Sneezing Tips : ಮಳೆಗಾಲದ ಸೀನು : ಈ ಮನೆ ಮದ್ದು ರಾಮಬಾಣ

ಮಳೆಗಾಲ ಬಂತು ಅಂದ್ರೆ ಸಾಕು, ಸೀನು, ಕೆಮ್ಮು, ನೆಗಡಿ ಹೀಗೆ ಒಂದರ ಹಿಂದೆ ಒಂದು ರೋಗಗಳು ಬರುತ್ತೆ. ಇದೆಲ್ಲವು ಮಳೆಗಾಲದಲ್ಲಿ ಸಾಮಾನ್ಯ. ಆದರೆ ಈ ಕೊರೊನ ಸಮಯದಲ್ಲಿ ಯಾವುದನ್ನು ನಿರ್ಲಕ್ಷ ಮಾಡುವಂತಿಲ್ಲ. ಯಾವುದೇ ರೋಗಕ್ಕೂ ಪ್ರಾರಂಭದಲ್ಲೆ ಔಷಧಿ ತೆಗೆದುಕೊಳ್ಳುವುದು ಉತ್ತಮ.

ಮೊದಲು ನಾವು ಸೇವಿಸುವ ಆಹಾರವು ಬಹಳ ಮುಖ್ಯವಾಗುತ್ತಾದೆ. ನಾವು ತಿನ್ನುವ ಪದಾರ್ಥದಿಂದಲೇ ಸೀನು ಹೆಚ್ಚಾಗುವ ಸಾಧ್ಯತೆಯು ಇದೆ. ಆದ್ದರಿಂದ ಹೆಚ್ಚು ವಿಟಮಿನ್ ಸಿ ಭರಿತ ಆಹಾರವನ್ನು ಸೇವಿಸ ಬೇಕು. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಿಟಮಿನ್ ಸಿ ಕೆಲವು ಹಣ್ಣು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಪೇರಳೆ, ಪಾಲಕ್, ಕಿವಿ, ಕಿತ್ತಾಳೆ, ಹಾಗೂ ನಿಂಬೆ ಹಣ್ಣಿನಲ್ಲಿ ಹೇರಳವಾಗಿ ಇರುತ್ತದೆ. ಇದನ್ನು ಸೇವನೆ ಇಲ್ಲದೇ ಇರುವುದರಿಂದ ಸೀನಿನ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.

ಇದನ್ನೂ ಓದಿ : ನಿಮಗೆ ಲಟಿಕೆ ತೆಗೆಯೋ ಅಭ್ಯಾಸವಿದ್ರೆ ..? ಹಾಗಾದ್ರೆ ಇಂದೇ ಬಿಟ್ಟು ಬಿಡಿ !

ಜಿಂಕ್ ಅನ್ನು ಸೇವಿಸಬೇಕು. ಹೌದು ಸತುವಿನ ಸೇವನೆಯಿಂದ ಕೂಡ ಸೀನನ್ನು ಕಡಿಮೆ ಮಾಡಬಹುದು. ಸತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಿಂಕ್ ಸುಲಭವಾಗಿ ದ್ವಿದಳ ಧಾನ್ಯಗಳಲ್ಲಿ ಹಾಗೂ ಬೀಜಗಳು ಮತ್ತು ಮಾಂಸಹಾರದಲ್ಲಿ ಸಿಗುತ್ತದೆ.

ಶುಂಠಿ ಮತ್ತು ತುಳಸಿ ಯನ್ನು ಸೇವಿಸುವುದರಿಂದ ಸೀನಿನ ವಿರುದ್ಧ ಹೋರಾಟ ಮಾಡಬಹುದು. ನೀವು ದಿನ ಸೇವಿಸುವ ಟೀ ಜೊತೆ ಶುಂಠಿ ಮತ್ತು ತಳಸಿಯನ್ನು ಸೇರಿಸಿ ಕುದಿಸಿ ಕುಡಿಯು ವುದರಿಂದ ಕೂಡ ಸೀನಿನ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಇದೋಂದು ಸುಲಭವಾದ ಮಾರ್ಗವಾಗಿದೆ.

ನೆಲ್ಲಿಕಾಯಿ ಸೇವನೆಯಿಂದ ಕೂಡ ಸೀನಿಗೆ ಸಂಬಂಧ ಪಟ್ಟ ಬ್ಯಾಕ್ಟೀರಿಯಾವನ್ನು ತಡೆಗಟ್ಟ ಬಹುದು. ದಿನಕ್ಕೆ 3 ರಿಂದ 4 ನೆಲ್ಲಕಾಯಿಯನ್ನು ತಿನ್ನುವುದರಿಂದ ಸೀನು ಕಡಿಮೆ ಯಾಗುತ್ತದೆ. ಅಲ್ಲದೇ ನೆಲ್ಲಿಕಾಯಿಯ ಜ್ಯೂಸ್ ಅನ್ನು ದಿನಕ್ಕೆ 2 ಭಾರಿ ಕುಡಿಯುವುದರಿಂದ ಸೀನು ನಿಲ್ಲುತ್ತದೆ.

ಕಪ್ಪು ಏಲಕ್ಕಿಯಿಂದ ಕೂಡ ಸೀನನ್ನು ನೀವಾರಿಸಿಕೊಳ್ಳಬಹುದು. ಕಪ್ಪು ಏಲಕ್ಕಿಯನ್ನು ದಿನದಲ್ಲಿ 2 ರಿಂದ 3 ಭಾರಿ ಅಗಿದು ತಿನ್ನುವುದರಿಂದ ಸೀನು ಕಡಿಮೆಯಾಗಿ ಇದರ ಪರಿಮಳಕ್ಕೆ ಕಟ್ಟಿದ ಮೂಗು ಸಡಿಲವಾಗುತ್ತದೆ. ಅಲ್ಲದೆ ಉಸಿರಾಡಲು ನಿರಾಯಾಸವಾಗುತ್ತದೆ.

ಇದನ್ನೂ ಓದಿ : Snoring Tips : ಈ ಟಿಪ್ಸ್ ಫಾಲೋ ಮಾಡಿ.. ಗೊರಕೆ ನಿಮ್ಮತ್ತ ಸುಳಿಯೋದೇ ಇಲ್ಲ..!

ಸೊಂಪು ಬೀಜವು ಜೀರ್ಣಕ್ರಿಯೆಯಲ್ಲಿ ಮಾತ್ರವಲ್ಲದೇ ಸೀನುವಿಕೆಯನ್ನು ತಡೆಯುವ ಗುಣ ಇದರಲ್ಲಿದೆ. ಸೊಂಪು ಬೀಜವನ್ನು ಮಿತವಾಗಿ ತಿನ್ನುವುದರಿಂದ ಸೀನು ಕಡಿಮೆಯಾಗುತ್ತದೆ.

Comments are closed.