Red Eyes : ಕಣ್ಣು ಕೆಂಪಾಗಿ ನೋವಾಗುತ್ತಿದೆಯೇ; ಅದಕ್ಕೆ ಈ 5 ಕಾರಣಗಳಿರಬಹುದು; ಎಚ್ಚರ

ಇತ್ತಿಚಿನ ದಿನಗಳಲ್ಲಿ ಮಾಲಿನ್ಯದಿಂದ ಕಣ್ಣಿ (Eye) ನ ಆರೈಕೆ ಮಾಡುವುದು ಅಗತ್ಯವಾಗಿದೆ. ಧೂಳು, ಅಲರ್ಜಿಗಳು ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ. ಕಣ್ಣುಗಳನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಎಂದಾದರೂ ಬೆಳಿಗ್ಗೆ ಏಳುವಾಗ ನಿಮ್ಮ ಕಣ್ಣುಗಳು ಕೆಂಪಾಗಿರುವುದು (Red Eyes) ಅನುಭವಕ್ಕೆ ಬಂದಿದೆಯೇ? ಅಥವಾ ಕಣ್ಣುಗಳನ್ನು ಪದೇಪದೇ ಉಜ್ಜುವುದರಿಂದ ಕೆಂಪಾಗುತ್ತಿವೆಯೇ? ನಿದ್ರೆಯ ಕೊರತೆ ಮತ್ತು ಅತಿಯಾದ ಬಳಲಿಕೆಯಿಂದಲೂ ಹೀಗೆ ಆಗಬಹುದು. ಆದರೆ ಕೆಲವೊಮ್ಮೆ ಸೋಂಕುಗಳಿಂದಲೂ ಹೀಗೆ ಆಗುತ್ತದೆ. ಕಣ್ಣುಗಳಲ್ಲಿ ಕೆಂಪಾಗುವಿಕೆ, ಕಣ್ಣುಗಳ ಉರಿಯೂತ, ಹಳದಿ ಮಿಶ್ರಿತ ನೀರು ಕಣ್ಣಿನಿಂದ ಹೊರಬರುವುದು ಈ ರೀತಿಯ ಲಕ್ಷಣಗಳು ಕಣ್ಣಿಗೆ ಸೋಂಕು (Infection) ತಗಲಿದೆ ಎಂಬುದನ್ನು ಹೇಳುತ್ತಿರಬಹುದು.

ಕಾಂಜಂಕ್ಟಿವಿಟಿಸ್‌ ಅನ್ನು ಹೊರತುಪಡಿಸಿ, ಕಣ್ಣುಗಳು ಕೆಂಪಾಗುವುದು ಮತ್ತು ನೋಯುವುದಕ್ಕೆ ಈ ಕೆಳಗಿನ ಕಾರಣಗಳು ಇರಬಹುದು. ಅಂತಹ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.ಸೋಂಕು : ಕೆಲವೊಮ್ಮೆ ಬ್ಯಾಕ್ಟೀರಿಯಾದಿಂದ ಕಣ್ಣುಗಳ ಉರಿಯೂತ ಮತ್ತು ಸೋಂಕುಗಳಾಗುತ್ತದೆ. ಹಳದಿ ಮಿಶ್ರಿತ ನೀರು ಕಣ್ಣಿನಿಂದ ಬರಲು ಈ ಸೋಂಕುಗಳೇ ಕಾರಣ. ಈ ರೀತಿಯ ತೊಂದರೆಗಳು ಕಂಡು ಬಂದರೆ ಸರಿಯಾದ ಚಿಕಿತ್ಸೆಯ ಅಗತ್ಯವಿರುತ್ತದೆ. ಅದಕ್ಕೆ ಉತ್ತಮ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಇದನ್ನೂ ಓದಿ :Turmeric Health Benefits: ಅರಿಶಿನದ ಆರೋಗ್ಯ ಗುಣಗಳೇನು ಗೊತ್ತಾ! ಮನೆಯಲ್ಲೇ ಮಾಡಬಹುದು ಅರಿಶಿನದ ಫೇಸ್ ಪ್ಯಾಕ್

