತನ್ಯವನ್ನು ಪುನಃ ಸ್ಥಾಪಿಸಲು ಅವರು ಕಷ್ಟಪಡುತ್ತಾರೆ. ಮಿದುಳಿಗೆ ವಿಶ್ರಾಂತಿ ನೀಡಲು ‘ನನ್ನ ಸಮಯ’ ಎನ್ನವುದು ಎಲ್ಲಾ ಅಮ್ಮಂದಿರಿಗೆ ಪ್ರತಿದಿನವೂ ಅಗತ್ಯವಾಗಿದೆ.

ಇದು ‘ನನ್ನ ಸಮಯ(Me Time)’ ಅನ್ನುವುದು ಅಮ್ಮಂದಿರಿಗೆ ತಾಳ್ಮೆ, ಮೂಡ್‌, ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಸಾಕಷ್ಟು ಇತರ ಪ್ರಯೋಜನಕಾರಿ ಪರಿಣಾಮಗಳನ್ನು ನೀಡುತ್ತದೆ. ಬಹಳಷ್ಟು ಕೆಲಸಗಳ ಮಧ್ಯೆಯೂ, ಸ್ವಲ್ಪ ಸಮಯ ತಮಗಾಗಿ ಮೀಸಲಿಡುವುದು ಮುಖ್ಯ. ಇದಕ್ಕೆ ಸ್ವಲ್ಪ ಯೋಜನೆಯ ಮತ್ತು ಪ್ರಯತ್ನದ ಅಗತ್ಯವಿದೆ. ನಿಮ್ಮ ಮನೆಯ ಇತರ ಸದಸ್ಯರುಗಳೊಂದಿಗೆ ನಿಮ್ಮ ಕಲಸವನ್ನು ಹಂಚಿಕೊಳ್ಳುವುದರ ಮೂಲಕ ’ನನ್ನ ಸಮಯ’ ನಿಗದಿ ಪಡಿಸಿಕೊಂಡು ರಿಲ್ಯಾಕ್ಸ್‌ ಆಗಬಹುದು. ನೀವು ರಿಲ್ಯಾಕ್ಸ್‌ ಆಗಲು ಹೀಗೆ ಮಾಡಿ.

ಇದನ್ನೂ ಓದಿ : Mango Rice: ಮಾವಿನಕಾಯಿ ಚಿತ್ರಾನ್ನ ಮಾಡುವುದು ಹೇಗೆ ಗೊತ್ತೇ? ಈ ಸೀಸನ್ನಲ್ಲಿ ನೀವೂ ಮಾಡಿ ನೋಡಿ

ಚಟುವಟಿಕೆಗಳನ್ನು ಮಾಡಿ:
ದಿನವನ್ನು ವಾಕ್‌, ಯೋಗ, ವ್ಯಾಯಾಮ, ಪ್ರಕೃತಿಯೊಂದಿಗೆ ನಡಿಗೆ ಇವುಗಳಲ್ಲಿ ಯಾವುದಾರೂ ಒಂದನ್ನು ಮಾಡಿ ಆರಂಭಿಸಿ. ಹೀಗೆ ಮಾಡುವುದರಿಂದ ದಿನಪೂರ್ತಿ ಕೆಲಸಮಾಡಲು ಮಾನಸಿಕವಾಗಿ ಸಿದ್ಧರಾಗುತ್ತೀರಿ. ಇದಕ್ಕೆ ಗಂಟೆಗಟ್ಟಲೆ ಮೀಸಲಿಡುವ ಅಗತ್ಯವಿಲ್ಲ, ಬರೀ 15 ರಿಂದ 20 ನಿಮಿಷ ಸಾಕು. ಇದು ಧನಾತ್ಮಕ ಬದಲಾವಣೆಗಳನ್ನು ತರುತ್ತದೆ.

