ಅಂದಕ್ಕೂ… ಆರೋಗ್ಯಕ್ಕೂ ಅರಶಿನ…

0
  • ರಕ್ಷಾ ಬಡಾಮನೆ

ನಮ್ಮ ಸಂಸ್ಕೃತಿ ಅರಶಿನ ಬಣ್ಣವನ್ನು ಶುಭ ಸೂಚಕ ಎನ್ನುತ್ತದೆ. ಹಳದಿ ಬಣ್ಣವೆಂದಾಗ ನೆನಪಿಗೆ ಬರುವುದು ಅರಶಿನ. ಆಯುರ್ವೇದ ವೈದ್ಯ ಪದ್ದತಿಯಲ್ಲಿಯೂ ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ. ಮಾನವನ ಹುಟ್ಟಿನಿಂದ ಸಾಯುವ ತನಕ ಈ ಅರಶಿನದ ಬಳಕೆಯನ್ನು ಕಾಣಬಹುದು.

ಅರಶಿನವು ಒಂದು ಶುಂಠಿ ಜಾತಿಯ ಸಸ್ಯ. ಇದು ಬೆಳೆಯಲು ಯಾವಾಗಲೂ ತೇವಾಂಶ ಹೆಚ್ಚಿರುವ ಪ್ರದೇಶಗಳು ಬೇಕಾಗುತ್ತದೆ. ಆಹಾರ ಪದಾರ್ಥಗಳಲ್ಲಿ ಬಣ್ಣ ಮತ್ತು ಪರಿಮಳ ಬರಿಸಲು ಅರಶಿನವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅರಶಿನ ಸಾಮಾನ್ಯವಾಗಿ ಕರ್ಕ್ಯೂಮಿನ್, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಫಂಗಲ್ ಗುಣಗಳನ್ನು ಒಳಗೊಂಡಿದೆ.

‌ಇತ್ತೀಚಿನ ಸಂಶೋಧನೆಗಳ ಪ್ರಕಾರ ಅರಶಿನದಲ್ಲಿರುವ ಕರ್ಕ್ಯೂಮಿನ್ ಅಂಶ ಮನುಷ್ಯನ ಮಾನಸಿಕ ಖಿನ್ನತೆ, ನಿದ್ರಾ ಹೀನತೆಯನ್ನು ಗುಣಪಡಿಸಲು ಸಹಕಾರಿಯಾಗುತ್ತದೆ.

ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಶಕ್ತಿಯನ್ನು ಅರಶಿನ ಹೊಂದಿರುವುದರಿಂದ ನಿತ್ಯದ ಬಳಕೆಯಲ್ಲಿ ಹೆಚ್ಚು ಹೆಚ್ಚಾಗಿ ಅರಶಿನ ಬಳಕೆ ಮಾಡುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದಲೂ ಮುಕ್ತರಾಗಬಹುದಾಗಿದೆ.

ದಿನ ಬಳಕೆಯ ಆಹಾರದೊಂದಿಗೆ ಅರಶಿನ ಬಳಸುವುದರಿಂದ ಆರ್ಥ್ರೈಟಿಸ್ ಸಮಸ್ಯೆಗಳು ಪರಿಹಾರವಾಗುತ್ತವೆ.‌ ದಿನದಲ್ಲಿ ಮೂರು ಹೊತ್ತು ಅರಶಿನವನ್ನು 8 ದಿನಗಳ ಕಾಲ ತಿನ್ನುವುದರಿಂದ ತುರಿಕೆ ಸಮಸ್ಯೆಯಿಂದ ಗುಣಮುಖರಾಗಬಹುದು. ‌

ರೇಖಿಯ ಚಿಕಿತ್ಸೆಯ ಮೂಲಕ ಚರ್ಮ ಸಮಸ್ಯೆ ಕಂಡುಬಂದಲ್ಲಿ ಅರಶಿನ ಹೆಚ್ಚಿಗೆ ಸೇವಿಸಿದರೆ ಚರ್ಮ ಸಮಸ್ಯೆಯೂ ಪರಿಹಾರವಾಗುತ್ತದೆ.

‌ಜಠರದ ಹುಣ್ಣುಗಳು ಅರಶಿನ ಸೇವನೆ ರಾಮಬಾಣದಂತೆ ಕೆಲಸ ಮಾಡುತ್ತದೆ. ‌ಅಸ್ತಮಾ ರೋಗಿಗಳು ಅರಶಿನ ಸೇವನೆಯಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತದೆ.

‌ಅರಶಿನ ಸೇವಿಸುದರಿಂದ ಹಿಮೋಗ್ಲೋಬಿನ್ ಅಂಶ ರಕ್ತದಲ್ಲಿ ಹೆಚ್ಚಳವಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಅರಶಿನದಲ್ಲಿರುವ ಕರ್ಕ್ಯೂಮಿನ್ ಅಂಶವು ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿಯಾಗಿದೆ. ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ಚಿಕಿತ್ಸೆ ನೀಡಲು ತುಂಬಾ ಸಹಕಾರಿ.

‌ಹಲವು ರೀತಿಯ ಕರುಳಿನ ಖಾಯಿಲೆಗೆ ಅರಶಿನವು ಮದ್ದಾಗಿದೆ. ‌ಅರಶಿನ ಸೇವನೆಯು ಮಧುಮೇಹಿಗಳಿಗೂ ಹೆಚ್ಚು ಉಪಯುಕ್ತ.

‌ಅಜೀರ್ಣ ಸಮಸ್ಯೆ ಗಳು ಕೂಡ ಅರಶಿನ ಸೇವನೆಯಿಂದ ಗುಣಪಡಿಸಬಹುದು. ‌ಅರಶಿನ ಸೇವನೆಯಿಂದ ಜೀರ್ಣಾಂಗವ್ಯೂಹವೂ ಆರೋಗ್ಯವಾಗಿರುವಂತೆ ಕಾಪಾಡುತ್ತದೆ.

‌ಗಂಟು ನೋವುಗಳು ಅರಶಿನ ಸೇವನೆಯಿಂದ ಗುಣವಾಗುತ್ತದೆ ‌ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡ ಅರಶಿನ ಸಹಕಾರಿಯಾಗಿದೆ.

‌ಶೀತ ಗಂಟಲು ನೋವು ಕಾಣಿಸಿ ಕೊಂಡರೆ ಹಾಲಿಗೆ ಅರಶಿನ ಬೆರಸಿ ಕುದಿಯುದರಿಂದ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.‌ ಜಾಂಡೀಸ್ ಚಿತ್ಸೆಯಲ್ಲೂ ಅರಶಿನದ ಪಾತ್ರ ಬಹಳ ಮಹತ್ವದ್ದು.

ಅರಶಿನವನ್ನು ಸೌಂದರ್ಯವರ್ಧಕವಾಗಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಮುಖದಲ್ಲಿನ ಮೊಡವೆ ಕಲೆಗಳು ನಿವಾರಣೆಗೆ ಅರಶಿನ ಅತ್ಯುತ್ತಮ ಮನೆಮದ್ದಾಗಿದೆ.

Leave A Reply

Your email address will not be published.