ಕೋವಿಡ್‌–19 : ಇದು ಶ್ವಾಸಕೋಶ ಮತ್ತು ಅದರ ಸುತ್ತಲಿನ ಪ್ರದೇಶದ ಸೋಂಕಾಗಿದ್ದರೂ ಹೃದಯ ಮತ್ತು ಕಣ್ಣುಗಳ ಮೇಲೂ ಪ್ರಭಾವ ಬೀರುತ್ತದೆ.
ವೈದ್ಯರ ಪ್ರಕಾರ ಕೆಂಪು ಕಣ್ಣು ()ಕೋವಿಡ್‌ನ ಲಕ್ಷಣವಾಗಿರಬಹುದು ಅಥವಾ ಅಡ್ಡ ಪರಿಣಾವೂ ಆಗಿರಬಹುದು. ಕಣ್ಣುಗಳ ಮೂಲಕ ವೈರಸ್‌ ದೇಹ ಪ್ರವೇಶಿಸಿದಾಗ ಇದು ಸಂಭವಿಸಬಹುದು ಎಂಬುದು ವೈದ್ಯರ ಅಭಿಪ್ರಾಯ.

ಅಲರ್ಜಿ : ಜ್ವರ ಅಥವಾ ಪರಾಗದಿಂದ ಆಗುವ ಅಲರ್ಜಿಗಳು ಸಹ ಕೆಂಪು ಕಣ್ಣುಗಳಿಗೆ ಕಾರಣವಾಗಬಹುದು. ಇದಲ್ಲದೆ, ಧೂಳಿನ ಕಣಗಳು ಅಥವಾ ಪ್ರಾಣಿಗಳ ಕೂದಲುಗಳು ಕಣ್ಣಿನೊಳಗೆ ಪ್ರವೇಶಿಸಿದರೆ, ಆಗ ಈ ರೀತಿಯ ಅಲರ್ಜಿ ಸಂಭವಿಸಬಹುದು.

ಬ್ಲೆಫರಿಟಿಸ್‌ : ಇದು ಬ್ಯಾಕ್ಟೀರಿಯಾದಿಂದ ಕಣ್ಣಿನ ರೆಪ್ಪೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಸೋಂಕು. ಈ ಬ್ಯಾಕ್ಟೀರಿಯಾಗಳು ಕಣ್ಣು ರೆಪ್ಪೆಯ ಬುಡ ಉರಿಯುವಂತೆ ಮಾಡುತ್ತದೆ. ಇದರಿಂದ ಕಣ್ಣುಗಳು ಕೆಂಪಾಗುತ್ತವೆ. ಇದಕ್ಕೆ ಕಾರಣ ಹೆಚ್ಚಾಗಿ ಸುರಕ್ಷಿತವಲ್ಲದ ಮತ್ತು ಅವಧಿ ಮೀರಿದ ಸೌಂದರ್ಯವರ್ಧಕಗಳ ಬಳಕೆ.

ಕಾಂಟ್ಯಾಕ್ಟ್‌ ಲೆನ್ಸ್‌ : ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸುವವರು ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ಗಮನಹರಿಸದೇ ಇದ್ದಾಗಲೂ ಸಹ ಕೆಂಪು ಕಣ್ಣುಗಳು ಸಂಭವಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಅನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮತ್ತು ಅದನ್ನು ತೆಗೆದನಂತರ ಅದರ ಕೇಸ್‌ನಲ್ಲಿಯೇ ಇಡುವುದು ಅತಿ ಅವಶ್ಯಕ. ರಾತ್ರಿ ಮಲಗುವಾಗ ಅಥವಾ ಸ್ನಾನ ಮಾಡುವಾಗ ಅದನ್ನು ಧರಿಸಿಯೇ ಇರುವುದರಿಂದಲೂ ಕಣ್ಣಿನ ಸೋಂಕು ತಗಲಬಹುದು. ಇದರಿಂದ ಕಣ್ಣುಗಳ ನೋವು, ಕೆಂಪಾಗುವುದು ಮತ್ತು ವಿಪರೀತ ಸಂದರ್ಭಗಳಲ್ಲಿ ಕುರುಡುತನವು ಸಂಭವಿಸಬಹುದು.

ಇದನ್ನೂ ಓದಿ : Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

(Red Eyes 5 reasons for sore eyes. Do you know what they are?)

Comments are closed.