World Health Day 2022 :ವಿಶ್ವ ಆರೋಗ್ಯ ದಿನ 2022 : ಉತ್ತಮ ಆರೋಗ್ಯ ಬೇಕೆ? ಹಾಗಾದರೆ ಈ ಆಹಾರಗಳಿಂದ ದೂರವಿರಿ

ಇಂದು ವಿಶ್ವ ಆರೋಗ್ಯ ದಿನ 2022 (World Health Day 2022). ಉತ್ತಮ ಆರೋಗ್ಯದ ಮಾತು ಬಂದಾಗ ಜೀನ್ಸ್‌ ಮತ್ತು ಹೊಸ ಹೊಸ ವೈರಸ್‌ಗಳನ್ನಂತೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಾವು ತಡೆಯಬಹುದಾದ್ದು ಏನೆಂದರೆ ನಾವು ಸೇವಿಸುವ ಆಹಾರಗಳನ್ನು. ಪ್ರತಿ ವರ್ಷ ಏಪ್ರಿಲ್‌ 7 ಅನ್ನು ವಿಶ್ವ ಆರೋಗ್ಯ ದಿನ 2022 (World Health Day 2022 ) ಎಂದು ಆಚರಿಸುತ್ತೇವೆ. 1948 ರಲ್ಲಿ ವರ್ಲ್ಡ್‌ ಹೆಲ್ತ ಆರ್ಗನೈಸೇಷನ್‌ ಸ್ಥಾಪಿತವಾಯಿತು. ಇದು ಕಾಲ ಕಾಲಕ್ಕೆ ಆರೋಗ್ಯ ಸಂಬಂಧಿ ಎಚ್ಚರಿಕೆಗಳನ್ನು ನೀಡುತ್ತಲೇ ಬಂದಿದೆ. ನಮ್ಮ ಆರೋಗ್ಯವನ್ನು ಹದಗೆಡಿಸುವ ಆಹಾರಗಳಿಂದ ದೂರವಿರೋಣ.

ಈ ಆಹಾರಗಳಿಂದ ಆದಷ್ಟು ದೂರವಿರಿ

  • ಬೆಕಾನ್‌ :
    ರುಚಿಯಾಗಿಯೇನೋ ಇರುತ್ತದೆ. ಆದರೆ ಇದರಲ್ಲಿ ಎರಡು ರೀತಿಯ ಪ್ರಿಸರ್ವೇಟೀವ್ಸ್‌ಗಳು ಇರುತ್ತವೆ. ನೈಟ್ರೇಟ್ಸ್‌ ಮತ್ತು ನೈಟ್ರಿಟ್ಸ್‌. ಇದು ಕೊಲೊನ್‌ ಮತ್ತು ಸ್ಟಮಕ್‌ ಕ್ಯಾನ್ಸರ್‌ ನ ಅಪಾಯ ಹೆಚ್ಚಿಸುತ್ತದೆ. ಇದರಲ್ಲಿ ಉಪ್ಪಿನಾಂಶವೂ ಅಧಿಕವಾಗಿರುತ್ತದೆ.
  • ಸಕ್ಕರೆ ಅಧಿಕವಿರುವ ಪಾನೀಯಗಳು :
    ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ಹೇಳುವ ಪ್ರಕಾರ ಒಂದು ದಿನಕ್ಕೆ ಮಹಿಳೆಯರು 25 ಗ್ರಾಂಗಿಂತ ಕಡಿಮೆ ಮತ್ತು ಪುರಷರು 36 ಗ್ರಾಂಗಿಂತ ಕಡಿಮೆ ಸಕ್ಕರೆ ಸೇವಿಸಬೇಕು ಎಂದು ಹೇಳಿದೆ. ಒಂದು ಸೋಡಾ ಪ್ಯಾಕ್‌ 39 ಗ್ರಾಂ ಗಳಷ್ಟು ಸಕ್ಕರೆ ಹೊಂದಿರುತ್ತದೆ . ಈ ಸ್ವೀಟನರ್‌ಗಳು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಅದರಿಂದ ಟೈಪ್‌–2 ಡಯಾಬಿಟೀಸ್‌ ಸಂಭವ ಹೆಚ್ಚಾಗುತ್ತದೆ.
  • ಪೋಟಾಟೋ ಚಿಪ್ಸ್‌ :
    ಒಂದು ಲೇಸ್‌ ಪ್ಯಾಕೆಟ್‌ನಲ್ಲಿ 240 ಗ್ರಾಂ ಕ್ಯಾಲೋರಿ ಮತ್ತು ಅತೀ ಹೆಚ್ಚಿನ ಸೋಡಿಯಂ ಮತ್ತು ಉಪ್ಪು ಇದೆ. ಇದನ್ನು ಮಾಡುವ ವಿಧಾನದಿಂದ ನ್ಯೂರೋಟಾಕ್ಸಿನ್‌ ಮತ್ತು ಕಾರ್ಸಿನೋಜಿನ್‌ಗಳು ಸೇರಿರುತ್ತವೆ. ಇದನ್ನೂ ಬಹಳ ದಿನಗಳವರೆಗೆ ನಿರಂತರವಾಗಿ ಸೇವಿಸುವುದರಿಂದ ಬೊಜ್ಜು, ನಿದ್ರಾ ಹೀನತೆ, ಒಣಗಿದ ಚರ್ಮ, ಕಡ್ನಿ ತೊಂದರೆ, ತಲೆನೋವು ಮತ್ತು ಉರಿಯೂತಗಳಂತಹ ಸಮಸ್ಯೆಗಳು ಕಾಣಿಸಬಹುದು.

