ಸೌಂದರ್ಯ ವೃದ್ದಿಸುತ್ತೆ ಪಾಲಾಕ್ ಸೊಪ್ಪು !

ನಿತ್ಯದ ಅಡುಗೆಯಲ್ಲಿ ಸೊಪ್ಪು ತರಕಾರಿಗಳನ್ನು ಬಳಸುತ್ತೇವೆ. ರುಚಿ ರುಚಿಯಾಗಿರುತ್ತೆ ಅಂತಾ ಸೊಪ್ಪು ಪದಾರ್ಥದ ರೂಪದಲ್ಲಿ ಸೇವನೆ ಮಾಡುತ್ತೇವೆ. ಆದರೆ ಈ ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ. ಅದ್ರಲ್ಲೂ ಸೊಪ್ಪುಗಳ ರಾಜಾ ಅಂತಾನೇ ಕರೆಯಿಸಿಕೊಳ್ಳೋ ಪಾಲಾಕ್ ಸೊಪ್ಪು ಸೌಂದರ್ಯವನ್ನು ವೃದ್ದಿಸುತ್ತಂತೆ.

ದಿನನಿತ್ಯ ನಾವು ಸೇವನೆ ಮಾಡುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್ ಅಗ್ರಸ್ಥಾನವನ್ನು ಪಡೆದಿದೆ. ಮನುಷ್ಯನ ದೇಹದಲ್ಲಿ ಉಂಟಾಗುವ ನಾನಾ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ಪಾಲಾಕ್ ಸೊಪ್ಪು ಹೊಂದಿದೆ. ಪಾಲಾಕ್ ನಲ್ಲಿರುವ ಆರೋಗ್ಯಕರ ಅಂಶಗಳು ಮನುಷ್ಯನ ವೃದ್ಧಾಪ್ಯ ವನ್ನು ತಡೆಗಟ್ಟುತ್ತದೆ.

ಪಾಲಾಕ್ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ನಾರಿನಾಂಶ, ಪ್ರೋಟೀನ್ ಇದ್ದು, ಮನುಷ್ಯನ ದೇಹಕ್ಕೆ ಬಹುಮುಖ್ಯವಾದ ಕಬ್ಬಿಣಾಂಶವನ್ನು ಪಾಲಕ್ ಒದಗಿಸುತ್ತದೆ. ಪಾಲಾಕ್ ಸೊಪ್ಪಿನ ಪದಾರ್ಥಗಳನ್ನು ವಾರಕ್ಕೆ 3 ಬಾರಿ ಸೇವನೆ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಕೇವಲ ಆರೋಗ್ಯ ವಷ್ಟೇ ಅಲ್ಲದೆ, ಸೌಂದರ್ಯವನ್ನೂ ಇದು ವೃದ್ಧಿಸುತ್ತದೆ.

ಪಾಲಾಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ. ಮಾತ್ರವಲ್ಲದೇ ಕೂದಲ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಕೆಂಪು ರಕ್ತಕಣಗಳ ಶಕ್ತಿ ವೃದ್ಧಿಸಿ, ಪ್ರತೀ ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಕಾರಿಯಾಗಿದೆ. ಇದರಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು.

ಈ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳವಾಗಿದ್ದು, ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿಯಿಂದ ಹೊಸ ಜೀವಕೋಶಗಳು ಹುಟ್ಟುತ್ತವೆ. ಮುಖದ ಮೇಲಿನ ಕಪ್ಪುಕಲೆಗಳನ್ನೂ ಇದು ಮಾಯವಾಗಿಸುತ್ತದೆ. ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ.

ಸಾರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅನಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ.

ಅತಿ ನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಹಾಗೂ ವೃದ್ಧಾಪ್ಯ ಬರದಂತೆ ತಡೆಯುತ್ತದೆ. ಪಾಲಕ್ ಸೊಪ್ಪು ಹಲವು ಕಾಯಿಲೆ ಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸೊಪ್ಪಿನಲ್ಲಿ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನೂ ದೂರಾಗಿಸುತ್ತದೆ.

Comments are closed.