ಸ್ವತಃ ಕಾಳಜಿ ಮಾಡಿಕೊಳ್ಳಿ:
ಮಕ್ಕಳು ಶಾಲೆಗೆ ಹೋದ ನಂತರ, ಸ್ವಲ್ಪ ಸಮಯ ಮಾಡಿಕೊಂಡು ಸ್ಪಾ, ಫೇಶಿಯಲ್‌, ಹೆಡ್‌ ಮಸಾಜ್‌ ಮಾಡಿ ಕೊಳ್ಳಿ. ಇದು ಖಂಡಿತವಾಗಿಯೂ ನಿಮ್ಮ ದೇಹ ಮತ್ತು ಮನಸ್ಸು ರಿಲ್ಯಾಕ್ಸ್‌ ಆಗುವಂತೆ ಮಾಡುತ್ತದೆ. ಒಂದು ವೇಳೆ ನಿಮ್ಮ ಮಗು ಚಿಕ್ಕದಾಗಿದ್ದರೆ, ಮಗು ಮಲಗಿದಾಗ ಇವೆಲ್ಲವುಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು.

ನಿಮ್ಮ ಹವ್ಯಾಸ ಮತ್ತು ಪ್ರತಿಭೆಗಳನ್ನು ಮುಂದುವರಿಸಿ:
ನಿಮಗೆ ಯಾವುದಾದರೂ ಹವ್ಯಾಸಗಳಿದ್ದರೆ ಅದನ್ನು ಮುಂದುವರಿಸಿ, ಇಲ್ಲವೇ ತರಗತಿಗಳಿಗೆ ಸೇರಿಕೊಳ್ಳಿ. ಆರ್ಟ್‌, ಸಂಗೀತ, ಹೊಲಿಗೆ ಅಥವಾ ಬೇಕರಿ ತಿನಿಸು ಮಾಡುವ ತರಗತಿಗಳು ಹೀಗೆ ನಿಮ್ಮ ಆಸಕ್ತಿಯ ವಿಷಯಗಳನ್ನು ಆರಿಸಿಕೊಳ್ಳಿ. ನಿಮಗೆ ಖುಷಿ ನೀಡುವ ಸ್ಥಳಗಳಿಗೆ ಭೇಟಿ ಕೊಡಿ. ಅಂದರೆ ಅದು ದೇವಸ್ಥಾನೇ ಇರಬಹುದು ಇಲ್ಲವೇ ಪಾರ್ಕ್‌ ಕೂಡಾ ಆಗಿರಬಹುದು.

ಅಪನಂಬಿಕೆ ಬಿಡಿ:
ನಿಮಗಾಗಿ ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳಿ. ಒಳ್ಳೆಯ ಪುಸ್ತಕಗಳನ್ನು ಓದಿ. ವಾರಾಂತ್ಯದಲ್ಲಿ ಸುತ್ತಾಡುವುದನ್ನು ಮಾಡಿ. ಮಕ್ಕಳನ್ನು ಅವರ ಅಜ್ಜ, ಅಜ್ಜಿಯ ಹತ್ತಿರ ಬಿಡಿ. ಮಕ್ಕಳಿಗೂ ಕುಟುಂಬದ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧಗಳ ಪರಿಚಯವಾಗುತ್ತದೆ. ಆ ಸಮಯವನ್ನು ನಿಮಗಾಗಿ ನಿಗದಿಪಡಿಸಿ.

ಸುಮ್ಮನೆ ಒಂದು ಜಾಗದಲ್ಲಿ ಕುಳಿತುಕೊಳ್ಳಿ:
ಸುಮ್ಮನೆ ಕುಳಿತು ಕನಸು ಕಾಣಿರಿ, ಇಲ್ಲವೇ ಧ್ಯಾನ ಮಾಡಿ. ಒಂದು ಕಪ್‌ ಹಬೆಯಾಡುವ ಕಾಫಿಯ ಜೊತೆ ಯಾವುದೇ ಅಡೆ ತಡೆಗಳಿಲ್ಲದೆ ಪ್ರಶಾಂತ ಸ್ಥಳದಲ್ಲಿ ಕುಳಿತುಕೊಳ್ಳಿ. ನಿಮ್ಮ ಶಾಲಾ, ಕಾಲೇಜು ದಿನಗಳ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕಿ.

ಇದನ್ನೂ ಓದಿ :Mental Health Self Care : ಮಾನಸಿಕ ಆರೋಗ್ಯ ಚೆನ್ನಾಗಿರಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಿ! ಇಲ್ಲಿವೆ ಸರಳ ಉಪಾಯಗಳು


(Me Time 5 simple ways for mothers to get relax)

Comments are closed.