    ಇದನ್ನೂ ಓದಿ : Ginger Health Benefits: ಹಸಿ ಶುಂಠಿಯಷ್ಟೇ ಅಲ್ಲಾ, ಒಣ ಶುಂಠಿಯೂ ಉಪಕಾರಿ; ಹಸಿ ಹಾಗೂ ಒಣ ಶುಂಠಿಯ ಪ್ರಯೋಜನಗಳೇನು ಗೊತ್ತಾ!
  • ಭಾರತದ ಕರಿದ ತಿಂಡಿಗಳು:
    ಸಮೋಸಾ, ವಡಾ ಛೋಲೆ ಭಟುರೆ, ನಮ್ಕೀನ್‌ ಭುಜಿಯಾ ಮತ್ತು ಬಜ್ಜಿ ಇವೆಲ್ಲವುಗಳು ನಾಲಿಗೆಗೆ ಅತ್ಯಂತ ರುಚಿಯಾಗಿರುತ್ತದೆ. ಆದರೆ ಒಂದು ಸಮೋಸಾ 25 ಗ್ರಾಂ ನಷ್ಟು ಫ್ಯಾಟ್‌ ಹೊಂದಿರುತ್ತದೆ. ಇನ್ನು ಭುಜಿಯಾಗಳಲ್ಲಂತೂ ಕೆಮಿಕಲ್‌ ಪ್ರಿಸರ್ವೇಟೀವ್ಸ್‌ಗಳು ಇರುತ್ತವೆ. ಇವೆಲ್ಲವುಗಳ ಪರಿಣಾಮ ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕವಾಗುವುದು ಮತ್ತು ಬ್ಲಡ್‌ ಪ್ರೆಶರ್‌ ಹೆಚ್ಚಿಸುವುದು.
  • ವೈಟ್‌ ಬ್ರೆಡ್‌ಗಳು :
    ಇವುಗಳು ಅಧಿಕ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ವೈಟ್‌ ಬ್ರೆಡ್‌ಗೆ ಉಪಯೋಗಿಸುವ ಹಿಟ್ಟನ್ನು ಕೆಮಿಕಲ್‌ಗಳಾದ ಪೋಟ್ಯಾಸಿಯಂ ಬ್ರೋಮಾಟ್‌, ಕ್ಲೋರಿನ್‌ ಡೈಆಕ್ಸೈಡ್‌ ಗ್ಯಾಸ್‌ ನಿಂದ ಬ್ಲೀಚ್‌ ಮಾಡಿರುತ್ತಾರೆ. ಇದು ಅನಾರೋಗ್ಯಕ್ಕೆ ದಾರಿ ಮಾಡಿದಂತೆ. ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಡಯಾಬಿಟಿಸ್‌ ಗಳು ಇದರಿಂದ ಬರುತ್ತವೆ.
  • ಫ್ರೆಂಚ್‌ ಫ್ರೈಸ್‌ :
    ಫ್ರೆಂಚ್‌ ಫ್ರೈಗಳು ಬರೀ ಅನಾರೋಗ್ಯಕರವಷ್ಟೇ ಅಲ್ಲ ಜೀವಕ್ಕೆ ಹಾನಿಕಾರಕ. ಇದು ನೇರವಾಗಿ ಹೃದಯ ಸಂಬಂಧಿ ಖಾಯಿಲೆಗಳನ್ನು ತರುತ್ತದೆ. ಕರಿದ ಆಲೂಡ್ಡೆಯಲ್ಲಿ ಆಕ್ರಾಲಮೈಡ್‌ ಇರುವುದರಿಂದ ಅದು ಕ್ಯಾನ್ಸರ್‌ನ ಸಂಭಾವ್ಯ ಹೆಚ್ಚಿಸುತ್ತದೆ.

ಇದನ್ನೂ ಓದಿ: Yoga For Children : ನಿಮ್ಮ ಮಕ್ಕಳ ಬುದ್ಧಿಮಟ್ಟ ಹೆಚ್ಚಬೇಕೆ? ಈ ಐದು ಯೋಗಾಸನ ಹೇಳಿ ಕೊಡಿ


(World Health Day 2022 Avoid these unhealthy foods)

Comments are closed.