ಡಿಜಿಟಲ್​ ಆರ್ಥಿಕತೆಯಲ್ಲಿ ಮಹಾನ್​ ಕ್ರಾಂತಿ : ವಿಶ್ವದಲ್ಲೇ ಅತಿ ಹೆಚ್ಚು ಎಐ ಪ್ರತಿಭೆ ಹೊಂದಿದ 2ನೇ ದೇಶ ಭಾರತ

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರಗಳಿಗಿಂತಲೂ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ. 'ICRIER-ಪ್ರೊಸಸ್ ಸೆಂಟರ್' ಬಿಡುಗಡೆ ಮಾಡಿರುವ 'ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ' ವಾರ್ಷಿಕ ವರದಿಯು ಭಾರತದ ಈ ಅಭೂತಪೂರ್ವ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರಗಳಿಗಿಂತಲೂ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ. ‘ICRIER-ಪ್ರೊಸಸ್ ಸೆಂಟರ್’ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ’ ವಾರ್ಷಿಕ ವರದಿಯು ಭಾರತದ ಈ ಅಭೂತಪೂರ್ವ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.

ವಿಶ್ವದ ಒಟ್ಟು ಜಿಡಿಪಿಯಲ್ಲಿ ಶೇ. 96ರಷ್ಟು ಪಾಲು ಹೊಂದಿರುವ 71 ಪ್ರಮುಖ ದೇಶಗಳ ಡಿಜಿಟಲ್ ಬೆಳವಣಿಗೆಯನ್ನು ಈ ವರದಿಯಲ್ಲಿ ಪರಾಮರ್ಶಿಸಲಾಗಿದೆ. ಕಳೆದ 2025ರ ಜಾಗತಿಕ ಡಿಜಿಟಲ್ ಆರ್ಥಿಕತೆಯ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿದ್ದ ಭಾರತ, ಕೇವಲ ಒಂದೇ ವರ್ಷದ ಅವಧಿಯಲ್ಲಿ ಭಾರಿ ಪ್ರಗತಿ ಸಾಧಿಸುವ ಮೂಲಕ 5ನೇ ಸ್ಥಾನಕ್ಕೆ ಜಿಗಿದು ಐತಿಹಾಸಿಕ ದಾಖಲೆ ಬರೆದಿದೆ. ಸಾಫ್ಟ್‌ವೇರ್, ಐಟಿ ಸೇವೆಗಳು ಹಾಗೂ ಕ್ಲೌಡ್ ಸಿಸ್ಟಮ್‌ಗಳಂತಹ ಸುಧಾರಿತ ಡಿಜಿಟಲ್ ಸೇವೆಗಳನ್ನು ರಫ್ತು ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಇದರಿಂದ ಬರೋಬ್ಬರಿ ಸುಮಾರು 31 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಪ್ರಸ್ತುತ ಜಗತ್ತಿನಲ್ಲೇ 5ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕೇವಲ ಅಮೆರಿಕ, ಚೀನಾ ಮತ್ತು ಸಿಂಗಾಪುರ ಮಾತ್ರ ಭಾರತಕ್ಕಿಂತ ಮುಂದಿವೆ. ತಾಂತ್ರಿಕವಾಗಿ ಅತ್ಯಂತ ಮುಂದುವರಿದ ದೇಶಗಳಾದ ಜರ್ಮನಿ, ಫ್ರಾನ್ಸ್, ಜಪಾನ್, ಯುಕೆ ಮತ್ತು ಕೆನಡಾದಂತಹ ಬಲಿಷ್ಠ ರಾಷ್ಟ್ರಗಳನ್ನು ಭಾರತ ಈ ರೇಸ್‌ನಲ್ಲಿ ಹಿಂದಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸ್ತುತ ಇಡೀ ವಿಶ್ವದಲ್ಲಿ ಅಮೆರಿಕದ ನಂತರ ಅತಿ ಹೆಚ್ಚು ‘AI ಪ್ರತಿಭೆಗಳು ಇರುವುದು ಭಾರತದಲ್ಲೇ ಆಗಿದೆ.

Also Read: ವಾಹಿನಿಗಳ ಜಾಹೀರಾತು ಅಬ್ಬರಕ್ಕೆ ಬ್ರೇಕ್​ : ವೀಕ್ಷಕರಿಗೆ ಬಿಗ್​ ರಿಲೀಫ್​

ಭಾರತವು ಜಾಗತಿಕ ಮಟ್ಟದ AI ಬಳಕೆಯಲ್ಲಿ ಶೇ. 26ರಷ್ಟು ದೊಡ್ಡ ಪಾಲನ್ನು ಹೊಂದಿದ್ದರೂ, ಜಾಗತಿಕ ಖಾಸಗಿ AI ಹೂಡಿಕೆಯಲ್ಲಿ ದೇಶದ ಪಾಲು ಕೇವಲ ಶೇ. 1 ರಷ್ಟಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಪ್ರತಿಭೆಗಳಿದ್ದರೂ ಅವರಿಗೆ ಆರ್ಥಿಕ ಬೆಂಬಲ ನೀಡಬಲ್ಲ ದೊಡ್ಡ ಬಂಡವಾಳ ಮತ್ತು ಹೈ-ಟೆಕ್ ಇನ್‌ಫ್ರಾಸ್ಟ್ರಕ್ಚರ್ ಕೊರತೆ ಎದ್ದುಕಾಣುತ್ತಿದೆ. ಇದರೊಂದಿಗೆ, ಡಿಜಿಟಲೀಕರಣದ ವೇಗ ಹೆಚ್ಚಾದಂತೆ ಆನ್‌ಲೈನ್ ಹಣಕಾಸು ಅಪರಾಧಗಳು ಹಾಗೂ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು, ಭಾರತವು ತಂತ್ರಜ್ಞಾನದ ಪ್ರಗತಿಯ ಜೊತೆಗೆ ಸೈಬರ್ ಭದ್ರತೆಗೂ ಸಮಾನ ಒತ್ತು ನೀಡಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Great revolution in the digital economy India is the 2nd country with the most AI talent in the world

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories